Tuesday, July 1, 2025
HomeNationalT20 World Cup ಗೆದ್ದ ಸಂತೋಷವನ್ನು ಪತ್ನಿಗೆ ವಿಡಿಯೋ ಕಾಲ್ ಮಾಡಿ ಸಂತಸ ಹಂಚಿಕೊಂಡ ಕೊಹ್ಲಿ,...

T20 World Cup ಗೆದ್ದ ಸಂತೋಷವನ್ನು ಪತ್ನಿಗೆ ವಿಡಿಯೋ ಕಾಲ್ ಮಾಡಿ ಸಂತಸ ಹಂಚಿಕೊಂಡ ಕೊಹ್ಲಿ, ವೈರಲ್ ಆದ ಪೊಟೋ….!

ಬಾರ್ಬಡೋಸ್​ನಲ್ಲಿ ನಡೆದ ರಣರೋಚಕ ಟಿ20 ವಿಶ್ವಕಪ್ ಫೈನಲ್ (T20 World Cup 2024) ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ 17 ವರ್ಷಗಳ ಬಳಿಕ ಭಾರತ ತಂಡವು 2ನೇ ಬಾರಿಗೆ ಟಿ20 ವಿಶ್ವಕಪ್​ ಅನ್ನು ಎತ್ತಿ ಹಿಡಿದಿದೆ. ಈ ಸಂಭ್ರಮವನ್ನು ಇಡೀ ಭಾರತ ಸಂಭ್ರಮಿಸುತ್ತಿದೆ. ಈ ಸಂತೋಷವನ್ನು ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಹಂಚಿಕೊಂಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Virat kohli t20 win wife and kids reactions 1

ಶನಿವಾರ ಬಾರ್ಬಡೋಸ್ ನಲ್ಲಿರುವ ಬ್ರಿಡ್ಜ್ ಟೌನ್ ನಲ್ಲಿರುವ ಕೆನ್ಸಿಂಗ್ವನ್ ಓವಲ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ದ ಟೀಂ ಇಂಡಿಯಾ ಫೈನಲ್ ಮ್ಯಾಚ್ ಆಡಿತ್ತು. ಈ ಪಂದ್ಯ ರಣರೋಚಕವಾಗಿದ್ದು, ದಕ್ಷಿಣ ಆಫ್ರಿಕಾವನ್ನು ಟಿಂ ಇಂಡಿಯಾ ಸೋಲಿಸಿತು. ಗೆಲುವಿನ ಬಳಿಕ ವಿರಾಟ್ ಕೊಹ್ಲಿ ತಮ್ಮ ಆಟಗಾರರನ್ನು ಅಭಿನಂದಿಸುತ್ತಾ ಭಾವುಕರಾದರು. ನಂತರ ಮೈದಾನದಿಂದಲೇ ತಮ್ಮ ಪತ್ನಿ ಅನುಷ್ಕಾ ಶರ್ಮಾ ಗೆ ವಿಡಿಯೋ ಕಾಲ್ ಮಾಡಿ ಮಕ್ಕಳೊಂದಿಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ಅನುಷ್ಕಾ ಮತ್ತು ಮಕ್ಕಳಾದ ವಾಮಿಕಾ ಹಾಗೂ ಅಕಾಯ್ ರೊಂದಿಗೆ ವಿಡಿಯೋ ಕಾಲ್ ನಲ್ಲಿ ತುಂಟಾಟದ ಫ್ಲೈಯಿಂಗ್ ಕಿಸ್ ಗಳನ್ನು ನೀಡಿದ್ದಾರೆ. ಪತ್ನಿಯ ಜೊತೆಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಅನುಷ್ಕಾ ಶರ್ಮಾ ಸಹ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿ ಪತಿಯನ್ನು ಹೊಗಳಿದ್ದಾರೆ.

ಈ ಪೋಸ್ಟ್ ನೋಡಲು ಕ್ಲಿಕ್ ಮಾಡಿ:  https://x.com/narendramodi/status/1807284461140430943

ಇನ್ನೂ ಪ್ರಧಾನಿ ನರೇಂದ್ರ ಮೋದಿ ಟೀಂ ಇಂಡಿಯಾ ಆಟಗಾರರನ್ನು ಅಭಿನಂಧಿಸಿದ್ದಾರೆ. ತಂಡದ ಆಟಗಾರರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿ ಎಲ್ಲರಿಗೂ ಶುಭ ಕೋರಿದ್ದಾರೆ. ಇಡೀ ಟೂರ್ನಿಯ ಕ್ಯಾಪ್ಟೆನ್ಸಿ ವಹಿಸಿದ್ದ ರೋಹಿತ್ ಶರ್ಮಾ ರವರನ್ನು ಶ್ಲಾಘಿಸಿದ್ದಾರೆ. ಫೈನಲ್ ಮ್ಯಾಚ್ ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿ ಪಂದ್ಯ ಶ್ರೇಷ್ಟ ಎನಿಸಿದ ವಿರಾಟ್ ಕೊಹ್ಲಿ ಹಾಗೂ ಭಾರತೀಯ ಕ್ರಿಕೆಟ್ ಗೆ ಕೊಹ್ಲಿಯವರ ಕೊಡುಗೆಯನ್ನು ನರೇಂದ್ರ ಮೋದಿ ಮೆಚ್ಚಿ ಕೊಂಡಾಡಿದ್ದಾರೆ. ಫೈನಲ್ ಮ್ಯಾಚ್​ನ ಫೈನಲ್ ಓವರ್​ನಲ್ಲಿ ಮ್ಯಾಚ್ ವಿನ್ನಿಂಗ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ, ಪಂದ್ಯದ ಪ್ರಮುಖ ಹಂತದಲ್ಲಿ ಬೌಂಡರಿ ಲೈನ್​ನಲ್ಲಿ ಬಹಳ ಅದ್ಭುತ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್ ಅವರನ್ನೂ ಹಾಗೂ ಸೋಲಿನ ಸುಳಿಯಲ್ಲಿದ್ದಾಗ ತಮ್ಮ ಎರಡನೇ ಸ್ಪೆಲ್​ನಲ್ಲಿ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ ಫಾಸ್ಟ್ ಬೌಲರ್ ಜಸ್​ಪ್ರೀತ್ ಬುಮ್ರಾ ಅವರನ್ನೂ ಪ್ರಧಾನಿ ಮೆಚ್ಚಿಕೊಂಡಿದ್ದಾರೆ. ಜತೆಗೆ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಪಾತ್ರವನ್ನೂ ಅವರು ಗುರುತಿಸಿದ್ದಾರೆ.

Virat kohli t20 win wife and kids reactions 0

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular