HomeNationalBrave Nashik Woman : ನಾಸಿಕ್ ಜ್ಯುವೆಲ್ಲರಿ ಶಾಪ್‌ನಲ್ಲಿ ಗನ್‌ಧಾರಿ ದರೋಡೆಕೋರರನ್ನೇ ಅಟ್ಟಾಡಿಸಿದ ಧೀರ ಮಹಿಳೆ!...

Brave Nashik Woman : ನಾಸಿಕ್ ಜ್ಯುವೆಲ್ಲರಿ ಶಾಪ್‌ನಲ್ಲಿ ಗನ್‌ಧಾರಿ ದರೋಡೆಕೋರರನ್ನೇ ಅಟ್ಟಾಡಿಸಿದ ಧೀರ ಮಹಿಳೆ! ಇಬ್ಬರು ಅರೆಸ್ಟ್

ಸಿನಿಮಾ ಸ್ಟೈಲ್‌ನಲ್ಲಿ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ದರೋಡೆಕೋರರನ್ನು ಮಹಿಳೆಯೊಬ್ಬರು ಒಂಟಿಯಾಗಿ ಎದುರಿಸಿದ ರೋಮಾಂಚನಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ. ಪ್ರಾಣದ ಹಂಗು ತೊರೆದು ಕಳ್ಳರ ಮೇಲೆ (Brave Nashik Woman) ಮುಗಿಬಿದ್ದ ಈ ಮಹಿಳೆಯ ಧೈರ್ಯಕ್ಕೆ ಈಗ ಇಂಟರ್ನೆಟ್ ಫುಲ್ ಫಿದಾ ಆಗಿದೆ. ಈ ಘಟನೆಯ ಸಿಸಿಟಿವಿ (CCTV) ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.

Brave Nashik woman confronts armed robbers during viral jewellery shop robbery incident

Brave Nashik Woman – ಘಟನೆ ನಡೆದಿದ್ದು ಎಲ್ಲಿ ಮತ್ತು ಯಾವಾಗ?

ನಾಸಿಕ್‌ನ ಸದಾ ಬ್ಯುಸಿಯಾಗಿರುವ ಹಿರಾವಾಡಿ ಪ್ರದೇಶದ ‘ನ್ಯೂ ಸಮೃದ್ಧಿ ಜ್ಯುವೆಲ್ಲರ್ಸ್’ ಅಂಗಡಿಯಲ್ಲಿ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಈ ಭೀಕರ ದರೋಡೆ ನಡೆದಿದೆ. ಪಂಚವಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗಿಯೇ ಇತ್ತು. ಅಷ್ಟರಲ್ಲೇ ಈ ದುಷ್ಕೃತ್ಯ ನಡೆದಿದ್ದು, ಇಡೀ ಭಾಗದಲ್ಲಿ ಸಾರ್ವಜನಿಕರು (Brave Nashik Woman) ಆತಂಕಗೊಂಡಿದ್ದಾರೆ.

3 ಬೈಕ್‌ಗಳಲ್ಲಿ ಬಂದ 6 ಕದೀಮರು!

ರಾತ್ರಿ ಅಂಗಡಿ ಬಂದ್ ಮಾಡಲು ಸಿಬ್ಬಂದಿ ಜ್ಯುವೆಲ್ಲರಿಗಳನ್ನು ಪ್ಯಾಕ್ ಮಾಡುತ್ತಿದ್ದರು. ಅಷ್ಟರಲ್ಲಿ ಮೂರು ಬೈಕ್‌ಗಳಲ್ಲಿ ಬಂದ ಆರು ಜನ ಮುಖವಾಡ ಧರಿಸಿದ ಸಶಸ್ತ್ರ ದರೋಡೆಕೋರರು ದಿಢೀರ್ ಅಂತ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ್ದಾರೆ. ಆ ಸಮಯದಲ್ಲಿ ಅಂಗಡಿಯಲ್ಲಿದ್ದ ಮಾಲೀಕರಾದ ನಯನಾ ಪಗಾರಿಯಾ, ಮತ್ತೊಬ್ಬ ಮಹಿಳಾ ಉದ್ಯೋಗಿ ಮತ್ತು ಅಮಿತ್ ಶ್ರೀಮಾಲಿ (Brave Nashik Woman) ಎಂಬ ಸಿಬ್ಬಂದಿಗೆ ನೇರವಾಗಿ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. “ಸೌಂಡ್ ಮಾಡಿದ್ರೆ ಶೂಟ್ ಮಾಡ್ತೀವಿ” ಎಂದು ಗನ್ ಪಾಯಿಂಟ್‌ನಲ್ಲಿ ಇಟ್ಟಿದ್ದಾರೆ.

ದರೋಡೆಕೋರರ ವಿರುದ್ಧ ಧೀರ ಮಹಿಳೆಯ ರಣಕಲಿ ಆಟ!

