ಇತ್ತೀಚಿಗೆ ಅನೇಕ ಕಡೆ ಸಲಿಂಗಿಗಳ ಮದುವೆಗಳು ನಡೆಯುತ್ತಿರುವ ಬಗ್ಗೆ ಕೇಳುತ್ತಿದ್ದೇವೆ. ಅಂತಹುದೇ ವಿಚಿತ್ರ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಯುವತಿರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ತಮಗೆ ಮದುವೆ ಮಾಡುವಂತೆ ಮನವಿ ಮಾಡಿದ್ದಾರೆ. ಅವರ ಮನವಿ ಕೇಳುತ್ತಿದ್ದಂತೆ ಪೊಲಿಸರು ಶಾಕ್ ಆಗಿದ್ದಾರೆ. ಬಳಿಕ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳುವ ಕೆಲಸ ಮಾಡಿ, ಸಂತ್ವಾನ ಕೇಂದ್ರಕ್ಕೆ ಕಳುಹಿಸಿ ಕೌನ್ಸಲಿಂಗ್ ಕೊಡಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜಸ್ಥಾನದ ಪಾಲಿ ಜಿಲ್ಲೆಯ ಜೈತ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಪೊಲೀಸ್ ಠಾಣೆಗೆ ಇಬ್ಬರು ಯುವತಿಯರು ಬಂದು ತಮಗೆ ಮದುವೆ ಮಾಡಿಸುವಂತೆ ದುಂಬಾಲು ಬಿದಿದ್ದಾರೆ. ಮೂಲಗಳ ಪ್ರಕಾರ ಇಬ್ಬರು ಯುವತಿಯರು ನೆರೆಹೊರೆ ನಿವಾಸಿಗಳಾಗಿದ್ದಾರೆ. ಒಬ್ಬರಿಗೆ 20 ವರ್ಷ ಮತ್ತೊಬ್ಬರಿಗೆ 25 ವರ್ಷ. ಮೊದಲಿಗೆ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಕಾಲ ಕಳೆಯುತ್ತಿದ್ದಂತೆ ಅವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಇದಾದ ಬಳಿಕ ಇಬ್ಬರೂ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಮನೆಯವರ ಭಯದಿಂದ ಪೊಲೀಸ್ ಠಾಣೆಯ ಮೆಟ್ಟಿಲೇರಿ ಸಹಾಯ ಮಾಡುವಂತೆ ಕೋರಿದ್ದಾರೆ. ಆದರೆ ಮೊದಲು ಪೊಲೀಸರು ಇದನ್ನು ನಂಬಿರಲಿಲ್ಲ. ಅವರಿಬ್ಬರನ್ನು ಮಾತನಾಡಿಸಿದ ಬಳಿಕ ಅವರಿಗೆ ಕೌನ್ಸಿಲಿಂಗ್ ಕೊಡಿಸಲು ಪೊಲೀಸರು ಮುಂದಾದರು ಎನ್ನಲಾಗಿದೆ.
ಇಬ್ಬರೂ ಯುವತಿಯರೂ ಪೊಲೀಸ್ ಠಾಣೆಯ ಎಸ್.ಎಚ್.ಒ ಬಳಿ ಬಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ಎಸ್.ಎಚ್.ಒ ಅಧಿಕಾರಿ ತಮ್ಮ ಹಂತದಲ್ಲಿಯೇ ತಿಳಿ ಹೇಳಲು ಪ್ರಯತ್ನಿಸಿದ್ದಾರೆ. ಅಧಿಕಾರಿಯ ಮಾತನ್ನು ಕೇಳದ ಯುವತಿಯರು ಮದುವೆ ಮಾಡಿಸುವಂತೆ ದುಂಬಾಲು ಬಿದ್ದಿದ್ದಾರೆ. ಬಳಿಕ ಸುಸ್ತಾದ ಪೊಲೀಸರು ಇಬ್ಬರನ್ನು ಸಂಜೆ ಪಾಲಿನಲ್ಲಿರುವ ಮಹಿಳಾ ಸಂತ್ವಾನ ಕೇಂದ್ರಕ್ಕೆ ಕಳುಹಿಸಿ ತಜ್ಞ ವೈದ್ಯರಿಂದ ಕೌನ್ಸಲಿಂಗ್ ಕೊಡಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ.