Tuesday, July 1, 2025
HomeNationalಮಗುವನ್ನು ಎತ್ತಿಕೊಂಡು ಸಿಗರೇಟ್ ಸೇದುತ್ತಾ ರೀಲ್ಸ್ ಮಾಡಿದ ಮಹಿಳೆ, ನೆಟ್ಟಿಗರ ಆಕ್ರೋಷ….!

ಮಗುವನ್ನು ಎತ್ತಿಕೊಂಡು ಸಿಗರೇಟ್ ಸೇದುತ್ತಾ ರೀಲ್ಸ್ ಮಾಡಿದ ಮಹಿಳೆ, ನೆಟ್ಟಿಗರ ಆಕ್ರೋಷ….!

ಇತ್ತೀಚಿಗೆ ಸೋಷಿಯಲ್ ಮಿಡಿಯಾ ಮೂಲಕ ಫೇಮಸ್ ಆಗಲು ಇನ್ನಿಲ್ಲದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಕೆಲವರಂತೂ ಸಾರ್ವಜನಿಕ ಪ್ರದೇಶದಲ್ಲಿಯೇ ಅಸಹ್ಯವಾಗಿ ರೀಲ್ಸ್ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಅಂತಹುದೇ ರೀಲ್ಸ್ ಒಂದು ನೆಟ್ಟಿಗರ ಆಕ್ರೋಷಕ್ಕೆ ಕಾರಣವಾಗಿದೆ. ಮಹಿಳೆಯೊಬ್ಬಳು ಪುಟ್ಟ ಮಗುವನ್ನು ಎತ್ತಿಕೊಂಡು ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ನೆಟ್ಟಿಗರು ಸೋಷಿಯಲ್ ಮಿಡಿಯಾ ಮೂಲಕವೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾರ್ವಜನಿಕ ಪ್ರದೇಶದಲ್ಲಿ ಸಿಗರೇಟ್ ಸೇದುವುದು ನಿಷೇಧ ಮಾಡಲಾಗಿದೆ. ಜೊತೆಗೆ ಯಾರಾದರೂ ಸಿಗರೇಟ್ ಸೇದುತ್ತಿದ್ದರೇ ಅಭ್ಯಾಸವಿಲ್ಲದಂತಹವರು ಪಕ್ಕದಲ್ಲಿ ಇರೋಕೆ ಇಷ್ಟಪಡುವುದಿಲ್ಲ. ಸಿಗರೇಟ್ ಸೇದುವುವವರಿಗೆ ಮಾತ್ರ ಹಾನಿಯಾಗೋಲ್ಲ, ಬದಲಿಗೆ ಪಕ್ಕದಲ್ಲಿರುವವರೆಗೂ ಹಾನಿಕರ ಎಂಬುದು ಕೆಲವೊಂದು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಇದೀಗ ರೀಲ್ಸ್ ಹುಚ್ಚಿಯೊಬ್ಬಳು ಪುಟ್ಟ ಮಗುವನ್ನು ಎತ್ತಿಕೊಂಡು ಸಿಗರೇಟ್ ಸೇದುತ್ತಾ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಕೆಯ ಅನೇಕ ಮಹಿಳೆಯರು ಆಕೆಯ ಈ ವರ್ತನೆಯ ವಿರುದ್ದ ಕೆಂಡ ಕಾರಿದ್ದಾರೆ.

girl smoking a cigarette reels goes viral 0

ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಫೇಮಸ್ ಆಗುವ ನಿಟ್ಟಿನಲ್ಲಿ ಏನೆಲ್ಲಾ ಮಾಡುತ್ತಾರೆ ಎಂಬುದು ನಮಗೆ ತಿಳಿದೇ ಇದೆ. ರೀಲ್ಸ್ ಮಾಡಿ ಫೇಮಸ್ ಆಗಲು ಮಹಾರಾಷ್ಟ್ರದ ಮಹಿಳೆಯೊಬ್ಬಳು ರೀಲ್ಸ್ ಮಾಡಲು ಬೆಟ್ಟದ ಮೇಲೆ ಕಾರು ರಿವರ್ಸ್ ಮಾಡಲು ಹೋಗಿ ಪ್ರಪಾತದಿಂದ ಬಿದ್ದು ಪ್ರಾಣವನ್ನು ಕಳೆದುಕೊಂಡಿದ್ದಳು. ಅಂತಹ ಅನೇಕ ಘಟನೆಗಳು ನಡೆದಿದೆ. ಆದರೂ ಸಹ ಇನ್ನೂ ಕೆಲವರು ಎಚ್ಚೆತ್ತುಕೊಂಡಿಲ್ಲ ಎಂದೇ ಹೇಳಬಹುದು. ಮಹೊಳೆಯೊಬ್ಬಳು ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಸಿಗರೇಟ್ ಸೇದುತ್ತಿರುವ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ @DeepikaBhardwaj ಎಂಬ ಟ್ವಿಟ್ಟರ್ ಪೇಜ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ರೀಲ್ಸ್ ರಾಕ್ಷಸರು ಸುತ್ತಲಿನ ಮಕ್ಕಳ ಪಾಲಿಗೆ ಭಯ ಹುಟ್ಟಿಸುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಆಕೆಯ ಪ್ರೊಫೈಲ್ ಒಮ್ಮೆ ನೋಡಿದರೇ ಪ್ರೊಫೈಲ್ ತುಂಬಾ ಧೂಮಪಾನದ ದೃಶ್ಯಗಳಿವೆ. 30 ನಿಮಿಷಗಳ ಈ ವಿಡಿಯೋದಲ್ಲಿ ಮಹಿಳೆ ಮಗುವನ್ನು ಎತ್ತಿಕೊಂಡು ಒಂದು ಕೈನಲ್ಲಿ ಸಿಗರೇಟ್ ಸೇದುತ್ತಾ ಹಾಡೊಂದಕ್ಕೆ ರೀಲ್ಸ್ ಮಾಡುತ್ತಿದ್ದಾಳೆ. ಈ ಸಮಯದಲ್ಲಿ ಮಗು ಒಂದು ಮಾದರಿಯಲ್ಲಿ ಕೆಮ್ಮುವುದನ್ನು ಸಹ ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಮಕ್ಕಳನ್ನು ಸಹ ಬಿಡದೇ ಈ ರೀತಿಯ ಹಿಂಸೆ ಮಾಡುತ್ತಾ ರೀಲ್ಸ್ ಮಾಡಿದ್ದು ಸರಿಯಲ್ಲ. ಅಂತಹವರ ವಿರುದ್ದ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಅನೇಕರು ಆಗ್ರಹಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular