ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಸುಂದರಿಯರ ಮಾತು ಕೇಳಿ ಮರುಳಾಗುವ ಮುನ್ನ ಎಚ್ಚರದಿಂದ ಇರಬೇಕು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಪ್ರೀತಿಯ ನಾಟಕವಾಡಿ, ಶ್ರೀಮಂತ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದ ಕತರ್ನಾಕ್ ಮಹಿಳೆಯೊಬ್ಬಳನ್ನು (Honey Trap Case) ಬೆಳಗಾವಿಯ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಆಗಿದ್ದ ಈಕೆ, ಐಷಾರಾಮಿ ಜೀವನದ ಆಸೆಗೆ ಬಿದ್ದು ಹನಿಟ್ರ್ಯಾಪ್ ದಂಧೆಗೆ ಇಳಿದಿದ್ದ ಕಹಾನಿ ನಿಜಕ್ಕೂ ರೋಚಕವಾಗಿದೆ.

Honey Trap Case – ಮೆಸೇಜ್ ಮಾಡಿ ಲಾಡ್ಜ್‌ಗೆ ಕರೆಸುತ್ತಿದ್ದಳು!
ಬಂಧಿತ ಮಹಿಳೆಯನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ 33 ವರ್ಷದ ದೀಪಾ ಅವಟಗಿ ಎಂದು ಗುರುತಿಸಲಾಗಿದೆ. ಈಕೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸದಾ ಸಕ್ರಿಯಳಾಗಿದ್ದು, ಶ್ರೀಮಂತ ವ್ಯಕ್ತಿಗಳ ಪ್ರೊಫೈಲ್‌ಗಳನ್ನು ಹುಡುಕುತ್ತಿದ್ದಳು. ಒಮ್ಮೆ ಟಾರ್ಗೆಟ್ ಫಿಕ್ಸ್ ಆದ ಮೇಲೆ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ನಂತರ ಮೆಸೆಂಜರ್‌ನಲ್ಲಿ ಚಾಟಿಂಗ್ ಶುರು ಮಾಡಿ ನಂಬಿಕೆ ಗಳಿಸಿಕೊಳ್ಳುತ್ತಿದ್ದಳು. ಮಾತು ಮುಂದುವರಿದು ಮೊಬೈಲ್ ನಂಬರ್ ವಿನಿಮಯವಾದ ಮೇಲೆ ತನ್ನ ಮಾಯಾಂಗನೆಯ ಜಾಲವನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದಳು.
ನೀವು ಸ್ನಾನ ಮಾಡಿ ಬನ್ನಿ ಎನ್ನುತ್ತಲೇ ಕೈ ಚಳಕ ತೋರುತ್ತಿದ್ದಳು
ಪರಿಚಯ ಬೆಳೆದು ಆತ್ಮೀಯತೆ ಹೆಚ್ಚಾದ ಮೇಲೆ ಈಕೆ ವ್ಯಕ್ತಿಗಳನ್ನು ಬೆಳಗಾವಿಯ ಯಾವುದಾದರೂ ಲಾಡ್ಜ್‌ಗೆ ಬರುವಂತೆ ಆಮಂತ್ರಣ ನೀಡುತ್ತಿದ್ದಳು. ಆಕೆಯನ್ನು ನಂಬಿ ಅಲ್ಲಿಗೆ ಬಂದ ಗಂಡಸರ ಬಳಿ ತುಂಬಾನೇ ಸಲುಗೆಯಿಂದ ವರ್ತಿಸುತ್ತಾ, ಸಮಯ ಸಾಧಿಸಿ “ನೀವು ಮೊದಲು ಸ್ನಾನ ಮಾಡಿ ಬನ್ನಿ” ಎಂದು ಅವರನ್ನು ಬಾತ್‌ರೂಮ್‌ಗೆ ಕಳುಹಿಸುತ್ತಿದ್ದಳು. ವ್ಯಕ್ತಿ ಸ್ನಾನಕ್ಕೆ ಹೋದದ್ದೇ ತಡ, ಕೇವಲ ಕೆಲವೇ ನಿಮಿಷಗಳಲ್ಲಿ ಆತನ ಬಳಿಯಿದ್ದ ಹಣ, ಚಿನ್ನಾಭರಣ, ಬೆಲೆಬಾಳುವ ಮೊಬೈಲ್ ಫೋನ್‌ಗಳು ಮತ್ತು (Honey Trap Case) ಹೊರಗೆ ನಿಲ್ಲಿಸಿದ್ದ ಕಾರಿನ ಕೀಗಳ ಸಮೇತ ಅಲ್ಲಿಂದ ಪರಾರಿಯಾಗುತ್ತಿದ್ದಳು. ವ್ಯಕ್ತಿ ಸ್ನಾನ ಮುಗಿಸಿ ಹೊರಬರುವಷ್ಟರಲ್ಲಿ ಆಕೆ ಅಲ್ಲಿಂದ ಮಾಯವಾಗಿರುತ್ತಿದ್ದಳು.
ಈಕೆಯ ಹಿಂದಿದ್ದ ಆಪ್ತ ಸ್ನೇಹಿತನ ಮಾಸ್ಟರ್ ಪ್ಲಾನ್
ಈ ಎಲ್ಲಾ ದಂಧೆಯ ಹಿಂದೆ ದೀಪಾಳ ಆಪ್ತ ಸ್ನೇಹಿತ ಶಿವಾನಂದ ಮಠಪತಿಯ ಕೈವಾಡವೂ ಇತ್ತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಿವಾಸಿಯಾದ ಈತ, ಯಾರ ಬಳಿ ಹೆಚ್ಚು ಹಣವಿದೆ ಮತ್ತು ಯಾರನ್ನು ಸುಲಭವಾಗಿ ಬಲೆಗೆ ಬೀಳಿಸಬಹುದು ಎಂಬ ಮಾಹಿತಿಯನ್ನು ದೀಪಾಗೆ ಒದಗಿಸುತ್ತಿದ್ದನು. (Honey Trap Case) ಸದ್ಯ ಪೊಲೀಸರು ದೀಪಾಳನ್ನು ಅರೆಸ್ಟ್ ಮಾಡಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶಿವಾನಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ಸದ್ಯ ಆತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. Read this also : ಗಂಡನಿಗೆ ಹೊಡೆದು ಚಿನ್ನ, ಹಣದೊಂದಿಗೆ ಎಸ್ಕೇಪ್ ಆದ್ಲಾ ಪತ್ನಿ? ಯುಪಿ ವಿಡಿಯೋ ವೈರಲ್

ಜಪ್ತಿಯಾದ ವಸ್ತುಗಳ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ
ಒಬ್ಬ ವ್ಯಕ್ತಿ ಧೈರ್ಯ ಮಾಡಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಟಿಳಕವಾಡಿ ಪೊಲೀಸರು ದೀಪಾಳನ್ನು ವಶಕ್ಕೆ ಪಡೆದಾಗ ಬೃಹತ್ ವಂಚನೆ ಜಾಲ ಬಯಲಿಗೆ ಬಂದಿದೆ. ಆಕೆಯಿಂದ ಬರೋಬ್ಬರಿ 32 ಲಕ್ಷದ 86 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಂದು ಐಷಾರಾಮಿ ಫಾರ್ಚೂನರ್ ಕಾರು, (Honey Trap Case) ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್ ಮತ್ತು ನಗದು ಹಣ ಸೇರಿದೆ. ಅಪರಿಚಿತರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯವಹರಿಸುವಾಗ ಎಷ್ಟು ಎಚ್ಚರದಿಂದಿರಬೇಕು ಎಂಬುದಕ್ಕೆ ಈ ಪ್ರಕರಣವೇ ದೊಡ್ಡ ಪಾಠವಾಗಿದೆ.
