Gadag Crime : ಪ್ರೀತಿಸಿ ಮದುವೆಯಾದ ಪತಿಯನ್ನು ಬೆಡ್‌ರೂಮ್‌ನಲ್ಲೇ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದ ಹೆಂಡತಿ!

“ಪ್ರೀತಿ ಪ್ರೇಮವೆಲ್ಲಾ ಮದುವೆ ಆಗೋ ತನಕ ಮಾತ್ರನಾ?” ಎಂಬ ಪ್ರಶ್ನೆ ಮೂಡುವಂತಹ ಘಟನೆಯೊಂದು ಗದಗ ಜಿಲ್ಲೆಯಲ್ಲಿ (Gadag Crime) ನಡೆದಿದೆ. ಪ್ರೀತಿಸಿ ಹಸೆಮಣೆ ಏರಿದ್ದ ಜೋಡಿಯ ನಡುವೆ ಅದ್ಯಾಕೋ ಮದುವೆಯ ನಂತರ ಮೊದಲಿನ ಪ್ರೀತಿ ಉಳಿಯಲಿಲ್ಲ. ಸಣ್ಣಪುಟ್ಟ ಜಗಳಗಳು ವಿಕೋಪಕ್ಕೆ ತಿರುಗಿ, ಕೊನೆಗೆ ಹೆಂಡತಿಯೇ ತನ್ನ ಗಂಡನ ಪ್ರಾಣ ತೆಗೆದಿರುವ ಭೀಕರ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

Gadag Crime Love Marriage Murder Case Wife Arrested After Husband Killed In Karnataka

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೇ ತನ್ನ ಪತಿಯ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ತಾಲೂಕಿನ ರಡ್ಡೇರ ನಾಗನೂರು ಗ್ರಾಮದಲ್ಲಿ ಈ ದುರಂತ ನಡೆದಿದ್ದು, ವಿಶ್ವನಾಥ ಹಾದಿಮನಿ (29) ಕೊಲೆಯಾದ ದುರ್ದೈವಿ. ಪತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪತ್ನಿ ಕವಿತಾಳನ್ನು ನರಗುಂದ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

Gadag Crime – ಪ್ರೇಮ ವಿವಾಹವಾದರೂ ಮುಗಿಯದ ಜಗಳ!

ಸ್ಥಳೀಯ ಮೂಲಗಳ ಪ್ರಕಾರ, ವಿಶ್ವನಾಥ್ ಮತ್ತು ಕವಿತಾ ಕಳೆದ 2022 ರಲ್ಲಿ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿ ಮದುವೆಯಾಗಿದ್ದರು. ಪ್ರೇಮ ವಿವಾಹವಾಗಿದ್ದರಿಂದ ಇವರ ಸಂಸಾರ ಚೆನ್ನಾಗಿರುತ್ತದೆ ಎಂದೇ ಎಲ್ಲರೂ (Gadag Crime) ಭಾವಿಸಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಮದುವೆಯಾದ ಆರಂಭದ ದಿನಗಳಿಂದಲೇ ಇಬ್ಬರ ನಡುವೆ ಸಣ್ಣಪುಟ್ಟ ವಿಷಯಗಳಿಗೂ ಮನಸ್ತಾಪಗಳು ಶುರುವಾಗಿದ್ದವು. ದಾಂಪತ್ಯದಲ್ಲಿದ್ದ ಬಿರುಕು ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಇತ್ತು ಎನ್ನಲಾಗಿದೆ.

ತವರು ಮನೆ ಸೇರಿದ್ದ ಕವಿತಾ: ಹಿರಿಯರ ಸಂಧಾನವೂ ಫೇಲ್!

ಸದಾ ನಡೆಯುತ್ತಿದ್ದ ಕೌಟುಂಬಿಕ ಜಗಳದಿಂದ ಬೇಸತ್ತಿದ್ದ ಪತ್ನಿ ಕವಿತಾ, ಕೆಲವು ದಿನಗಳ ಹಿಂದೆ ಗಂಡನನ್ನು ಬಿಟ್ಟು ತನ್ನ ತವರು ಮನೆ ಸೇರಿದ್ದಳು. ಇತ್ತೀಚೆಗಷ್ಟೇ ಕುಟುಂಬದ ಹಿರಿಯರು ಇಬ್ಬರನ್ನೂ ಕೂರಿಸಿ (Gadag Crime) ಸಂಧಾನ ನಡೆಸಿದ್ದರು. “ಇನ್ಮುಂದೆ ಜಗಳ ಆಡದೆ ಚೆನ್ನಾಗಿ ಬಾಳಿ” ಎಂದು ಬುದ್ಧಿ ಹೇಳಿ ಕೇವಲ 15 ದಿನಗಳ ಹಿಂದಷ್ಟೇ ಕವಿತಾಳನ್ನು ಗಂಡನ ಮನೆಗೆ ಮರಳಿ ಕಳುಹಿಸಿದ್ದರು. ಆದರೆ, ಮನೆಗೆ ಬಂದ ಮೇಲೂ ಈ ದಂಪತಿಗಳ ನಡುವಿನ ಜಗಳ ಮಾತ್ರ ನಿಂತಿರಲಿಲ್ಲ.

Gadag Crime Love Marriage Murder Case Wife Arrested After Husband Killed In Karnataka

ಬೆಡ್ ರೂಂ ನಲ್ಲಿ ನಡೆದ ಭೀಕರ ಕೃತ್ಯ!

ಬುಧವಾರ ರಾತ್ರಿಯೂ ಸಹ (Gadag Crime) ಎಂದಿನಂತೆ ಪತಿ-ಪತ್ನಿಯ ನಡುವೆ ತೀವ್ರ ಸ್ವರೂಪದ ಜಗಳ ನಡೆದಿದೆ. ಈ ವೇಳೆ ತೀವ್ರ ಆಕ್ರೋಶಗೊಂಡ ಕವಿತಾ, ಪತಿ ವಿಶ್ವನಾಥ್ ಮಲಗುವ ಕೋಣೆಯಲ್ಲಿದ್ದಾಗ ರೊಚ್ಚಿಗೆದ್ದಿದ್ದಾಳೆ. ಮನೆಯಲ್ಲಿದ್ದ ಕಬ್ಬಿಣದ ಸಲಾಕೆಯನ್ನು (Iron Rod) ತಂದು ಆತನ ತಲೆ ಹಾಗೂ ದೇಹದ ಭಾಗಕ್ಕೆ ಮನಬಂದಂತೆ ಜೋರಾಗಿ ಹೊಡೆದಿದ್ದಾಳೆ. ಪತ್ನಿಯ ಭೀಕರ ಹಲ್ಲೆಯಿಂದಾಗಿ ತೀವ್ರ ರಕ್ತಸ್ರಾವಗೊಂಡು ವಿಶ್ವನಾಥ್ ಬೆಡ್ ರೂಂ ನಲ್ಲೇ ಕೊನೆಯುಸಿರೆಳೆದಿದ್ದಾರೆ. Read this also : ಮದುವೆಯಾದ 3 ತಿಂಗಳಲ್ಲೇ ಗಂಡನ ಕೊಲೆ! ಅಪಘಾತವೆಂದು ನಾಟಕವಾಡಿದ ಕಿರಾತಕಿ ಹೆಂಡತಿ ಅಂದರ್..!

ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ ತೀವ್ರ

ಘಟನೆಯ (Gadag Crime) ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನರಗುಂದ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ರಡ್ಡೇರ ನಾಗನೂರು ಗ್ರಾಮದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕೊಲೆ ಕೃತ್ಯ ಎಸಗಿದ ಪತ್ನಿ ಕವಿತಾಳನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದುಕೊಂಡಿದ್ದು, ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Leave a Comment

Your email address will not be published. Required fields are marked *

Scroll to Top