HomeTechnologyOpenAI Smartphone : ಸ್ಮಾರ್ಟ್‌ಫೋನ್ ಲೋಕದಲ್ಲಿ ಹೊಸ ಕ್ರಾಂತಿ: ಆಪ್ಸ್‌ಗಳೇ ಇಲ್ಲದ ‘AI ಫೋನ್’ ತರುತ್ತಿದೆ...

OpenAI Smartphone : ಸ್ಮಾರ್ಟ್‌ಫೋನ್ ಲೋಕದಲ್ಲಿ ಹೊಸ ಕ್ರಾಂತಿ: ಆಪ್ಸ್‌ಗಳೇ ಇಲ್ಲದ ‘AI ಫೋನ್’ ತರುತ್ತಿದೆ ಚಾಟ್ ಜಿಪಿಟಿ ಒಡೆಯ ಒಪನ್ ಏಐ!

ಟೆಕ್ ಪ್ರಪಂಚದಲ್ಲಿ ಇನ್ಮುಂದೆ ಎಲ್ಲವೂ ಬದಲಾಗಲಿದೆ! ಹೌದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಜಗತ್ತಿನ ಸೂಪರ್ ಸ್ಟಾರ್ ಆಗಿರುವ ಓಪನ್ ಏಐ (OpenAI), ಈಗ ನೇರವಾಗಿ ಮೊಬೈಲ್ (OpenAI Smartphone) ಮಾರುಕಟ್ಟೆಗೆ ಧುಮುಕಲು ಸ್ಕೆಚ್ ಹಾಕಿದೆ. ಇಷ್ಟು ದಿನ ಕೇವಲ ಸಾಫ್ಟ್‌ವೇರ್ ಮತ್ತು ಚಾಟ್‌ಬಾಟ್‌ಗಳ ಮೂಲಕ ಅಬ್ಬರಿಸಿದ್ದ ಈ ಸಂಸ್ಥೆ, ಶೀಘ್ರದಲ್ಲೇ ತನ್ನದೇ ಆದ ಸ್ವಂತ ‘AI ಫಸ್ಟ್’ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಭರ್ಜರಿ ತಯಾರಿ ನಡೆಸುತ್ತಿದೆ. ಇದು ನೇರವಾಗಿ ಆಪಲ್‌ನ ಐಫೋನ್‌ಗೆ ದೊಡ್ಡ ಟಕ್ಕರ್ ನೀಡಲಿದೆ ಎನ್ನಲಾಗುತ್ತಿದೆ.

Futuristic OpenAI Smartphone with AI agents and next-generation mobile technology

OpenAI Smartphone – 2028ರ ಟಾರ್ಗೆಟ್: ದೈತ್ಯ ಕಂಪನಿಗಳ ಜೊತೆ ಒಪ್ಪಂದ!

ಪ್ರಖ್ಯಾತ ಟೆಕ್ ವಿಶ್ಲೇಷಕ ಮಿಂಗ್-ಚಿ ಕುವೊ ನೀಡಿರುವ ಲೇಟೆಸ್ಟ್ ರಿಪೋರ್ಟ್ ಪ್ರಕಾರ, ಓಪನ್ ಏಐ ಸುಮ್ಮನೆ ಕೈಕಟ್ಟಿ ಕುಳಿತಿಲ್ಲ. ಹಾರ್ಡ್‌ವೇರ್ ಲೋಕದ ದಿಗ್ಗಜರ ಜೊತೆ ಈಗಾಗಲೇ ಮಾತುಕತೆ ಮುಗಿಸಿದೆ.

  • ಕ್ವಾಲ್ಕಾಮ್ (Qualcomm), ಮೀಡಿಯಾಟೆಕ್ (MediaTek) ಮತ್ತು ಲಕ್ಸ್ ಶೇರ್ (Luxshare) ನಂತಹ ಜಾಗತಿಕ ಕಂಪನಿಗಳ ಜೊತೆ ಕೈಜೋಡಿಸಿ ಈ ಸೀಕ್ರೆಟ್ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದೆ.
  • ಈ ಹೈಟೆಕ್ ಫೋನ್‌ಗಳ ಭಾರಿ ಪ್ರಮಾಣದ ಉತ್ಪಾದನೆಯನ್ನು (Mass Production) 2028ವೇಳೆಗೆ ಆರಂಭಿಸುವ ಗುರಿ ಹೊಂದಲಾಗಿದೆ.

ಆಪ್ಸ್ ಡೌನ್‌ಲೋಡ್ ಮಾಡುವ ಕಿರಿಕಿರಿ ಇರಲ್ಲ!

ಈ ಸ್ಮಾರ್ಟ್‌ಫೋನ್‌ನ ಅತಿ ದೊಡ್ಡ ಮ್ಯಾಜಿಕ್ ಏನೆಂದರೆ, ಇದರಲ್ಲಿ ನಾವು ದಿನಾ ಬಳಸುವ ಇನ್‌ಸ್ಟಾಗ್ರಾಮ್, ವಾಟ್ಸಾಪ್ ಅಥವಾ ಬೇರೆ ಯಾವುದೇ ಮೊಬೈಲ್ ಆಪ್‌ಗಳು (Apps) ಇರುವುದೇ ಇಲ್ಲ! ಈ ಫೋನ್ ಸಂಪೂರ್ಣವಾಗಿ AI ಏಜೆಂಟ್‌ಗಳ (AI Agents) ಮೂಲಕ ರನ್ ಆಗುತ್ತದೆ.

ಅಂದರೆ, ನಿಮಗೇನು ಬೇಕು ಎಂಬುದನ್ನು ಈ ಫೋನ್ ತಾನಾಗಿಯೇ ಯೋಚಿಸಿ, ನಿರ್ಧಾರ ತಗೆದುಕೊಂಡು ಆ ಕೆಲಸವನ್ನು ಮಾಡಿ ಮುಗಿಸುತ್ತದೆ. ನೀವು ಆಪ್ ಓಪನ್ ಮಾಡಿ ಕ್ಲಿಕ್ ಮಾಡುವ ಅಗತ್ಯವೇ ಇರುವುದಿಲ್ಲ. ತಂತ್ರಜ್ಞಾನ ಬಳಕೆಯ ಈ ಹೊಸ ಫೀಲ್ ಬಳಕೆದಾರರಿಗೆ ನೆಕ್ಸ್ಟ್ ಲೆವೆಲ್ ಅನುಭವ ನೀಡಲಿದೆಯಂತೆ. Read this also : ಸ್ಮಾರ್ಟ್‌ಫೋನ್ ಸುರಕ್ಷತೆ: ನಿಮ್ಮ ಫೋನ್ ಹ್ಯಾಕ್ ಆಗದಂತೆ ತಡೆಯಲು ಈ ಟ್ರಿಕ್ಸ್ ಬಳಸಿ!

ನಿಮ್ಮ ಮನಸ್ಸನ್ನು ಓದುತ್ತೆ ಈ ಸೂಪರ್ ಗ್ಯಾಜೆಟ್!

ಇದು ಕೇವಲ ಮಾತನಾಡೋ ಫೋನ್ ಅಲ್ಲ, ಬದಲಿಗೆ ನಿಮ್ಮ ಮೂಡ್ ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಆಪ್ತ ಗೆಳೆಯ.

  • ನೀವು ಪ್ರಸ್ತುತ ಎಲ್ಲಿದ್ದೀರಿ?
  • ಏನು ಮಾಡುತ್ತಿದ್ದೀರಿ?
  • ಯಾರ ಜೊತೆ ಇದ್ದೀರಿ?

ಇಂತಹ ರಿಯಲ್ ಟೈಮ್ ಮಾಹಿತಿಯನ್ನು ಅಲ್ಲಿನ AI ಏಜೆಂಟ್‌ಗಳು ಸದಾ ಗಮನಿಸುತ್ತಿರುತ್ತವೆ. ಇದರಿಂದಾಗಿ, ನೀವು ಬಾಯ್ಬಿಟ್ಟು ಕೇಳುವ ಮುನ್ನವೇ ನಿಮಗೆ ಬೇಕಾದ ಹೋಟೆಲ್ ಬುಕಿಂಗ್, ಕ್ಯಾಬ್ ಬುಕಿಂಗ್ ಅಥವಾ ಮೆಸೇಜ್‌ಗಳನ್ನು ಇದು ತಾನಾಗಿಯೇ ಸರೆಂಡರ್ ಮಾಡುತ್ತದೆ.

ಫೋನ್‌ಗೂ ಬರಲಿದೆ ಮಾಸಿಕ ಚಂದಾದಾರಿಕೆ (Subscription)!

ಆಪಲ್ ಸಂಸ್ಥೆ ಹೇಗೆ ತನ್ನ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಮೇಲೆ ಸಂಪೂರ್ಣ ಕಂಟ್ರೋಲ್ ಹೊಂದಿದೆಯೋ, ಅದೇ ರೀತಿ ಓಪನ್ ಏಐ ಕೂಡ ತನ್ನದೇ ಆದ ಸುರಕ್ಷಿತ ಎಕೋಸಿಸ್ಟಮ್ ನಿರ್ಮಿಸುತ್ತಿದೆ.

ಆದರೆ ಇಲ್ಲಿ ಸಾಂಪ್ರದಾಯಿಕ ಮಾರಾಟ ಶೈಲಿ ಇರುವುದಿಲ್ಲ. ಕಂಪನಿಯು ಮಾಸಿಕ ಚಂದಾದಾರಿಕೆ (Subscription Model) ಪದ್ಧತಿಯನ್ನು ತರಲು ಪ್ಲಾನ್ ಮಾಡಿದೆ. ಅಂದರೆ ನೀವು ಫೋನ್ ಖರೀದಿಸಿದ ಮೇಲೆಯೂ, ಅದರ ಸೂಪರ್ AI ಫೀಚರ್‌ಗಳನ್ನು ಬಳಸಲು ಪ್ರತಿ ತಿಂಗಳು ನಿರ್ದಿಷ್ಟ ಬಾಡಿಗೆ ಅಥವಾ ಶುಲ್ಕವನ್ನು ಪಾವತಿಸಬೇಕಾಗಬಹುದು.

Futuristic OpenAI Smartphone with AI agents and next-generation mobile technology

ಐಫೋನ್ ಸಾಮ್ರಾಜ್ಯಕ್ಕೆ ನಡುಕ?

ಒಂದು ವೇಳೆ ಓಪನ್ ಏಐ ಅಂದುಕೊಂಡಂತೆ ಈ ಫೋನ್ ಮಾರುಕಟ್ಟೆಗೆ ಬಂದರೆ, ಸ್ಮಾರ್ಟ್‌ಫೋನ್ ಲೋಕದ ರಾಜನಾಗಿರುವ ಆಪಲ್ ಐಫೋನ್‌ಗೆ ನಡುಕ ಶುರುವಾಗುವುದು ಗ್ಯಾರಂಟಿ. ಜಗತ್ತಿನಾದ್ಯಂತ ಇರೋ ಟೆಕ್ ಪ್ರೇಮಿಗಳು ಇಂದಿನಿಂದಲೇ ಈ ಫೋನ್ ಬಗ್ಗೆ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಮನುಷ್ಯನ ಸಹಾಯವಿಲ್ಲದೆ ತಾನಾಗಿಯೇ ಕೆಲಸ ಮಾಡುವ ‘ರೋಬೋಟಿಕ್ ಫೋನ್’ ಯುಗಕ್ಕೆ ನಾವೀಗ ಕಾಲಿಡುತ್ತಿದ್ದೇವೆ. ಚಾಟ್ ಜಿಪಿಟಿ ಕ್ರಿಯೇಟರ್ ಸ್ಯಾಮ್ ಆಲ್ಟ್‌ಮನ್ ಮತ್ತು ಟೀಮ್ ಮೊಬೈಲ್ ಮಾರುಕಟ್ಟೆಯಲ್ಲಿ ಯಾವ ಮಟ್ಟದ ಸುನಾಮಿ ಸೃಷ್ಟಿಸಲಿದೆ ಎಂಬುದನ್ನು ನೋಡಲು 2028ರವರೆಗೆ ಕಾಯಲೇಬೇಕು!

ಗಮನಿಸಿ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಪ್ರಸ್ತುತ ಲಭ್ಯವಿರುವ ಟೆಕ್ ವರದಿಗಳು ಮತ್ತು ಮಾರುಕಟ್ಟೆ ವಿಶ್ಲೇಷಕರ ಅಂದಾಜುಗಳನ್ನು ಆಧರಿಸಿದೆ.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt