ಸೋಷಿಯಲ್ ಮಿಡಿಯಾ ಮೂಲಕ ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಘಟನೆಗಳ ಬಗ್ಗೆ ತಿಳಿಯಬಹುದಾಗಿದೆ. ಇದೀಗ ಉತ್ತರ ಪ್ರದೇಶದ ರಸ್ತೆಯಲ್ಲಿ ಮಹಿಳೆಯೊಬ್ಬಳು ಬೆತ್ತಲೆಯಾಗಿ ಓಡಾಡಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಜನನಿಬಿಡ ಪ್ರದೇಶದಲ್ಲಿ ಮಹಿಳೆ ಯಾರ ಭಯವೂ ಇಲ್ಲದೇ ಹೋಗುತ್ತಿರುವಂತಹ 9 ಸೆಕೆಂಡ್ ಗಳ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಗರದಲ್ಲಿ ಕಳೆದ ಜೂನ್ 25 ರಂದು ನಡೆದಿದೆ ಎಂದು ತಿಳಿದುಬಂದಿದೆ.

ಓರ್ವ ಮಹಿಳೆ ಉತ್ತರ ಪ್ರದೇಶದ ಗಾಜಿಯಾಬಾದ್ ನ ಪ್ರಮುಖ ರಸ್ತೆಯಲ್ಲಿ ಜೂನ್ 25 ರಂದು ಜನಸಂದಣಿ ಇರುವಾಗಲೇ ಬೆತ್ತಲೆಯಾಗಿ ಓಡಾಡಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. 9 ಸೆಕಂಡ್ ಗಳ ಈ ವಿಡಿಯೋದಲ್ಲಿ ಮಹಿಳೆ ಬೆತ್ತಲಾಗಿ ಓಡಾಡಿದ್ದಾಳೆ. ಗಾಜಿಯಾಬಾದ್ ನ ಮೋಹನ್ ನಗರದ ಸೌರ್ಹಾ ಮುಖ್ಯ ರಸ್ತೆಯಲ್ಲಿ ಮಹಿಳೆ ಬೆತ್ತಲೆಯಾಗಿ ಓಡಾಡಿದ್ದಾಳೆ. ಈ ಸಮಯದಲ್ಲಿ ಅಲ್ಲಿದ್ದ ಜನರು ಯಾರೂ ಸಹ ಆಕೆಯನ್ನು ತಡೆಯುವ ಕೆಲಸ ಮಾಡಿಲ್ಲ. ಆಕೆಯ ಸುತ್ತಾ ಜನರಿದ್ದರೂ ಯಾರೂ ಆಕೆಯನ್ನು ಪ್ರಶ್ನೆ ಮಾಡಲು ಮುಂದಾಗಿಲ್ಲ. ಈ ಮಹಿಳೆ ಹಾಗೆ ಬಂದು ಹಾಗೆ ಮಿಂಚಿನಂತೆ ಮಾಯವಾದಳು ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ಬೆತ್ತಲಾದ ಮಹಿಳೆಯ ಸುತ್ತಲೂ ಜನರು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
https://x.com/hariomydvAu1000/status/1806231499848794258
ಸದ್ಯ ಬೆತ್ತಲಾಗಿ ಓಡಾಡಿದ ಮಹಿಳೆ ಯಾರು, ಆಕೆ ಯಾವ ಕಾರಣದಿಂದ ನಡುರಸ್ತೆಯಲ್ಲಿ ಓಡಾಡಿದ್ದು ಎಂಬ ಪ್ರಶ್ನೆಗಳಿಗೆ ಇನ್ನಷ್ಟೆ ಉತ್ತರ ಸಿಗಬೇಕಿದೆ. ಘಟನೆ ನಡೆದ ಎರಡು ದಿನಗಳ ಬಳಿಕ ಮಹಿಳೆ ಬೆತ್ತಲೆಯಾದ ವಿಡಿಯೋ ಕ್ಲಿಪ್ ಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಂದಲೂ ಯಾವುದೇ ಮಾಹಿತಿ ಹೊರಬಂದಿಲ್ಲ ಎನ್ನಲಾಗಿದೆ. ಈ ಘಟನೆ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ವಿಚಾರವಾದ ಕಾರಣದಿಂದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮಹಿಳೆಯನ್ನು ಪತ್ತೆ ಮಾಡಬೇಕು ಹಾಗೂ ಆಕೆ ಈ ರೀತಿಯಲ್ಲಿ ಓಡಾಡಿದ್ದಕ್ಕೆ ಕಾರಣವಾದರೂ ಏನು ಎಂಬುದನ್ನು ಪತ್ತೆ ಹಚ್ಚಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.
