Sunday, August 31, 2025
HomeInternationalನಿದ್ದೆ ಮಾಡುತ್ತಿದ್ದ ಬಾಲಕ ನಿಕ್ಕರ್ ಒಳಗೆ ಸೇರಿದ ಹಾವು, ಬಳಿಕ ಏನಾಯ್ತು ಗೊತ್ತಾ?

ನಿದ್ದೆ ಮಾಡುತ್ತಿದ್ದ ಬಾಲಕ ನಿಕ್ಕರ್ ಒಳಗೆ ಸೇರಿದ ಹಾವು, ಬಳಿಕ ಏನಾಯ್ತು ಗೊತ್ತಾ?

ಹಾವುಗಳಿಗೆ ಸಂಬಂಧಿಸಿದಂತೆ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಸದ್ಯ ಮಳೆಗಾಲ ಆರಂಭವಾಗಿದ್ದು, ಹಾವುಗಳು ಮನೆಯೊಳಗೆ ಸೇರಿಕೊಳ್ಳುವಂತಹ ಸಾಧ್ಯತೆಗಳು ತುಂಬಾನೆ ಇರುತ್ತದೆ. ಬೈಕ್ ಗಳು, ಕಾರುಗಳಲ್ಲಿ ಹಾವುಗಳು ಸೇರಿಕೊಂಡಿರುವ ಘಟನೆಗಳ ಬಗ್ಗೆ ಕೇಳಿದ್ದೇವೆ. ಇದೀಗ ಹಾವೊಂದು ಬಾಲಕನ ನಿಕ್ಕರ್‍ ಒಳಗೆ ಸೇರಿಕೊಂಡಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

snake in boy innerwear 1

ಸದ್ಯ ಮಳೆಗಾಲವಾದ್ದರಿಂದ ಹಾವುಗಳು ಮನೆಗಳ ಒಳಗೆ ನುಗ್ಗುವಂತಹ ಸಾಧ್ಯತೆಯಿದೆ. ಮನೆಯೊಳಗೆ ನುಗ್ಗಿದ ಹಾವುಗಳು, ಬೈಕ್, ಕಾರು, ಶೂಗಳಲ್ಲಿ ಸೇರಿಕೊಂಡಿರುವಂತಹ ಕೆಲವೊಂದು ಘಟನೆಗಳು ನಡೆದಿದೆ. ಒಂದು ವೇಳೆ ಎಚ್ಚರಿಕೆ ತಪ್ಪಿದರೇ ಹಾವು ಕಚ್ಚುವಂತಹ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಇಲ್ಲೊಂದು ವಿಚಿತ್ರವಾದ ಘಟನೆಯೊಂದು ನಡೆದಿದೆ. ಹಾವೊಂದು ಒಂಟಿಯಾಗಿ ನಿದ್ದೆ ಮಾಡುತ್ತಿದ್ದ ಬಾಲಕ ನಿಕ್ಕರ್‍ ಒಳಗೆ ಸೇರಿಕೊಂಡಿದೆ. ಥಾಯ್ ಲ್ಯಾಂಡ್ ನ ರೆಯಾಂಗ್ ಎಂಬ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗು‌ತ್ತಿದೆ. ಗಾಢ ನಿದ್ರೆಯಲ್ಲಿದ್ದ ಬಾಲಕನಿಗೆ ಏನೋ ಹೋಗುತ್ತಿರುವುದು ಕಂಡಿದೆ. ನೋಡಿದಾಗ ಹಾವು ಕಾಣಿಸಿದೆ. ಕೂಡಲೇ ಬಾಲಕ ಶಾಕ್ ಆಗಿದ್ದಾನೆ. ಭಯದಿಂದ ನಡುಗುತ್ತಿದ್ದು, ಕದಲಿದರೇ ಹಾವು ಕಚ್ಚುತ್ತೆಂಬ ಭಯದಿಂದ ಹಾಗೆಯೇ ಇದ್ದುಬಿಟ್ಟಿದ್ದಾನೆ. ಬಳಿಕ ಜೋರಾಗಿ ಕಿರಚಾಡಿದ್ದಾನೆ. ಆತನ ಕಿರುಚಾಟ ಕೇಳಿದ ಮನೆಯವರು ಓಡಿ ಬಂದಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.instagram.com/p/C8joplfJjSe/

ಈ ಸಮಯದಲ್ಲಿ ಮನೆಯವರಿಗೆ ಏನು ಮಾಡಬೇಕೆಂದು ತೋಚದೆ, ಉರಗ ತಜ್ಞನಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಉರಗ ತಜ್ಞ ತುಂಬಾ ಎಚ್ಚರಿಕೆಯಿಂದ ಬಾಲಕ ನಿಕ್ಕರ್‍ ಒಳಗಿದ್ದ ಹಾವನ್ನು ಹೊರಗೆ ತೆಗೆದಿದ್ದಾನೆ. ಹಾವು ಬಾಲಕನಿಗೆ ಕಚ್ಚದೇ ಇದ್ದಿದ್ದರಿಂದ ಮನೆಯವರು ನಿಟ್ಟಿಸುರು ಬಿಟ್ಟಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಕಡಿಮೆ ಸಮಯಲ್ಲೆ ಭಾರಿ ವಿಕ್ಷಣೆ ಕಂಡಿದೆ. ಅನೇಕರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ನೀನು ತುಂಬಾ ಲಕ್ಕಿ, ಹಾವಿನೊಂದಿಗೆ ಈ ರೀತಿಯ ಅನುಭವ ನೆವರ್‍ ಬಿಪೋರ್‍ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular