ಪುಟ್ಟ ಮಕ್ಕಳನ್ನು ಸಾಕುವುದು ಅಂದರೆ ಅದು ಒಂದು ದೊಡ್ಡ ಜವಾಬ್ದಾರಿ. ಮಕ್ಕಳ ಮೇಲೆ ಎಷ್ಟು ಕಣ್ಣಿಟ್ಟಿದ್ದರೂ ಸಾಲದು ಎಂಬ ಮಾತು ಅಕ್ಷರಶಃ ನಿಜ. ಪೋಷಕರು ಸ್ವಲ್ಪ ಯಾಮಾರಿದರೂ ಪುಟಾಣಿಗಳು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ಮಾಡಿರುವ ಎಡವಟ್ಟು ನೋಡಿದರೆ ನಿಮಗೆ ನಗು (Viral Video) ಬರಬಹುದು ಅಥವಾ ಕೋಪವೂ ಬರಬಹುದು! ಹೌದು, ಮಗುವಿಗೆ ಹಾಲು ಕುಡಿಸುವ ಭರದಲ್ಲಿ ಈಕೆ ಮಾಡಿದ ಕೆಲಸ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Viral Video – ಏನಿದು ಘಟನೆ?
ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನ @dr_abhinandan_tripathi (Video Here) ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬಳು ಕಾರ್ಯಕ್ರಮವೊಂದರಲ್ಲಿ ಆರಾಮವಾಗಿ ಕುಳಿತು ಎದುರಿಗಿನ ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾಳೆ. ಅವಳ ಮಡಿಲಲ್ಲಿ ಒಂದು ಮುದ್ದಾದ ಮಗು ಇದೆ. ಆಕೆಗೆ ಮಗುವಿಗೆ ಹಾಲು ಕುಡಿಸಬೇಕೆಂಬ ಅರಿವಿದೆ, ಆದರೆ ಅವಳ ಸಂಪೂರ್ಣ ಗಮನ ಮಾತ್ರ ಎದುರಿಗಿರುವ ಸ್ಟೇಜ್ ಮೇಲಿದೆ.
ಬಾಯಿಗೆ ಬಿಟ್ಟು ಕಿವಿಗೆ ಬಾಟಲಿ!
ಇದೇ ಭರದಲ್ಲಿ ಆ ಮಹಿಳೆ ಮಗುವಿನ ಬಾಯಿಗೆ ಹಾಲಿನ ಬಾಟಲಿ ಇಡುವ ಬದಲು, ನೇರವಾಗಿ ಮಗುವಿನ ಕಿವಿಗೆ ಬಾಟಲಿಯನ್ನು ಇಟ್ಟಿದ್ದಾಳೆ. ಪಾಪ, ಆ ಪುಟ್ಟ ಕಂದಮ್ಮನಿಗೆ ಹಸಿವಾಗುತ್ತಿದೆ, ಹಾಲು (Viral Video) ಸಿಗುತ್ತಿಲ್ಲ ಎಂದು ಅಳಲು ಶುರು ಮಾಡಿದೆ. ಹಸಿವಿನಿಂದ ಮಗು ಹಾಲಿಗಾಗಿ ಇತ್ತಿತ್ತ ಎಂದು ಬಾಯಿ ಆಡಿಸುತ್ತಿದ್ದರೂ, ಈ ಮಹಿಳೆ ಮಾತ್ರ ತನ್ನದೇ ಲೋಕದಲ್ಲಿ ಮುಳುಗಿದ್ದಾಳೆ.
ನೆಟ್ಟಿಗರ ಆಕ್ರೋಶ ಮತ್ತು ವ್ಯಂಗ್ಯ
ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ಮಹಿಳೆಯ ಈ ಬೇಜವಾಬ್ದಾರಿತನ ಕಂಡು ನೆಟ್ಟಿಗರು ತರಹೇವಾರಿ ಕಾಮೆಂಟ್ (Viral Video) ಮಾಡುತ್ತಿದ್ದಾರೆ. Read this also : ಮಗುವನ್ನು ಎತ್ತಿಕೊಳ್ಳಲು ನಡುಗಿದ ತಂದೆಯ ಕೈಗಳು: ವೈರಲ್ ವಿಡಿಯೋ ಹಿಂದಿನ ಭಾವುಕ ಕಥೆ, ನೀವೂ ಓದಿ..!

- ಒಬ್ಬ ಬಳಕೆದಾರ: “ಮಗುವಿನ ಮೇಲೆ ಕನಿಷ್ಠ ಜ್ಞಾನವೂ ಇಲ್ಲದ ಇಂತಹ ತಾಯಿ ಇರಬೇಕಾ?” ಎಂದು ಪ್ರಶ್ನಿಸಿದ್ದಾರೆ.
- ಮತ್ತೊಬ್ಬರು ವ್ಯಂಗ್ಯವಾಗಿ: “ತಾಯಿ ಅಂದ್ರೆ ಹೀಗೆ ಇರಬೇಕು ನೋಡಿ, ಮಗುವಿನ ಬಗ್ಗೆ ಅದೆಷ್ಟು ಕಾಳಜಿ!” ಎಂದು ಕಾಲೆಳೆದಿದ್ದಾರೆ.
- ಇನ್ನೊಬ್ಬ ನೆಟ್ಟಿಗ: “ಅತ್ತ ಏನು ನೋಡ್ತಾ ಇದ್ದೀಯಾ ಸುಂದ್ರಿ? ಮಗು ಇಲ್ಲಿ ಹಾಲಿಲ್ಲದೆ ಒದ್ದಾಡ್ತಿದೆ ನೋಡು” ಎಂದು ಗರಂ ಆಗಿದ್ದಾರೆ.
ಮೊಬೈಲ್ ಫೋನ್ ಅಥವಾ ಟಿವಿ (Viral Video) ನೋಡುವುದರಲ್ಲಿ ಮಗ್ನರಾಗಿ ಪೋಷಕರು ಮಕ್ಕಳನ್ನು ನಿರ್ಲಕ್ಷಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಂತಹ ಸಣ್ಣ ತಪ್ಪುಗಳು ಕೆಲವೊಮ್ಮೆ ದೊಡ್ಡ ಅಪಾಯಕ್ಕೆ ನಾಂದಿಯಾಗಬಹುದು. ಮಗುವಿನ ಕಿವಿಗೆ ಹಾಲು ಹೋದರೆ ಸೋಂಕಾಗುವ (Ear Infection) ಸಾಧ್ಯತೆಯೂ ಇರುತ್ತದೆ. ಆದ್ದರಿಂದ, ಯಾವುದೇ ಕೆಲಸ ಮಾಡುವಾಗ ಮಕ್ಕಳ ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ.
