ಇಂದಿನ ಯುವಜನತೆ ಸೋಶಿಯಲ್ ಮೀಡಿಯಾ ಕ್ರೇಜ್ ಹಾಗೂ ಪ್ರೀತಿಯ ಅಮಲಿನಲ್ಲಿ ಎಂತೆಂತಹ ಸಾಹಸಗಳಿಗೆ ಕೈಹಾಕುತ್ತಿದ್ದಾರೆ ಎನ್ನುವುದಕ್ಕೆ ತಮಿಳುನಾಡಿನ ಪೊಳ್ಳಾಚಿಯಲ್ಲಿ ನಡೆದಿರುವ ಈ ಆಘಾತಕಾರಿ (Pollachi College Girl) ಘಟನೆಯೇ ಸಾಕ್ಷಿ. ತನ್ನ ಬಾಯ್‌ಫ್ರೆಂಡ್‌ಗೆ ಹೊಚ್ಚ ಹೊಸ ಬೈಕ್ ಉಡುಗೊರೆ ನೀಡಲೇಬೇಕೆಂಬ ಹಠಕ್ಕೆ ಬಿದ್ದ ಕಾಲೇಜು ಯುವತಿಯೊಬ್ಬಳು, ಕೊನೆಗೆ ಕಳ್ಳಿಯ ಪಟ್ಟ ಹೊತ್ತು ಜೈಲು ಸೇರಿದ್ದಾಳೆ. ತನ್ನ ಗೆಳೆಯನಿಗೆ ದುಬಾರಿ ಉಡುಗೊರೆ ಕೊಟ್ಟು ಖುಷಿಪಡಿಸಲು ಹೋಗಿ, ಇಡೀ ಸಮಾಜದ ಮುಂದೆ ತಲೆತಗ್ಗಿಸುವಂತಾದ ಈ ರೋಚಕ ಕ್ರೈಮ್ ಕಥೆಯ ಪೂರ್ಣ ವಿವರ ಇಲ್ಲಿದೆ.

Pollachi College Girl – ಅಸಲಿಗೆ ನಡೆದಿದ್ದೇನು?
ಪೊಳ್ಳಾಚಿಯ ಸರ್ಕಾರಿ ಕಲಾ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಕಾಂ (ಕಂಪ್ಯೂಟರ್ ಅಪ್ಲಿಕೇಶನ್ಸ್) ಓದುತ್ತಿರುವ 19 ವರ್ಷದ ಆರ್. ಜಾಯ್ ಪ್ರಿನ್ಸಿ ಎಂಬ ಯುವತಿಯೇ ಈ ಕೃತ್ಯದ ಪ್ರಮುಖ ಆರೋಪಿ. ಈಕೆ ಆಗಸ್ಟ್ 16 ರಂದು ಉಂಜವೇಲಂಪಟ್ಟಿ ಗ್ರಾಮದಲ್ಲಿರುವ ತನ್ನ ತಂದೆಯ ಆಪ್ತ ಸ್ನೇಹಿತ ಎಚ್. ತಮಿಳ್ ಸೆಲ್ವನ್ (59) ಅವರ ಮನೆಗೆ ತೆರಳಿದ್ದಳು.
ತಮಿಳ್ ಸೆಲ್ವನ್ ಅವರ ಮಗಳನ್ನು ಭೇಟಿ ಮಾಡುವ ಸೋಗಿನಲ್ಲಿ ಮನೆಗೆ ನುಗ್ಗಿದ ಪ್ರಿನ್ಸಿ, ಮನೆಯವರ ಕಣ್ತಪ್ಪಿಸಿ ನೇರವಾಗಿ ವಾರ್ಡ್‌ರೋಬ್ ತೆರೆದಿದ್ದಾಳೆ. ಅದರಲ್ಲಿ ಭದ್ರವಾಗಿಟ್ಟಿದ್ದ ಬರೋಬ್ಬರಿ ಒಂಬತ್ತು ಪವನ್ ತೂಕದ (Pollachi College Girl) ಚಿನ್ನಾಭರಣಗಳನ್ನು ಕದ್ದು ತನ್ನ ಬ್ಯಾಗಿನಲ್ಲಿಟ್ಟುಕೊಂಡು ಪರಾರಿಯಾಗಿದ್ದಳು. ನಂತರ ಮನೆಯಲ್ಲಿ ಒಡವೆಗಳು ಕಾಣೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ, ತಮಿಳ್ ಸೆಲ್ವನ್ ಅವರು ತಕ್ಷಣವೇ ಪೊಳ್ಳಾಚಿ ಪೂರ್ವ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
9 ಪವನ್ ಆಭರಣ 2.5 ಲಕ್ಷಕ್ಕೆ ಮಾರಾಟ: ಪ್ರಿಯಕರನಿಗೆ ಹೊಚ್ಚ ಹೊಸ ಬೈಕ್
ಕದ್ದ ಒಡವೆಗಳನ್ನು ತೆಗೆದುಕೊಂಡು ನೇರವಾಗಿ ಪೊಳ್ಳಾಚಿಯ ಸ್ಥಳೀಯ ಚಿನ್ನದ ಅಂಗಡಿಗೆ ತೆರಳಿದ ಪ್ರಿನ್ಸಿ, ಅದನ್ನು ಅಂದಾಜು ₹2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಳು. ಆ ಹಣವನ್ನು ತನ್ನ 20 ವರ್ಷದ ಪ್ರಿಯಕರ, ಮಕ್ಕಿನಂಪಟ್ಟಿ ನಿವಾಸಿ ಜನಗನ್ ಶಿವನ ಕೈಗಿಟ್ಟು ಆತನಿಗೆ ಇಷ್ಟವಾದ ಬ್ರಾಂಡ್ ನ್ಯೂ ಬೈಕ್ ಖರೀದಿಸಿದ್ದಾಳೆ. (Pollachi College Girl) ತನ್ನ ಗೆಳೆಯನ ಮುಖದಲ್ಲಿ ನಗು ನೋಡಲು ಬೇರೆಯವರ ಮನೆಯ ಆಭರಣಗಳನ್ನೇ ಬಲಿಕೊಟ್ಟಿದ್ದ ಈಕೆ, ಮುಂದಾಗುವ ಅನಾಹುತದ ಕಿಂಚಿತ್ತೂ ಕಲ್ಪನೆಯಿಲ್ಲದೆ ಬೈಕ್ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಳು. Read this also : ಪತಿ ಮತ್ತು ಪ್ರಿಯಕರ ಇಬ್ಬರ ಜೊತೆಯೂ ಇರುತ್ತೇನೆಂದ ಪತ್ನಿ! ಒಪ್ಪಿದ ಗಂಡ: ಇದು ಸೀತಾಪುರದ ವಿಚಿತ್ರ ಸ್ಟೋರಿ…!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ವಿಡಿಯೋ ಮತ್ತು ರೀಲ್ಸ್
ಬೈಕ್ ಡೆಲಿವರಿ ಪಡೆಯುವ ಸಮಯದಲ್ಲಿ ಶೋರೂಮ್‌ನಲ್ಲೇ ಇಬ್ಬರೂ ಸೇರಿ ಭರ್ಜರಿಯಾಗಿ ಸಂಭ್ರಮಾಚರಣೆ (Pollachi College Girl) ನಡೆಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ, ಆ ಕ್ಷಣಗಳನ್ನು ಸೆರೆಹಿಡಿದು ರೀಲ್ಸ್ ಮತ್ತು ಫೋಟೋಗಳನ್ನಾಗಿ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋಗಳು (Video Link Here) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿ, ಸ್ಥಳೀಯವಾಗಿ ವೈರಲ್ ಆಗುತ್ತಿದ್ದಂತೆ ಪೊಲೀಸರ ಕೈಗೂ ಸಿಕ್ಕಿಬಿದ್ದಿದೆ. ಇದೇ ದೃಶ್ಯಾವಳಿಗಳು ಕೊನೆಗೆ ಪೊಲೀಸರಿಗೆ ಈ ಕಳ್ಳತನದ ಜಾಲವನ್ನು ಭೇದಿಸಲು ಪ್ರಮುಖ ಸುಳಿವಾಗಿ ಪರಿಣಮಿಸಿತು.
ಖಾಕಿ ಬಲೆಗೆ ಬಿದ್ದ ಯುವತಿ, ಪರಾರಿಯಾದ ಪ್ರಿಯಕರ
ದೂರಿನ ಮೇರೆಗೆ ತನಿಖೆ ಚುರುಕುಗೊಳಿಸಿದ ಪೊಲೀಸರು ಪ್ರಿನ್ಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ತಪ್ಪೊಪ್ಪಿಕೊಂಡು ನಡೆದ ಸತ್ಯವನ್ನೆಲ್ಲ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಪೊಲೀಸರು (Pollachi College Girl) ಆಕೆಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರ ಆದೇಶದಂತೆ ಆಕೆಯನ್ನು ಕೊಯಮತ್ತೂರು ಕೇಂದ್ರ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮತ್ತೊಂದೆಡೆ, ಉಡುಗೊರೆ ಪಡೆದು ಸಂಭ್ರಮಿಸಿದ್ದ ಆಕೆಯ ಪ್ರಿಯಕರ ಜನಗನ್ ಶಿವ ವಿಷಯ ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.
