Wife – ಹೆಂಡ್ತಿ ಅಂದ್ರೆ ಹೀಗರಬೇಕು ನೋಡ್ರಪ್ಪ, ಇಬ್ಬರು ಪತ್ನಿಯರು ಸೇರಿ ಗಂಡನಿಗೆ ಮೂರನೇ ಮದುವೆ ಮಾಡಿಸಿದ್ರು….!

Wife – ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ ಘಟ್ಟ ಎಂದೇ ಹೇಳಬಹುದು. ಒಮ್ಮೆ ಮದುವೆಯಾದರೇ ಸಾಮಾನ್ಯವಾಗಿ ತನ್ನ ಗಂಡನ ಜೊತೆ ಬೇರೆ ಮಹಿಳೆ ಇರೋದು ಊಹಿಸಿಕೊಳ್ಳಲು ಸಹ ಪತ್ನಿ ಇಷ್ಟಪಡೊಲ್ಲ ಎನ್ನಬಹುದು.  ಆದರೆ ಇಲ್ಲೊಂದು ಅದಕ್ಕೆ ತದ್ವಿರುದ್ದವಾದ ಘಟನೆಯೊಂದು ನಡೆದಿದೆ. ಓರ್ವ ವ್ಯಕ್ತಿಗೆ ಈಗಾಗಲೇ 2 ಮದುವೆಯಾಗಿದ್ದು, ಇದೀಗ ತನ್ನ ಇಬ್ಬರೂ ಹೆಂಡತಿಯರೂ ಸೇರಿ ಮತ್ತೋಂದು ಮದುವೆ ಮಾಡಿಸಿದ ಆಶ್ಚರ್ಯಕರವಾದ ಘಟನೆಯೊಂದು ನಡೆದಿದೆ.

2 wifes did marriage to husband 1

ಅಂದಹಾಗೆ ಈ ಘಟನೆ ನಡೆದಿರೋದು ಆಂಧ್ರಪ್ರದೇಶದಲ್ಲಿ. ಈಗಾಗಲೇ ಇಬ್ಬರು ಹೆಂಡತಿಯರ ಮುದ್ದಿನ ಗಂಡನಿಗೆ ಮತ್ತೊಂದು ಮದುವೆ ಮಾಡಿದ್ದಾರೆ. ಆಂಧ್ರಪ್ರದೇಶದ ಮೂಲದ ಸಗೇಣಿ ಪಾಂಡಣ್ಣ ಎಂಬ ವ್ಯಕ್ತಿಗೆ ಎರಡು ಮದುವೆಯಾಗಿದ್ದು, ತನ್ನ ಇಬ್ಬರು ಹೆಂಡತಿಯರು ಸೇರಿ ಮೂರನೇ ಮದುವೆ ಮಾಡಿಸಿದ್ದಾರೆ. ಜೊತೆಗೆ ಈ ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಗುಲ್ಲೇಲು ಗ್ರಾಮದ ಸಗೇಣಿ ಪಾಂಡಣ್ಣ ರವರು ಕಳೆದ 2000 ರಲ್ಲಿ ಪಾವರ್ತಮ್ಮ ಎಂಬುವವರು ಮೊದಲ ಮದುವೆಯಾದರು. ಬಳಿಕ 2007 ರಲ್ಲಿ ಅಪ್ಪಲಮ್ಮ ಎಂಬುವವರ ಜೊತೆಗೆ ಎರಡನೇ ಮದುವೆಯಾದರು. ಈ ಮದುವೆಗೆ ಪಾರ್ವತಮ್ಮ ಸಹ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಮಕ್ಕಳಿಲ್ಲದ ಕಾರಣ ಈ ಮದುವೆಗೆ ಪಾರ್ವತಮ್ಮ ಒಪ್ಪಿಗೆ ಸೂಚಿಸಿದ್ದರು.

2 wifes did marriage to husband 0

ಇನ್ನೂ ಪಾಂಡಣ್ಣ ಎರಡನೇ ಪತ್ನಿ ಅಪ್ಪಲಮ್ಮಗೆ ಮಗು ಜನಿಸಿತು. ಇದೀಗ ಮತ್ತೊಂದು ಮಗು ಬೇಕೆಂದು ಹೆಂಡತಿಯರ ಬಳಿ ಹೇಳಿದಕ್ಕೆ ಪಾರ್ವತಮ್ಮ ಹಾಗೂ ಅಪ್ಪಲಮ್ಮ ಸೇರಿಕೊಂಡು ಗಂಡನಿಗೆ ಮೂರನೇ ಮದುವೆ ಮಾಡಿಸಲು ತೀರ್ಮಾನಿಸಿದ್ದರಂತೆ. ಅದರಂತೆ ಪಾಂಡಣ್ಣ ಮೂರನೇ ಮದುವೆ ಜೂನ್ 25, 2024 ರಂದು ಎಲ್ಲರ ಒಪ್ಪಿಗೆಯ ಮೇರೆಗೆ ಎರಡೂ ಕಡೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ. ಇನ್ನೂ ಈ ಸುದ್ದಿ ಎಲ್ಲಾ ಕಡೆ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ಸ್ಥಳಿಯರು ಸಹ ಈ ಕುರಿತು ಮಾತನಾಡಿದ್ದು, ಕೆಲವೊಂದು ಬುಡಕಟ್ಟು ಜನಾಂಗಗಳಲ್ಲಿ ಎರಡು ಬಾರಿ ಮದುವೆಯಾಗುವ ಸಂಪ್ರದಾಯವಿದೆ. ಆದರೆ ಮೂರನೇ ಮದುವೆಯಾಗುವುದು ಬಹಳ ಅಪರೂಪ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *

Scroll to Top