Friday, November 22, 2024

ಪೆಟ್ರೋಲ್-ಡೀಸೆಲ್ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ, ಗ್ಯಾರಂಟಿಗಾಗಿ ಅಲ್ಲ, ರಾಜ್ಯ ಅಭಿವೃದ್ದಿಗಾಗಿ ಬೆಲೆ ಏರಿಕೆ ಎಂದ ಸಿದ್ದು…..!

ಕೆಲವು ದಿನಗಳ ಹಿಂದೆಯಷ್ಟೆ ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು, ಈ ಸಂಬಂಧ ಬಿಜೆಪಿ ರಾಜ್ಯದಲ್ಲಿ ಪ್ರತಿಭಟನೆ ಸಹ ನಡೆಸಿದೆ. ಜೊತೆಗೆ ಗ್ಯಾರಂಟಿ ಯೋಜನೆಗಳಿಗಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದೆ ಎಂದು ಆರೋಪ ಸಹ ಮಾಡಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರೋದು ಗ್ಯಾರಂಟಿ ಯೋಜನೆಗಳಿಗಾಗಿ ಅಲ್ಲಾ, ರಾಜ್ಯದ ಅಭಿವೃದ್ದಿಗಾಗಿ ಎಂದು ಹೇಳಿದ್ದಾರೆ.

ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರದವರು ತೈಲ ದರ ಹೆಚ್ಚಿಸಿದರು. ನೂರರ ಗಡಿ ದಾಟಿಸಿದರು. ಆಗ ಮಾಧ್ಯಮವರೂ ಸೇರಿ ಯಾರೂ ಒಂದು ಪ್ರಶ್ನೆ ಸಹ ಮಾಡಿಲ್ಲ. ರಾಜ್ಯ ಸರ್ಕಾರ ಹೆಚ್ಚಳ ಮಾಡಿದ ಕೂಡಲೇ ಎಲ್ಲರೂ ಪ್ರಶ್ನೆ ಮಾಡುತ್ತಿದ್ದೀರಾ, ರಾಜ್ಯದ ಅಭಿವೃದ್ದಿಗಾಗಿ ಬೆಲೆ ಏರಿಕೆ ಮಾಡಲಾಗಿದೆ ವಿನಃ ಬೇರೆ ಉದ್ದೇಶಕ್ಕಾಗಿ ಅಲ್ಲ. ವಿರೋಧ ಪಕ್ಷ ಬೆಲೆ ಏರಿಕೆ ಬಗ್ಗೆ ಏನಾದರೂ ಹೇಳಿಕೊಳ್ಳಲಿ. ಕೇಂದ್ರ ಸರ್ಕಾರ ಮಾಡಿದ ಬೆಲೆ ಏರಿಕೆ ಬಗ್ಗೆ ಯಾರೂ ಏನು ಮಾತಾನಾಡೊಲ್ಲ. ಮನಮೋಹನ್ ಸಿಂಗ್ ರವರ ಅವಧಿಯಲ್ಲಿ ಬ್ಯಾರಲ್ ಕಚ್ಚಾ ತೈಲ ದರ 113 ಡಾಲರ್‍ ಇತ್ತು. ಅದು ಬಿಜೆಪಿ ಅವಧಿಯಲ್ಲಿ 59 ಡಾಲರ್‍ ಆಯ್ತು. ಕಾಂಗ್ರೇಸ್ ಸರ್ಕಾರ ಅವಧಿಯಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಕಡಿಮೆಯಿತ್ತು. ಆದರೆ ನರೇಂದ್ರ ಮೋದಿ ಬಂದಾಗ ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಬೊಟ್ಟು ಮಾಡಿದರು.

Siddarmaiah comments on petrol price hike 0

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗೆ ಪ್ರತಿ ವರ್ಷ ಅರವತ್ತು ಸಾವಿರ ಕೋಟಿ ಹಣ ಬೇಕಾಗುತ್ತದೆ. ಗ್ಯಾರಂಟಿಗಳನ್ನು ರದ್ದು ಮಾಡಲಿ ಅಂತಾ ಬಿಜೆಪಿಯವರು ಹೇಳಲಿ ನೋಡೋಣ. ಬಿಜೆಪಿಯವರು ಆರೋಪ ಮಾಡಿದರೇ ವಸ್ತು ಸ್ಥಿತಿ ಮೇಲೆ ಮಾಡಬೇಕು. ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರವನ್ನು ಮಾಧ್ಯಮದವರು ಪ್ರಶ್ನೆ ಮಾಡಬೇಕು. ಮೋದಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ 72 ರೂಪಾಯಿ ಇತ್ತು. ಇದೀಗ 102 ಆಗಿದೆ. ಕಚ್ಚಾ ತೈಲ ಬೆಲೆ ಕಡಿಮೆ ಆಗಿದೆ. ಆದರೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ನಾವು ಮೂರು ರೂಪಾಯಿ ಏರಿಕೆ ಮಾಡಿರೋದು ರಾಜ್ಯದ ಅಭಿವೃದ್ದಿಗಾಗಿ ಎಂದು ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

https://www.facebook.com/photo?fbid=1043733890455816&set=a.537775857718291

16ನೇ ಹಣಕಾಸು ಆಯೋಗ ಕೆಲಸ ಪ್ರಾರಂಭ ಮಾಡಿದೆ. ಆಯೋಗವು ಕೇಂದ್ರಕ್ಕೆ ಹಾಗೂ ನಮಗೆಷ್ಟು ಬರಬೇಕೆಂದು ಹಂಚಿಕೆ ಮಾಡುತ್ತದೆ. 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದಿಂದ ನಮಗೆ ಅನ್ಯಾಯವಾಗಿದೆ. ನಮಗೆ 1 ಲಕ್ಷ 87 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ತೆರಿಗೆ ಹಂಚಿಕೆ ಹಾಗೂ ತೆರಿಗೆ ಹಂಚಿಕೆಯಾಗುವ ವ್ಯಾಪ್ತಿ ಕೂಡ ಕಡಿಮೆಯಾಯಿತು. ಸೆಸ್ ಹಾಗೂ ಸರ್ಚಾಜ್ ಹೆಚ್ಚು ವಸೂಲು ಮಾಡಲು ಪ್ರಾರಂಭಿಸಿದರು. ಸೆಸ್ ಹಾಗೂ ಸರ್ಚಾಜ್ ನಲ್ಲಿ ನಮಗೆ ಪಾಲು ಬರುವುದಿಲ್ಲ. ಕೇಂದ್ರವೇ ಇಟ್ಟುಕೊಳ್ಳುತ್ತದೆ.  ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಬಳ್ಳಾರಿ ಸೇರಿದಂತೆ ಹಿಂದೆ ಇದ್ದ ಒಬ್ಬ ಸಂಸದರೂ ಬಾಯಿ ಬಿಟ್ಟಿಲ್ಲ. ಆರು ತಿಂಗಳಾದರೂ ಬರ ಪರಿಹಾರ ಕೊಡದಿದ್ದಾಗಲೂ ಒಬ್ಬರೂ ಬಾಯಿ ಬಿಡಲಿಲ್ಲ.  ಕೇಂದ್ರ ಸಚಿವೆ Nirmala Sitharaman ಅವರು ತಡೆಹಾಕಿದ್ದರಿಂದ 15 ನೇ ಹಣಕಾಸು ಆಯೋಗ 5,495 ಕೋಟಿ  ರೂ.ಗಳನ್ನು ರಾಜ್ಯಕ್ಕೆ  ಕೊಡಲಿಲ್ಲ. ಆಗಲಾದರೂ ಸಂಸದರು ಮಾತನಾಡಿದ್ದಾರೆಯೇ?

ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಟ್ ಹಾಗೂ ಕೆರೆಗಳ ಅಭಿವೃದ್ಧಿಗೆ 6000 ಕೋಟಿ ರೂ.ಗಳನ್ನು ಕೊಟ್ಟರೇ? ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಘೋಷಣೆ ಮಾಡಿದ್ದರು, ಕೊಟ್ಟರೇ? ಇದನ್ನೆಲ್ಲ ಕೇಳುವವ್ಯಾರು? ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ನಮ್ಮ ಡಿ.ಕೆ.ಸುರೇಶ್ ಒಬ್ಬರೇ ಕೇಳಿದ್ದು. ಕೇಳಿದ್ದಕ್ಕೆ ದೇಶ ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಏನೇನು ಮಾತನಾಡಿದ್ದಾರೆ ಎಂದು ಹೇಳಲೇ? ತೆರಿಗೆ ಡೀಸಲ್ ಬಗ್ಗೆ  ಏನು ಹೇಳಿದ್ದಾರೆ ಎಂದು ಹೇಳಬೇಕ? ಎಂದು ಪ್ರಶ್ನಿಸಿದ್ದಾರೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!