Sad – ಹೋಮ್ ವರ್ಕ್ ಮಾಡುತ್ತಿದ್ದ ಯುಕೆಜಿ ಮಗುವಿಗೆ ಪೆನ್ ಚುಚ್ಚಿ ಸಾವು…..!

Sad – ಸಾವು ಯಾರಿಗೆ ಯಾವಾಗ ಬರುತ್ತದೆ ಎಂಬುದು ಗೊತ್ತಾಗೋಲ್ಲ. ಕೆಲವೊಮ್ಮೆ ಯಾರಿಗೂ ತಿಳಿಯದೇ ಸಾವು ಸಂಭವಿಸುತ್ತಿರುತ್ತದೆ. ಅಂತಹುದೇ ಘಟನೆಯೊಂದು ನಡೆದಿದೆ. 5 ವರ್ಷ ಪುಟ್ಟ ಮಗುವೊಂದು ಹೋಮ್ ವರ್ಕ್ ಮಾಡುತ್ತಿದ್ದಾಗ ಪೆನ್ ತಲೆಗೆ ಚುಚ್ಚಿಕೊಂಡು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಗು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

ಈ ಘಟನೆ ತೆಲಂಗಾಣದ ಭದ್ರಾದ್ರಿ ಕೊತ್ತಗುಡ್ಡಂ ಜಿಲ್ಲೆಯ ಭದ್ರಾಚಲಂ ನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಮೃತ ಬಾಲಕಿಯನ್ನು ರಿಯಂಶಿಕಾ (5) ಎಂದು ಗುರ್ತಿಸಲಾಗಿದೆ. ಮೃತ ಬಾಲಕಿ ಯುಕೆಜಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಶಾಲೆಯಿಂದ ಮನೆಗೆ ವಾಪಸ್ಸು ಬಂದ ಬಾಲಕಿ ಮನೆಯಲ್ಲಿ ಮಂಚದ ಮೇಲೆ ಕುಳಿತುಕೊಂಡು ಹೋಮ್ ವರ್ಕ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕಳೆದ ಸೋಮವಾರ ಸಂಜೆ ಶಾಲೆಯಿಂದ ಬಂದ ಬಾಲಕಿ ಮಂಚದ ಮೇಲೆ ಕುಳಿತು ಹೋಮ್ ವರ್ಕ್ ಮಾಡುತ್ತಿರುತ್ತಾಳೆ. ಈ ಸಮಯದಲ್ಲಿ ದುರದೃಷ್ಟಾವಶಾತ್ ಮಗು ಸಾವನ್ನಪ್ಪುತ್ತದೆ.

ukg girl die 0

ಮೃತ ರಿಯಂಶಿಕಾ ಶಾಲೆಯಿಂದ ಮನೆಗೆ ಬಂದು ಮಂಚದ ಮೇಲೆ ಕುಳಿತು ಹೋಮ್ ವರ್ಕ್ ಮಾಡುತ್ತಿದ್ದಾಗ ಮಂಚದ ಮೇಲಿಂದ ಹಠಾತ್ ಕೆಳಗೆ ಬಿದ್ದಿದ್ದಾಳೆ. ಈ ಸಮಯದಲ್ಲಿ ಆಕೆಯ ಕೈಯಲ್ಲಿಯೇ ಇದ್ದ ಪೆನ್ ಆಕೆಯ ತಲೆಗೆ ಚುಚ್ಚಿದೆ. ಕೂಡಲೇ ಆಕೆಯ ಕುಟುಂಬಸ್ಥರು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಆಕೆಗೆ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಸರ್ಜರಿ ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೇ ಮಗು ಮಂಗಳವಾರ ಇಹಲೋಕ ತ್ಯೆಜಿಸಿದ್ದಾಳೆ. ನೂರು ವರ್ಷ ಬದುಕಿ ಬಾಳಬೇಕಾದ ಮಗು ಸಣ್ಣ ವಯಸ್ಸಿನಲ್ಲೆ ಮೃತಪಟ್ಟಿದ್ದಾರೆ. ಇನ್ನೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a Comment

Your email address will not be published. Required fields are marked *

Scroll to Top