Aadhar – ಆಧಾರ್ ಕಾರ್ಡ್ ತೆಗೆಸಿಕೊಳ್ಳಲು ಹೋದ ಪುಟ್ಟ ಮಗುವಿನ ಕ್ಯೂಟ್ ಸ್ಮೈಲ್, ವೈರಲ್ ಆದ ವಿಡಿಯೋ….!

Aadhar – ದೇಶದಲ್ಲಿ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಆಧಾರ್‍ ಕಾರ್ಡ್ ಎಂಬುದು ಬೇಕಿದೆ. ಸಾಮಾನ್ಯವಾಗಿ ಆಧಾರ್‍ ಕಾರ್ಡ್ ಪೊಟೋ ತೆಗೆದ ಬಳಿಕ ಆ ಪೊಟೋ ಮತ್ತೆ ನೋಡಲು ಬಯಸೋದು ತುಂಬಾನೆ ಕಡಿಮೆ. ಇದೀಗ ಪುಟಾಣಿ ಮಗುವೊಂದು ಯಾವುದೇ ಅರಿವಿಲ್ಲದೇ ಆಧಾರ್‍ ಕಾರ್ಡ್ ಪೊಟೋ ತೆಗೆಸೋಕೆ ಹೋಗಿ ವಿವಿಧ ರೀತಿಯ ಪೋಸ್ ಕೊಟ್ಟಿದ್ದಾಳೆ. ಇದೀಗ ಪುಟಾಣಿ ಮಗುವಿನ ಕ್ಯೂಟ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುಟಾಣಿ ಮಗು 20 ಕ್ಕೂ ಹೆಚ್ಚು ರೀತಿಯ ಪೋಸ್ ಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದ್ದು, ಆಧಾರ್‍ ತೆಗೆಯುವ ಸಿಬ್ಬಂದಿ ಮಾತ್ರ ಆಧಾರ್‍ ಕಾರ್ಡ್‌ನಲ್ಲಿ ಯಾವ ಪೊಟೋ ಹಾಕಬೇಕೆಂದು ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Kid Gives Cute Poses During AadharCard 1

ಸರ್ಕಾರದ ಅಧಿಕೃತ ದಾಖಲೆಗಳು, ವೋಟರ್‍ ಐಡಿ, ಆಧಾರ್‍ ಕಾರ್ಡ್ ಗಳಿಗೆ ಪೊಟೋ ತೆಗೆಯವುದು ಕಡ್ಡಾಯವಾಗಿರುತ್ತದೆ. ಆದರೆ ಪುಟಾಣಿ ಮಕ್ಕಳ  ಪೊಟೋ ತೆಗೆಯುವುದು ತುಂಬಾನೆ ಕಷ್ಟ ಎಂದೇ ಹೇಳಬಹುದು. ಅದರಲ್ಲೂ ಆಧಾರ್‍ ಕಾರ್ಡ್ ತೆಗೆಯುವಾಗ ಮಕ್ಕಳು ಅಳುವುದು, ಬೇರೆ ಕಡೆ ನೋಡುವುದು ಮಾಡುತ್ತಿರುತ್ತಾರೆ. ಆದರೆ ಇಲ್ಲೊಂದು ಮಗು ವಿವಿಧ ರೀತಿಯ ಪೋಸ್ ಗಳನ್ನು ಕೊಟ್ಟಿದ್ದಾಳೆ. ಶಾಲೆಯ ದಾಖಲಾಯಿ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಮಕ್ಕಳಿಗೂ ಸಹ ಆಧಾರ್‍ ಕಾರ್ಡ್ ಬೇಕಾಗಿದೆ. ಈ ಕಾರಣದಿಂದ ಮಗುವನ್ನು ತಮ್ಮ ಪೋಷಕರು ಮಗಳನ್ನು ಕರೆದುಕೊಂಡು ಆಧಾರ್‍ ಕಾರ್ಡ್ ಸೆಂಟರ್‍ ಗೆ ತೆರಳಿದ್ದರು. ಈ ವೇಳೆ ಮಗುವನ್ನು ಆಧಾರ್‍ ಕಾರ್ಡ್ ತೆಗೆಯಲು ಕ್ಯಾಮೆರಾ ಕಡೆ ನೋಡಲು ಹೇಳಿದ್ದಾರೆ. ಪೊಟೋ ತೆಗೆಯುತ್ತಾರೆ ಕ್ಯಾಮೆರಾ ಕಡೆ ನೋಡು ಎಂದು ಆಧಾರ್‍ ಸಿಬ್ಬಂದಿ ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ: https://www.instagram.com/p/C8vu2waS_EW/

ಇನ್ನೂ ಮಗು ಪೊಟೋ ಎಂದ ಕೂಡಲೇ ಅಲರ್ಟ್ ಆಗಿದೆ. ಒಂದೊಂದು ರೀತಿಯ ಪೋಸ್ ನೀಡಿದ್ದಾಳೆ. ಯಾವ ಹಿರೋಯಿನ್ ಗೂ ಕಡಿಮೆ ಯಿಲ್ಲವೆಂಬಂತೆ ಬಾಲಕಿ ಪೋಸ್ ಕೊಟ್ಟಿದ್ದಾಳೆ.  ಆಧಾರ್‍ ಸಿಬ್ಬಂದಿ ಮಾತ್ರವಲ್ಲದೇ ಅಲ್ಲಿದ್ದ ಬೇರೆಯವರಿಗೂ ಸಹ ಆ ಮಗುವಿನ ಪೋಸ್ ತುಂಬಾ ಇಷ್ಟವಾಗಿದೆ. ಈ ಪುಟಾಣಿಯ ಪೋಸ್ ಗಳನ್ನು ವಿಡಿಯೋ ಮಾಡಲಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಈ ವಿಡಿಯೋ ವನ್ನು ಹಂಚಿಕೊಂಡಿದ್ದಾರೆ. ಮಗುವಿನ ಮನೆಯಲ್ಲಿ ಸದಾ ಪ್ರೀತಿಯೇ ತುಂಬಿದೆ. ಆದ್ದರಿಂದ ಮಗುವಿನ ಮುಖದಲ್ಲಿ ಪ್ರೀತಿ, ನಗು ತುಂಬಿದೆ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು ಈ ಮಗು ತುಂಬಾ ಮುದ್ದಾಗಿ ಪೋಸ್ ಕೊಟ್ಟಿದೆ. ಸರ್ಕಾರ ಈ ಮಗುವನ್ನೇ ಆಧಾರ್‍ ವೆಬ್ ಸೈಟ್ ನಲ್ಲಿ ಹಾಕಿ ಎಂತಲೂ ಸಲಹೆ ನೀಡಿದ್ದಾರೆ.

Leave a Comment

Your email address will not be published. Required fields are marked *

Scroll to Top