ದರ್ಶನ್ ಕೇಸ್ ಬಗ್ಗೆ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ: ಹಣೆಬರಹ, ಏನೂ ಮಾಡೋಕೆ ಆಗಲ್ಲ ಎಂದ ಶಿವಣ್ಣ….!

ರೇಣುಕಾಸ್ವಾಮಿ ಕೊಲೆ ಪ್ರಕರಣದ ನಿಮಿತ್ತ ಸ್ಟಾರ್‍ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಜೈಲಿನಲ್ಲಿದ್ದಾರೆ. ಕನ್ನಡದ ನಟ ದರ್ಶನ್ ಕೊಲೆ ಪ್ರಕರಣದಡಿ ಜೈಲಿನಲ್ಲಿರುವುದು ಅವರ ಆಪ್ತರಿಗೆ ಬೇಸರದ ವಿಚಾರವಾಗಿದೆ. ಈಗಾಗಲೇ ಕೆಲ ನಟ-ನಟಿಯರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ದರ್ಶನ್ ರನ್ನು ಭೇಟಿಯಾಗಿ ಬರುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನ ಹಿರಿಯ ನಟ ಶಿವರಾಜ್ ಕುಮಾರ್‍ ಸಹ ದರ್ಶನ್ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

shivarajkumar raction about darshan case 0

ಕನ್ನಡ ಸಿನಿರಂಗದ ಹಿರಿಯ ನಟ ಶಿವರಾಜ್ ಕುಮಾರ್‍ ಎಲ್ಲರ ಕಲಾವಿದರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ನಿರ್ಮಾಪಕರ ಸಂಘದ ಹೊಸ ಕಟ್ಟಡದ ಉದ್ಘಾಟನೆಯ ಕಾರ್ಯಕ್ರಮದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡುತ್ತಾ ದರ್ಶನ್ ಪ್ರಕರಣದ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ಇಂತಹ ಘಟನೆಗಳು ಆಗುತ್ತವೆ, ಏನು ಮಾಡೋಕೆ ಆಗೊಲ್ಲ. ಹಣೆಬರಹ ಅನ್ನೊಂದು ಒಂದು ಇರುತ್ತದೆ. ಆ ವಿಚಾರ ಬಂದಾಗ ನಾವು ಏನನ್ನೂ ಮಾಡೋಕೆ ಆಗೊಲ್ಲ. ಆದರೆ ಮಾತನಾಡೋಕೆ ಹೋದರೂ, ನಾವು ಮಾಡುತ್ತರಿಉವುದು ಸರಿಯಾಗಿದೆಯಾ ಎಂಬುದನ್ನು ಮೊದಲು ಯೋಚಿಸಬೇಕು. ಅದನ್ನು ಬಿಟ್ಟು ನಾವು ಏನನ್ನೂ ಹೇಳೋಕೆ ಆಗಲ್ಲ ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

darshan case 14 days judicial custody 1

ಇನ್ನೂ ಈ ರೀತಿಯಾದಾಗ ನೋವಾಗುತ್ತದೆ. ಯಾಕಪ್ಪಾ ಈ ರೀತಿಯೆಲ್ಲಾ ಆಗುತ್ತದೆ ಎಂದು ಬೇಸರವಾಗುತ್ತದೆ. ರೇಣುಕಾಸ್ವಾಮಿ ಕುಟುಂಬ ಹಾಗೂ ದರ್ಶನ್ ರವರ ಕುಟುಂಬಕ್ಕೆ ನೋವಾಗುತ್ತದೆ. ನಾವು ಎಲ್ಲವನ್ನೂ ಎದುರಿಸಬೇಕು. ಈಗಾಗಲೇ ತನಿಖೆ ನಡೆದಾಗಿದೆ. ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಏನಾಗಬೇಕೋ ಅದೇ ಆಗುತ್ತದೆ, ನ್ಯಾಯ ಏನಿದೆ ಅದೇ ಆಗುತ್ತದೆ. ಈ ಬಗ್ಗೆ ಇನ್ನೇನೂ ಹೇಳೋಕೆ ನಾನು ಇಷ್ಟಪಡಲ್ಲ, ಎಲ್ಲವೂ ಹಣೆಬರಹ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top