Saturday, December 6, 2025
HomeSpecialಮೈ ಮೇಲೆ ದೆವ್ವ ಬಂದಂಗೆ ವರ್ತನೆ ಮಾಡುವ ವಿದ್ಯಾರ್ಥಿನಿಯರು, ಶಾಕ್ ಆದ ಶಿಕ್ಷಕರು…!

ಮೈ ಮೇಲೆ ದೆವ್ವ ಬಂದಂಗೆ ವರ್ತನೆ ಮಾಡುವ ವಿದ್ಯಾರ್ಥಿನಿಯರು, ಶಾಕ್ ಆದ ಶಿಕ್ಷಕರು…!

ಮೈ ಮೇಲೆ ದೆವ್ವ ಬರೋದರ ಬಗ್ಗೆ ಕೇಳಿದ್ದೇವೆ, ಕೆಲವೊಬ್ಬರು ಈ ಘಟನೆಗಳನ್ನು ನೋಡಿರುತ್ತಾರೆ. ದೇವರು ಇದ್ದಾನೆ ಎಂಬುದು ಎಷ್ಟು ಸತ್ಯವೋ, ದೆವ್ವಗಳೂ ಸಹ ಇದೆ ಎಂಬುದು ಅನೇಕರ ನಂಬಿಕೆಯಾಗಿದೆ. ಇದರ ಜೊತೆಗೆ ಮೂಕಪ್ರಾಣಿಗಳ ಕಣ್ಣಿಗೆ ದೆವ್ವಗಳು, ಆತ್ಮಗಳು ಕಾಣಿಸಿಕೊಳ್ಳುತ್ತದೆ ಎಂಬ ನಂಬಿಕೆ ಸಹ ಇದೆ. ಅದಕ್ಕಾಗಿಯೇ ರಾತ್ರಿಯ ವೇಳೆ ನಾಯಿಗಳು ದೆವ್ವಗಳನ್ನು ನೋಡಿ ವಿಚಿತ್ರವಾಗಿ ಕೂಗುತ್ತವೆ ಎಂದು ಹೇಳಲಾಗುತ್ತದೆ. ಇದೀಗ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ತಮ್ಮ ಮೈಮೇಲೆ ದೆವ್ವ ಬಂದಂತೆ ಆಡಿದ್ದಾರೆ. ಇದನ್ನು ನೋಡಿದ ಶಿಕ್ಷಕರು ಶಾಕ್ ಆಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

virral school video ghost 1

ಸದ್ಯ ವೈರಲ್ ಆಗಿರುವ ವಿಡಿಯೊದಲ್ಲಿ ಕಾಣುವಂತೆ ಶಾಲೆಯೊಂದರ ವಿದ್ಯಾರ್ಥಿನಿಯರು ದೆವ್ವಗಳು ಮೈ ಮೇಲೆ ಬಂದಾಗ ಹೇಗೆ ಆಡುತ್ತಾರೋ ಅದೇ ರೀತಿಯಲ್ಲಿ ಆಡುತ್ತಿದ್ದಾರೆ. ಏಕಾಏಕಿ ಶಾಲಾ ಕೊಠಡಿಗಳಿಂದ ಕಿರುಚುತ್ತಾ ಹೊರಬಂದು ನೆಲದ ಮೇಲೆ ಒರಳಾಡುತ್ತಿದ್ದಾರೆ. ಮೈ ಮೇಲೆ ದೆವ್ವ ಬಂದವರಂತೆ ವಿಚಿತ್ರವಾಗಿ ವರ್ತನೆ ಮಾಡಿದ್ದಾರೆ. ವಿದ್ಯಾರ್ಥಿನೀಯರು ಏಕಾಏಕಿ ಈ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಂತೆ ಶಿಕ್ಷಕರು ಹಾಗೂ ಉಳಿದ ವಿದ್ಯಾರ್ಥಿಗಳು ಶಾಕ್ ನಿಂದ ನೋಡುತ್ತಾ ನಿಂತಿದ್ದಾರೆ. ಈ ವಿಡಿಯೋದಲ್ಲಿ ವಿದ್ಯಾರ್ಥಿಗಳ ಮೈ ಮೇಲೆ ದೆವ್ವ ಬಂದಿರುವಂತೆ ಆಡುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ:  https://www.instagram.com/p/C8o2Yy6PpnW/

ಈ ವಿಡಿಯೋವನ್ನು Its me basu ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಾವಿರಗಟ್ಟಲೇ ವ್ಯೂಸ್ ಕಂಡಿದೆ. ಜೊತೆಗೆ ಅನೇಕರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಅದರಲ್ಲೊಬ್ಬರು ಶಾಲೆಗೆ ಹೋಗಲು ಇಷ್ಟವಿಲ್ಲದ ಕಾರಣದಿಂದ ಈ ರೀತಿಯ ನಾಟಕ ಆಡುತ್ತಿದ್ದಾರೆ. ಭೂತಾನು ಇಲ್ಲ, ದೆವ್ವಾನೂ ಇಲ್ಲ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ ಶಿಕ್ಷಕರು ಹೋಮ್ ವರ್ಕ್ ಮಾಡಿಲ್ಲವೇ ಎಂದು ಕೇಳಿರಬೇಕು ಅದಕ್ಕೆ ಈ ರೀತಿ ನಾಟಕ ಮಾಡುತ್ತಿದ್ದಾರೆ ಎಂತಲೂ ಮತ್ತೊಬ್ಬರು, ಹುಲಿಕಲ್ ನಟರಾಜ್ ರವರನ್ನು ಭೇಟಿ ಮಾಡಿ ಎಲ್ಲವೂ ಸರಿಹೋಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸೋಷಿಯಲ್ ಮಿಡಿಯಾದ ಪುಣ್ಯವಾ ಎಂಬಂತೆ ಇಂತಹ ವಿಚಿತ್ರ ಸನ್ನಿವೇಶಗಳನ್ನು ನಾವೆಲ್ಲ ನೋಡಬಹುದಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular