ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ರವರಿಗೆ ಜೂನ್ 14ರವೆರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಜೂ.3 ರಂದು ಸಿಸಿಬಿ ಪೊಲೀಸರು ನಟಿ ಹೇಮಾ ರವರನ್ನು ಬಂಧಿಸಿದ್ದರು. ಆನೇಕಲ್ ನ 4ನೇ ಹೆಚ್ಚುವರಿ ಸಿವಿಲ್ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಸಲ್ಮಾ ರವರ ಎದುರು ಹೇಮಾರನ್ನು ಹಾಜರು ಪಡಿಸಲಾಗಿತ್ತು. ವಿಚಾರಣೆಯ ಬಳಿಕ ನಟಿ ಹೇಮಾಗೆ ಜೂ.14ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಟಿ ಹೇಮಾ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್. ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಆರೋಪದ ಮೇರೆಗೆ ಆಕೆಗೆ ಸಿಸಿಬಿ ಪೊಲೀಸರು ನೊಟೀಸ್ ನೀಡಿದ್ದರು. ಎರಡನೇ ಬಾರಿ ನೊಟೀಸ್ ನೀಡಿದ ಬಳಿಕ ಆಕೆ ಪೊಲೀಸರ ಮುಂದೆ ಹಾಜರಾಗಿದ್ದರು. ಈ ಪ್ರಕರಣದಲ್ಲಿ ನಟಿ ಹೇಮಾ ಹೆಸರು ಬರುತ್ತಿದ್ದಂತೆ ಆಕೆ ನಾನು ಹೈದರಾಬಾದ್ ನಲ್ಲಿದ್ದೇನೆ. ನಾನು ಬೆಂಗಳೂರಿನಲ್ಲಿಲ್ಲ. ರೇವ್ ಪಾರ್ಟಿಗೂ ನನಗೂ ಸಂಬಂಧವಿಲ್ಲ ಎಂದು ವಾದಿಸುತ್ತಲೇ ಬಂದರು. ಬಳಿಕ ಪೊಲೀಸರು ಆಕೆಯ ಬ್ಲಡ್ ಸ್ಯಾಂಪಲ್ ಪರೀಕ್ಷೆ ಮಾಡಿಸಿದ ಬಳಿಕ ಆಕೆ ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಯ್ತು. ಬಳಿಕ ಆಕೆ ಪಾರ್ಟಿಯಲ್ಲಿರುವ ಬಗ್ಗೆ ಪೊಲೀಸರು ಖಚಿತಪಡಿಸಿದರು. ಈಗಲೂ ಸಹ ಆಕೆ ನಾನು ಯಾವುದೇ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಲ್ಲವೂ ಸುಳ್ಳು ಎಂದು ಕೂಗಾಡುತ್ತಲೇ ಇದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿ.ಆರ್.ಫಾರ್ಮ್‌ಹೌಸ್ ನಲ್ಲಿ ಬರ್ತ್‌ಡೇ ಪಾರ್ಟಿ ಹೆಸರಿನಲ್ಲಿ ರೇವ್ ಪಾರ್ಟಿ ನಡೆಸಿದ್ದರು. ಈ ಪಾರ್ಟಿಯಲ್ಲಿ ನಟ-ನಟಿಯರು, ಮಾಡಲ್ ಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ಪಾರ್ಟಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸುತ್ತಿದ್ದಂತೆ ತೆಲುಗು ನಟಿ ಹೇಮಾ ದೊಡ್ಡ ಹೈಡ್ರಾಮ ಕ್ರಿಯೇಟ್ ಮಾಡಿದ್ದರು. ಅದೇ ಜಿ.ಆರ್. ಫಾರ್ಮ್‌ಹೌಸ್ ನಲ್ಲಿದ್ದುಕೊಂಡೇ ವಿಡಿಯೋ ಮಾಡಿ ನಾನು ಹೈದರಾಬಾದ್ ನಲ್ಲಿದ್ದೇನೆ. ನನ್ನ ವಿರುದ್ದ ಬರುತ್ತಿರುವ ಸುದ್ದಿ ಸುಳ್ಳು ಎಂದು ಡ್ರಾಮಾ ಮಾಡಿದರು. ಬಳಿಕ ಆಕೆ ಪಾರ್ಟಿಯಲ್ಲಿರುವ ಬಗ್ಗೆ ಸಿಸಿಬಿ ಪೊಲೀಸರು ಖಚಿತಪಡಿಸಿದರು. ಈಗಲೂ ಸಹ ಹೇಮಾ ನಾನೇನು ಮಾಡಿಲ್ಲ, ನಾನು ಹೈದರಾಬಾದ್ ನಿಂದಲೇ ಆ ವಿಡಿಯೋ ಮಾಡಿದ್ದು, ಸಿಸಿಬಿಯವರು ಹೇಗೆ ಕರೆದುಕೊಂಡು ಹೋಗುತ್ತಿದ್ದಾರೆ ನೋಡಿ. ನಾನು ಬರ್ತ್ ಡೇ ಕೇಕ್ ಕಟ್ ಮಾಡಿ ಹೈದರಾಬಾದ್ ಗೆ ಬಂದು ಬಿಟ್ಟಿದ್ದೆ. ನಮ್ಮ ಮನೆಯಿಂದಲೇ ಬಿರಿಯಾನಿ ಮಾಡುವ ವಿಡಿಯೋ ಹಾಕಿದ್ದೆ. ನಾನು ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ಹೇಮಾ ಮತ್ತೆ ಅದೇ ಹೇಳಿದ್ದಾರೆ.