ಸಾಮಾನ್ಯವಾಗಿ ಕಣ್ಣೆದುರು ಗನ್ ಕಂಡರೆ ಯಾರಾದರೂ ಹೆದರಿ ಕೈ ಎತ್ತುತ್ತಾರೆ. ಆದರೆ ಅಂಗಡಿ ಮಾಲೀಕ ನಯನಾ ಪಗಾರಿಯಾ ಮಾತ್ರ ಧೈರ್ಯ ಕಳೆದುಕೊಳ್ಳಲಿಲ್ಲ. ದರೋಡೆಕೋರರು ನಯನಾ ಅವರತ್ತ ಗನ್ ಗುರಿ ಇಟ್ಟಿದ್ದರೂ, ಅವರು ಸ್ವಲ್ಪವೂ ಕದಲದೆ ಅವರನ್ನೆದುರಿಸಿದ್ದಾರೆ.

“ನಾವು ಅಂಗಡಿ ಮುಚ್ಚುವ ಮುನ್ನ ಒಡವೆಗಳನ್ನು ಬ್ಯಾಗ್‌ನಲ್ಲಿ ಇಡುತ್ತಿದ್ದೆವು. ಆಗ ಒಮ್ಮೆಲೇ ಆರು ಜನ ಗನ್ ಹಿಡಿದು ನುಗ್ಗಿದರು. ನಾನು ಹೆದರದೆ ಅವರನ್ನು ತಡೆಯಲು ಯತ್ನಿಸಿದೆ. ಕಳ್ಳರಲ್ಲೊಬ್ಬ ಫೈರಿಂಗ್ ಮಾಡಿದರೂ ನಾನು ಹಿಂದೆ ಸರಿಯಲಿಲ್ಲ” ಎಂದು ನಯನಾ ತಮ್ಮ ಧೀರ ಹೋರಾಟವನ್ನು ನೆನೆದಿದ್ದಾರೆ. ಅವರು ಅಂಗಡಿ ಕೌಂಟರ್ ಮೇಲಿದ್ದ ಸ್ಟೀಲ್ ತಟ್ಟೆ ಹಾಗೂ ಸಿಕ್ಕ ಸಿಕ್ಕ ವಸ್ತುಗಳನ್ನು ಕಳ್ಳರ ಮೇಲೆ ಬಲವಾಗಿ ಎಸೆದಿದ್ದಾರೆ. ಅಷ್ಟೇ ಅಲ್ಲ, ಕಳ್ಳರನ್ನು ಹಿಡಿಯಲು ಕೌಂಟರ್ (Brave Nashik Woman) ಮೇಲೆಯೇ ಹತ್ತಿ ಮುಗಿಬಿದ್ದಿದ್ದಾರೆ! ನಯನಾ ಅವರ ಈ ರೌದ್ರಾವತಾರ ಹಾಗೂ ಜೋರಾದ ಕಿರುಚಾಟದಿಂದ ಗಾಬರಿಯಾದ ದರೋಡೆಕೋರರು ಹೆದರಿ, ಕೆಲವು ಜ್ಯುವೆಲ್ಲರಿ ಬಾಕ್ಸ್‌ಗಳನ್ನು ಮಾತ್ರ ಎತ್ಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. Read this also : ಮಹಿಳೆಯ ಕೆಚ್ಚೆದೆಯ ನಿರ್ಧಾರ: ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಖಾಸಗಿ ಅಂಗ ಕಟ್ ಮಾಡಿದ ಮಹಿಳೆ…!

Brave Nashik woman confronts armed robbers during viral jewellery shop robbery incident

ಕಳ್ಳರ ಹಲ್ಲೆಗೆ ಸಿಬ್ಬಂದಿ ಗಂಭೀರ, ಐಸಿಯುಗೆ ದಾಖಲು

ಇದೇ ವೇಳೆ ಕಳ್ಳರನ್ನು ತಡೆಯಲು ಹೋದ ಸಿಬ್ಬಂದಿ ಅಮಿತ್ ಶ್ರೀಮಾಲಿ ಮೇಲೆ (Video link here) ದರೋಡೆಕೋರರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಕಳ್ಳರಲ್ಲೊಬ್ಬ ಪಿಸ್ತೂಲ್‌ನ ಹಿಂಭಾಗದಿಂದ (Butt) ಅಮಿತ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡ ಅಮಿತ್ ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ದರೋಡೆ ವೇಳೆ ಕಳ್ಳರು ಒಮ್ಮೆ ಗಾಳಿಯಲ್ಲಿ (Brave Nashik Woman) ಗುಂಡು ಹಾರಿಸಿದ್ದು, ಇಡೀ ಅಂಗಡಿಯಲ್ಲಿ ಯುದ್ಧಭೂಮಿಯಂಥ ವಾತಾವರಣ ನಿರ್ಮಾಣವಾಗಿತ್ತು.

ಇಬ್ಬರು ಪೊಲೀಸ್ ವಶಕ್ಕೆ, ಮಿಕ್ಕವರಿಗಾಗಿ ತಲಾಶ್

ಘಟನೆ ನಡೆದ (Brave Nashik Woman) ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ತಡರಾತ್ರಿಯೇ ತನಿಖೆ ಚುರುಕುಗೊಳಿಸಿದ ಪಂಚವಟಿ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದ ನಾಲ್ಕು ಜನ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹುಡುಕಾಟ ಮುಂದುವರಿಸಿದ್ದಾರೆ. ಜೀವದ ಹಂಗು ತೊರೆದು ಕಳ್ಳರನ್ನೇ ಬೆದರಿಸಿದ ನಯನಾ ಅವರ ಧೈರ್ಯಕ್ಕೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular