HomeNationalCrime News: ಗೆಳತಿಯೊಂದಿಗೆ ಚಾಟ್ ಮಾಡಿದ್ದಕ್ಕೆ16 ವರ್ಷದ ಯುವಕನ ಕೊಲೆ ಮಾಡಿದ ಅಪ್ರಾಪ್ತ….!

Crime News: ಗೆಳತಿಯೊಂದಿಗೆ ಚಾಟ್ ಮಾಡಿದ್ದಕ್ಕೆ16 ವರ್ಷದ ಯುವಕನ ಕೊಲೆ ಮಾಡಿದ ಅಪ್ರಾಪ್ತ….!

ಇಂದಿನ ಯುವಜನತೆ ಸೋಷಿಯಲ್ ಮಿಡಿಯಾಗೆ ತುಂಬಾನೆ ಅಡಿಕ್ಟ್ ಆಗಿದ್ದಾರೆ ಎಂದೇ ಹೇಳಬಹುದಾಗಿದೆ. ಸೋಷಿಯಲ್ ಮಿಡಿಯಾದ ಕಾರಣದಿಂದ ಅನೇಕ ಜಗಳಗಳು, ಕೊಲೆಗಳು ನಡೆದಿರುವ ಬಗ್ಗೆ ಹಲವು ಸುದ್ದಿಗಳನ್ನು ಕೇಳಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನ ಸ್ನೇಹಿತೆಯೊಂದಿಗೆ ಇನ್ಸ್ಟಾಗ್ರಾಂ ನಲ್ಲಿ ಚಾಟ್ ಮಾಡಿದ್ದಕ್ಕಾಗಿ 16 ವರ್ಷದ ಇನ್ಸ್ಟಾಗ್ರಾಂ ಸ್ನೇಹಿತನನ್ನೇ ಕೊಲೆ (Crime News) ಮಾಡಿದ ಘಟನೆಯೊಂದು ನಡೆದಿದೆ. ಅಂದಹಾಗೆ ಕೊಲೆ ಮಾಡಿದ ಹುಡುಗ ಅಪ್ರಾಪ್ತನಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಗುರುಗ್ರಾಮದ ಸೆಕ್ಟರ್‍ 40 ಪ್ರದೇಶದಲ್ಲಿ ಬಾಲಕನೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿದಾನೆ ಎಂಬ ಸುದ್ದಿ ಪೊಲೀಸರಿಗೆ ತಿಳಿದಿದೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ಆಸ್ಪತ್ರೆಗೆ (Crime News) ಸಾಗಿಸಿದ್ದರು. ಆದರೆ ಮಾರ್ಗಮಧ್ಯೆಯೇ ಆ ಬಾಲಕ ಮೃತಪಟ್ಟಿದ್ದಾನೆ. ತನ್ನ ಗೆಳತಿಯೊಂದಿಗೆ ಇನ್ಸ್ಟಾಗ್ರಾಂ ನಲ್ಲಿ ಚಾಟ್ ಮಾಡಿದ್ದಕ್ಕಾಗಿ 16 ವರ್ಷದ ಇನ್ಸ್ಟಾ ಸ್ನೇಹಿತನನ್ನು 15 ವರ್ಷದ ಹುಡುಗ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದ್ದು, ಅಪ್ರಾಪ್ತನನ್ನು ಗುರುಗ್ರಾಮದ ಕ್ರೈಂ ವಿಭಾಗದ ಪೊಲೀಸರ ತಂಡ ಬಂಧನ ಮಾಡಿದೆ.

15 years boy killed other boy 0

ಇನ್ನೂ ಕೊಲೆ ಆರೋಪಿ ಅಪ್ರಾಪ್ತನನ್ನು ಬಂಧಿಸಿದ ಪೊಲೀಸರು ಆತನನ್ನು ವಿಚಾರಣೆ ಮಾಡಿದ್ದಾರೆ. ವಿಚಾರಣೆಯ ವೇಳೆ ಆತ ಕೊಲೆ (Crime News) ಮಾಡಿದ ಕಾರಣದ ಬಗ್ಗೆ ತಿಳಿಸಿದ್ದಾನೆ. ನಾನು ಹಾಗೂ ಮೃತ ಪಟ್ಟ ಯುವಕ ಝಾರ್ಸಾ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇವು. ಇನ್ಸ್ಟಾಗ್ರಾಂ ನಲ್ಲಿ ಸ್ನೇಹಿತರಾಗಿದ್ದೆವು. ಆ ಯುವಕ ಕಳೆದ ಒಂದೂವರೆ ವರ್ಷದ ಹಿಂದೆ ಇನ್ಸ್ಟಾ ದಲ್ಲಿ ಹುಡುಗಿಯೊಬ್ಬಳೊಂದಿಗೆ ಸ್ನೇಹ ಬೆಳೆಸಿದ್ದ. ಬಳಿಕ ಆ ಬಾಲಕಿ ಸಹ ಆರೋಪಿಯ ಜೊತೆ ಮಾತನಾಡುತ್ತಿದ್ದಳು. ಬಳಿಕ ಆರೋಪಿಗೆ ತನ್ನ ಗೆಳತಿ ಕೊಲೆಯಾದ ಹುಡುಗನಿಗೂ ಸ್ನೇಹಿತೆ ಎಂದು ತಿಳಿದುಬಂದಿತ್ತಂತೆ. ಈ ಕಾರಣದಿಂದ ಆರೋಪಿ ಮೃತ ಬಾಲಕನೊಂದಿಗೆ ದ್ವೇಷ ಬೆಳೆಸಿಕೊಂಡನಂತೆ. ಈ ಕಾರಣದಿಂದ ಅವನನ್ನು ಕೊಲೆ ಮಾಡಲು ಪ್ಲಾನ್ ಮಾಡಿ, ಬುಧವಾರ 150 ರೂಪಾಯಿ ಕೊಟ್ಟು ಚಾಕು ಖರೀದಿ ಮಾಡಿದ್ದಾನೆ. ಬಳಿಕ ಬಿಯರ್ ಕುಡಿಯುವ ನೆಪದಲ್ಲಿ ಮೃತ ಯುವಕನಿಗೆ ಕರೆ ಮಾಡಿ ಕರೆದು ಈ ಸಮಯದಲ್ಲಿ ಚಾಕುವಿನಿಂದ ಇರಿದು (Crime News) ಪರಾರಿಯಾಗಿದ್ದ ಎಂದು ವಿಚಾರಣೆಯ ವೇಳೆ ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular