HomeNationalವೃದ್ದನ ಕಸ ಆಯುವ ವಿಡಿಯೋ ವೈರಲ್, ಮನನೊಂದು ಆತ್ಮಹತ್ಯೆ ಮಾಡಿಕೊಂಡ ವೃದ್ದ…..!

ವೃದ್ದನ ಕಸ ಆಯುವ ವಿಡಿಯೋ ವೈರಲ್, ಮನನೊಂದು ಆತ್ಮಹತ್ಯೆ ಮಾಡಿಕೊಂಡ ವೃದ್ದ…..!

ಇಂದಿನ ಸೋಷಿಯಲ್ ಮಿಡಿಯಾ ಜಮಾನದಲ್ಲಿ ಎಲ್ಲವನ್ನೂ ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ರೀತಿ ಮಾಡಿದ್ದರಿಂದ ಕೆಲವರು ರಾತ್ರೋ ರಾತ್ರಿ ಫೇಮಸ್ ಆಗಿಬಿಡುತ್ತಾರೆ. ಕೆಲವರಂತೂ ಸ್ಟಾರ್‍ ಗಳಾಗಿಬಿಟ್ಟಿದ್ದಾರೆ. ಆದರೆ ಇಲ್ಲಿ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ವಿಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ವೃದ್ದನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹೌದು ಕಸ ಆಯುತ್ತಿರುವ ವೃದ್ದನೊಬ್ಬನ ವಿಡಿಯೋ ವನ್ನು ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು, ಈ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗಿದ್ದರಿಂದ ವೃದ್ದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ನಡೆದಿರೋದು ರಾಜಸ್ಥಾನದಲ್ಲಿ. ಅನೇಕರು ಸೋಷಿಯಲ್ ಮಿಡಿಯಾದ ಮೂಲಕವೇ ಫೇಮಸ್ ಆಗಿದ್ದಾರೆ. ಸೋನು ಮಂಡಲ್, ಕಚ್ಚ ಬಾದಂ ತಾತ ಹೀಗೆ ಅನೇಕರು ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಟಿದ್ದಾರೆ. ಆದರೆ ಖ್ಯಾತಿಯ ಜೊತೆಗೆ ಕುಖ್ಯಾತಿಯೂ ಸಹ ಹಿಂದೆನೇ ಬರುತ್ತದೆ. ಅಮಾಯಕ ವೃದ್ದ ಕಸ ಆಯುತ್ತಿರುವ ವಿಡಿಯೋವನ್ನು ಯಾರೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು, ಈ ವಿಡಿಯೋ ಆ ವೃದ್ದನ ಪ್ರಾಣ ತೆಗೆದಿದೆ ಎಂದೇ ಹೇಳಬಹುದಾಗಿದೆ.

old man sucide for trolling 1

ರಾಜಸ್ಥಾನದ ಹಳ್ಳಿಯೊಂದರಲ್ಲಿ ವಾಸಮಾಡುತ್ತಿದ್ದ ವೃದ್ದನೋರ್ವ ಕಸ ಆಯುತ್ತಾ ಜೀವನ ಸಾಗಿಸುತ್ತಿದ್ದ. ಆತನ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಇದರಿಂದ ಮನನೊಂದ ವೃದ್ದ ಹೆದ್ದಾರಿ ಬಳಿಯಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮೃತ ದುರ್ದೈವಿಯನ್ನು ಪ್ರತಾಬ್ ಸಿಂಗ್ ಎಂದು ಗುರ್ತಿಸಲಾಗಿದೆ. ಈತ ಇಡೀ ಹಳ್ಳಿಯಲ್ಲಿ ತುಂಬಾನೆ ಪರಿಚಿತರಾಗಿದ್ದರಂತೆ. ಎಲ್ಲರೂ ಆತನನ್ನು ಬಾಬಾಜಿ ಎಂದು ಕರೆಯುತ್ತಿದ್ದರಂತೆ. ಲೋಹಾವತ್ ಎಂಬ ಗ್ರಾಮದ ಕೆಲವು ಯುವಕರು ಆತನ ವಿಡಿಯೋ ಮಾಡಿ ಅಪಹಾಸ್ಯ ಮಾಡಿದ್ದು, ಅವರ ವಿಡಿಯೋಗಳು ಹಾಗೂ ಮೀಮ್ಸ್ ಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರಂತೆ. ಈ ಹಿನ್ನೆಲೆಯಲ್ಲಿ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular