ದೆಹಲಿಯ ರೋಹಿಣಿ ಸೆಕ್ಟರ್ 18–19ರಲ್ಲಿ ನಡೆದ ರಸ್ತೆ ಜಗಳದ (Delhi Road Rage Incident) ಭೀಕರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೇವಲ ಒಂದು ಸಣ್ಣ ಬೈಕ್ ಅಪಘಾತದ ವಿಚಾರಕ್ಕೆ ಆರಂಭವಾದ ಗಲಾಟೆ, ಕೊನೆಗೆ ಉಬರ್ ಬೈಕ್ ಟ್ಯಾಕ್ಸಿ ಚಾಲಕನ ತಲೆಗೆ ಹೆಲ್ಮೆಟ್ನಿಂದಲೇ ಬಲವಾಗಿ ಹೊಡೆಯುವ ಮಟ್ಟಿಗೆ ಹೋಗಿದೆ. ಸದ್ಯ ಈ ವಿಡಿಯೋ ಇಂಟರ್ನೆಟ್ನಲ್ಲಿ ತಲ್ಲಣ ಮೂಡಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

Delhi Road Rage Incident – ಅಸಲಿಗೆ ಅಲ್ಲಿ ನಡೆದಿದ್ದೇನು?
ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬರು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಆಕೆ ಶೂಟಿಂಗ್ ಮುಗಿಸಿ ಮೆಟ್ರೋ ನಿಲ್ದಾಣಕ್ಕೆ ಹೋಗಲು ಉಬರ್ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಆದರೆ ದಾರಿಯಲ್ಲಿ ಹೋಗುವಾಗ ಇವರ ಉಬರ್ ಬೈಕ್ ಮತ್ತೊಂದು ಮೋಟಾರ್ ಸೈಕಲ್ಗೆ ಸಣ್ಣದಾಗಿ ಡಿಕ್ಕಿಯಾಗಿದೆ. ಯುವತಿಯ ಪ್ರಕಾರ, ತಪ್ಪು ಇಬ್ಬರು ಸವಾರರದ್ದೂ ಇತ್ತು. ಇದನ್ನು ಆರಾಮಾಗಿ ಮಾತನಾಡಿ ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಎದುರಿಗಿದ್ದ ವ್ಯಕ್ತಿ ತಕ್ಷಣವೇ ಬೈಕ್ನಿಂದ ಇಳಿದು ಬಂದು ಜಗಳ ಆರಂಭಿಸಿದ್ದಾನೆ. Read this also : ಹಸಿದ ಹೊಟ್ಟೆಗೆ ಅನ್ನ ನೀಡಿದ ಬೆಂಗಳೂರಿನ ಉಬರ್ ಚಾಲಕ! ಮುಂಬೈ ಮಹಿಳೆಯ ಮನ ಗೆದ್ದ ಕನ್ನಡಿಗನ ವಿಡಿಯೋ ವೈರಲ್..!
ತಲೆಗೆ ಹೆಲ್ಮೆಟ್ನಿಂದಲೇ ಹೊಡೆದ ಕಿರಾತಕ!
ವಿಡಿಯೋದ ಆರಂಭದಲ್ಲೇ ಕಾಣಿಸುವಂತೆ, ಆ ವ್ಯಕ್ತಿ ಎಲ್ಲಿಲ್ಲದ (Delhi Road Rage Incident) ಕೋಪದಿಂದ ಉಬರ್ ಚಾಲಕನ ತಲೆಗೆ ಹೆಲ್ಮೆಟ್ನಿಂದ ಭೀಕರವಾಗಿ ಜಜ್ಜಿದ್ದಾನೆ. ಹೊಡೆದ ರಭಸಕ್ಕೆ ಹೆಲ್ಮೆಟ್ ಚೂರು ಚೂರಾಗಿದೆ. ಇಷ್ಟೇ ಅಲ್ಲದೆ, ಆ ಹೆಲ್ಮೆಟ್ನ ಚೂರುಗಳು ಬೈಕ್ನ ಹಿಂದೆ ಕುಳಿತಿದ್ದ ಯುವತಿಯ ಮೇಲೂ ಬಿದ್ದಿದ್ದು, ಆಕಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ. “ಬಡಾ ಬದ್ತಮೀಜ್ ಆದ್ಮಿ ಹೈ ಯೇ” (ತುಂಬಾ ಉದ್ಧಟತನದ ಮನುಷ್ಯ ಇವನು) ಎಂದು ಯುವತಿ ಆಕ್ರೋಶ ಹೊರಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಂಬರ್ ಪ್ಲೇಟ್ ವೈರಲ್
ಈ ಘಟನೆಯ ಸಂಪೂರ್ಣ ದೃಶ್ಯವನ್ನು ಯುವತಿ ತನ್ನ ಮೊಬೈಲ್ನಲ್ಲಿ (Video Link Here) ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು “@gharkekalesh” ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಆರೋಪಿ ಸವಾರನ ಬೈಕ್ ನಂಬರ್ DL11PH6197 ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಕೇವಲ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ 13 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, (Delhi Road Rage Incident) ನೆಟ್ಟಿಗರು ದೆಹಲಿ ಪೊಲೀಸರಿಗೆ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.

ಇನ್ನೂ ಸಿಗದ ಅಧಿಕೃತ ಪ್ರತಿಕ್ರಿಯೆ
ಈ ಘಟನೆ ನಿಖರವಾಗಿ ಯಾವ ದಿನಾಂಕದಂದು (Delhi Road Rage Incident) ನಡೆದಿದೆ ಎಂಬುದು ಇನ್ನು ತಿಳಿದುಬಂದಿಲ್ಲ. ಅತ್ತ ಉಬರ್ (Uber) ಕಂಪನಿಯಾಗಲಿ ಅಥವಾ ದೆಹಲಿ ಪೊಲೀಸರಾಗಲಿ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಮಹಿಳೆಯರ ಸುರಕ್ಷತೆ ಮತ್ತು ರಸ್ತೆಗಳಲ್ಲಿ ಹೆಚ್ಚಾಗುತ್ತಿರುವ ಇಂತಹ ಅತಿರೇಕದ ವರ್ತನೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ.
