ಕೊಡಗಿನ ಶೈಲಿಯಲ್ಲಿ ಮಿಂಚಿದ ನ್ಯಾಷನಲ್ ಕ್ರಷ್ ರಶ್ಮಿಕಾ, ಸ್ನೇಹಿತೆಯ ಮದುವೆಯಲ್ಲಿ ಎಂಜಾಯ್ ಮಾಡಿದ ರಶ್ಮಿಕಾ, ವೈರಲ್ ಆದ ಪೊಟೋಸ್…!

ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣಾ ಸಾಲು ಸಾಲು ಸಿನೆಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರು ಬಿಡುವಿನ ಸಮಯದಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಸಹ ಹಂಚಿಕೊಳ್ಳುವ ಮೂಲಕವೂ ಸಹ ಸುದ್ದಿಯಾಗುತ್ತಿರುತ್ತಾರೆ. ಸದ್ಯ ಸೌತ್ ಅಂಡ್ ನಾರ್ತ್‌ನಲ್ಲಿ ಪುಲ್ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇದೀಗ ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ಪೊಟೋಗಳು ವೈರಲ್ ಆಗುತ್ತಿವೆ.

Rashmika mandanna kodagu style pics 2

ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೊಡಗಿನ ಬೆಡಗಿ ರಶ್ಮಿಕಾ ಕಡಿಮೆ ಸಮಯದಲ್ಲೇ ಸ್ಟಾರ್‍ ಆಗಿಬಿಟ್ಟರು. ಇದೀಗ ಆಕೆ ನ್ಯಾಷನಲ್ ಕ್ರಷ್ ಎಂಬ ಬಿರುದು ಪಡೆದುಕೊಂಡು ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಸದ್ಯ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾಗೆ ಬಿಡುವು ಸಿಗೋದು ತುಂಬಾನೆ ಕಷ್ಟ ಎಂದು ಹೇಳಬಹುದಾಗಿದೆ. ಈ ನಡುವೆ ಆಕೆ ತಮ್ಮ ಆಪ್ತ ಸ್ನೇಹಿತೆಯ ಮದುವೆಯ ನಿಮಿತ್ತ ಕೊಡಗಿಗೆ ಬಂದಿದ್ದಾರೆ. ಸಿನೆಮಾಗಳ ನಿಮಿತ್ತ ಮುಂಬೈ, ಹೈದರಾಬಾದ್, ವಿದೇಶಗಳತ್ತ ತಿರುಗಾಡುತ್ತಿದ್ದ ರಶ್ಮಿಕಾ ಕೆಲಸಕ್ಕೆ ಬ್ರೇಕ್ ಕೊಟ್ಟು ಸ್ನೇಹಿತೆಯ ಮದುವೆಗೆ ಹಾಜರಾಗಿದ್ದಾರೆ. ಈ ಸಂಬಂಧ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ, ಸ್ನೇಹಿತೆಗೆ ಸ್ಪೇಷಲ್ ಆಗಿ ಶುಭ ಕೋರಿದ್ದಾರೆ ಜೊತೆಗೆ ತನ್ನ ಊರನ್ನು ಆಕೆ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸಹ ತಿಳಿಸಿದ್ದಾರೆ.

ಮದುವೆಯ ಸಂಬಂಧ ಬ್ಲೂ ಕಲರ್‍ ಸೀರೆಯಲ್ಲಿ ಮಿಂಚಿದ್ದಾರೆ. ಕೊಡಗಿನ ಶೈಲಿಯಲ್ಲಿ ನೀಲಿ ಕಲರ್‍ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಈ ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಕೊಡಗು ನನ್ನ ಹೃದಯದಲ್ಲಿರುವ ಸ್ಥಳ. ಇವತ್ತು ನನ್ನ ಸ್ನೇಹಿತೆಯರ ಜೊತೆ ಇದ್ದೇನೆ. ಆದರೆ ವಧು ಯಾತ್ರಾ ಮದುವೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ನೀವು ಹಾಗೂ ನಿಮ್ಮ ಸಂಗಾತಿ ಜೀವನಪೂರ್ತಿ ಖುಷಿ ಹಾಗೂ ಆರೋಗ್ಯದಿಂದ ಇರಲಿ ಎಂದು ಬಯಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಕೊಡಗು ಶೈಲಿಯಲ್ಲಿ ರಶ್ಮಿಕಾ ಮಿಂಚಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ, ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

Rashmika mandanna kodagu style pics 0

ಇನ್ನೂ ಕೊನೆಯದಾಗಿ ರಶ್ಮಿಕಾ ಅನಿಮಲ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಕಳೆದ ವರ್ಷ ಡಿಸೆಂಬರ್‍ ಮಾಹೆಯಲ್ಲಿ ಬಿಡುಗಡೆಯಾಗಿತ್ತು. ಜೊತೆಗೆ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿತ್ತು. ಇದೀಗ ಆಕೆಯ ಕೈಯಲ್ಲಿ ಮತಷ್ಟು ಬಿಗ್ ಬಜೆಟ್ ಸಿನೆಮಾಗಳಿವೆ. ಅದರಲ್ಲಿ ಬಹುನಿರೀಕ್ಷಿತ ಪುಷ್ಪಾ-2 ಸಿನೆಮಾ ಇದ್ದು, ಈ ಸಿನೆಮಾದ ಬಳಿಕ ರಶ್ಮಿಕಾ ಕ್ರೇಜ್ ದುಪ್ಪಟ್ಟಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ದಿ ಗರ್ಲ್ ಫ್ರೆಂಡ್, ಛಾವಾ, ರೈನ್ ಬೋ ಸೇರಿದಂತೆ ಮತಷ್ಟು ಸಿನೆಮಾಗಳು ಆಕೆಯ ಕೈಯಲ್ಲಿವೆ.

Leave a Comment

Your email address will not be published. Required fields are marked *

Scroll to Top