HomeNationalDog Love: ಸಾಕು ನಾಯಿ ಹುಟ್ಟುಹಬ್ಬಕ್ಕೆ ಬರೊಬ್ಬರಿ 2.5 ಲಕ್ಷ ಬೆಲೆಯ ಬಂಗಾರು ಚೈನ್ ಗಿಫ್ಟ್...

Dog Love: ಸಾಕು ನಾಯಿ ಹುಟ್ಟುಹಬ್ಬಕ್ಕೆ ಬರೊಬ್ಬರಿ 2.5 ಲಕ್ಷ ಬೆಲೆಯ ಬಂಗಾರು ಚೈನ್ ಗಿಫ್ಟ್ ಕೊಟ್ಟ ಮಹಿಳೆ…..!

ಹುಟ್ಟುಹಬ್ಬದ ಆಚರಣೆಗಳು ನಮ್ಮಲ್ಲಿ ಆಗಾಗ ನಡೆಯುತ್ತಿರುತ್ತವೆ. ತಮ್ಮ ಪ್ರೀತಿ ಪಾತ್ರರ ಹುಟ್ಟುಹಬ್ಬದಂದು ಬೆಲೆ ಬಾಳುವಂತಹ ಗಿಫ್ಟ್ ಗಳನ್ನು ನೀಡುತ್ತಿರುತ್ತಾರೆ. ಇದೀಗ ಇಲ್ಲೊಬ್ಬರು ಶ್ವಾನ ಪ್ರೇಮಿ ತನ್ನ ಪ್ರೀತಿಯಿಂದ ಸಾಕಿದ ನಾಯಿಯ (Dog Love) ಹುಟ್ಟುಹಬ್ಬಕ್ಕೆ ಬೆಲಾಬಾಳುವಂತಹ ಬಂಗಾರದ ಚೈನ್ ಗಿಫ್ಟ್ ಆಗಿ ಕೊಟ್ಟಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡು‌ತ್ತಿದೆ. ಜೊತೆಗೆ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

women celebrate dog birthday 1

ಸಾಮಾನ್ಯವಾಗಿ ಕೆಲವರು ತಮ್ಮ ಸಾಕು ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿರುತ್ತಾರೆ. ಸಾಕು ಪ್ರಾಣಿಗಳಿಗೆ ಹುಟ್ಟುಹಬ್ಬಗಳನ್ನು ಮಾಡುತ್ತಿರುತ್ತಾರೆ. ಕೆಲವರು ಮದುವೆ ಸಹ ಮಾಡಿಸಿದ ಘಟನೆಗಳು ನೋಡಿದ್ದೇವೆ. ಅದೇ ರೀತಿ ಮಹಿಳೆಯೊಬ್ಬರು ತಮ್ಮ ಸಾಕು ನಾಯಿಯ ಹುಟ್ಟುಹಬ್ಬದಂದು ಮಗುವಿನಂತೆ ನಾಯಿಗೆ ಸ್ನಾನ ಮಾಡಿಸಿ, ಜುವೆಲ್ಲರಿ ಶಾಪ್ ಗೆ ಕರೆದುಕೊಂಡು ಹೋಗಿ ಗಂಟೆ ಗಟ್ಟಲೇ ಶಾಪಿಂಗ್ ಮಾಡಿ ಒಂದು ಗೋಲ್ಡ್ ಚೈನ್ ಖರೀದಿಸಿ ಅದರ ಕತ್ತಲ್ಲಿ ಹಾಕಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಮುಂಬೈನ ಚೆಂಬೂರು ಏರಿಯಾದಲ್ಲಿ ನಡೆದಿದೆ. ಸರಿತಾ ಸಲ್ದಾನ್ಹಾ ಎಂಬ ಮಹಿಳೆ ನಾಯಿಯೊಂದನ್ನು ಸಾಕಿದ್ದಾಳೆ. ಅದಕ್ಕೆ ಟೈಗರ್‍ ಎಂದು ಹೆಸರಿಟ್ಟು ತುಂಬಾ ಪ್ರೀತಿಯಿಂದ (Dog Love) ಬೆಳೆಸುತ್ತಿದ್ದಾಳೆ.

https://www.instagram.com/p/C8RlfMtSJ53/

ಕಳೆದ ತಿಂಗಳು ಟೈಗರ್‍ ಹುಟ್ಟುಹಬ್ಬ ಬಂದಿದ್ದು, ಈ ಹುಟ್ಟುಹಬ್ಬವನ್ನು ಸರಿತಾ ತುಂಬಾ ಅದ್ದೂರಿಯಾಗಿ ನಿರ್ವಹಿಸಲು ತೀರ್ಮಾನಿಸಿದ್ದಳು. ಬಳಿಕ ಆಕೆ ನಗರದಲ್ಲಿರುವ ಜುವೆಲ್ಲರಿ ಶಾಪ್ ಗೆ ಕರೆದುಕೊಂಡು ಹೋಗಿದ್ದಾಳೆ. ಹುಟ್ಟುಹಬ್ಬಕ್ಕೆ ಟೈಗರ್‍ ಗೆ ದುಬಾರಿ ಗಿಫ್ಟ್ ಕೊಡಿಸಿದ್ದಾಳೆ. 35 ಗ್ರಾಂಗಳ ಗೋಲ್ಡ್ ಚೈನ್ ಅನ್ನು 2.5 ಲಕ್ಷ ರೂಪಾಯಿಗಳು ಕೊಟ್ಟು ಖರೀದಿಸಿ ತನ್ನ ಟೈಗರ್‍ ಗೆ (Dog Love) ಹಾಕಿದ್ದಾಳೆ. ಬಳಿಕ ಅದರೊಂದಿಗೆ ಆಟವಾಡುತ್ತಾ ತುಂಬಾ ಎಂಜಾಯ್ ಮಾಡಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಸದ್ಯ ಈ ವಿಡಿಯೋಗೆ ಲಕ್ಷಗಟ್ಟಲೇ ವ್ಯೂವ್ಸ್, ಲೈಕ್ ಗಳು ಹರಿದುಬರುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular