ನೀವು ಎಲ್‌ಪಿಜಿ (LPG) ಗ್ಯಾಸ್ ಗ್ರಾಹಕರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರವು (Gas Booking) ಗ್ಯಾಸ್ ಬುಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಸಾಮಾನ್ಯ ಜನರಿಗೆ ಇದು ತುಸು ಕಹಿಯಾದ ಸುದ್ದಿಯೇ ಸರಿ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಉಂಟಾಗಬಹುದಾದ ಗ್ಯಾಸ್ ಕೊರತೆಯನ್ನು ನೀಗಿಸಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

Gas Booking – 25 ದಿನಗಳ ನಂತರವಷ್ಟೇ ಮುಂದಿನ ಬುಕಿಂಗ್ ಸಾಧ್ಯ!
ಹೌದು, ಈ ಮೊದಲು ಒಂದು ಸಿಲಿಂಡರ್ ಬುಕ್ ಮಾಡಿದ 21 ದಿನಗಳ ನಂತರ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಅವಕಾಶವಿತ್ತು. ಆದರೆ ಈಗ ಕೇಂದ್ರ ಸರ್ಕಾರ ಈ ಅವಧಿಯನ್ನು 25 ದಿನಗಳಿಗೆ ಏರಿಸಿದೆ. ಅಂದರೆ, ನೀವು ಒಂದು ಬಾರಿ ಗ್ಯಾಸ್ ಪಡೆದರೆ, ಮುಂದಿನ 25 ದಿನಗಳವರೆಗೆ ಮತ್ತೊಂದು ಬುಕಿಂಗ್ ಮಾಡಲು ಸಾಧ್ಯವಿಲ್ಲ.
ಈ ಬದಲಾವಣೆಗೆ ಮುಖ್ಯ ಕಾರಣಗಳೇನು?
- ದಾಸ್ತಾನು ಹೆಚ್ಚಳ: ದೇಶದಲ್ಲಿ ಗ್ಯಾಸ್ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದಾಸ್ತಾನು (Stock) ಉಳಿಸಿಕೊಳ್ಳುವುದು.
- ಬ್ಲಾಕ್ ಮಾರ್ಕೆಟ್ ತಡೆ: ಸಿಲಿಂಡರ್‌ಗಳ ಅಕ್ರಮ ಮಾರಾಟ (Gas Booking) ಮತ್ತು ಕಾಳಸಂತೆಯನ್ನು ತಡೆಯುವುದು ಸರ್ಕಾರದ ಉದ್ದೇಶ.
- ಮನೆಬಳಕೆಗೆ ಆದ್ಯತೆ: ವಾಣಿಜ್ಯ ಬಳಕೆಯ ಕನೆಕ್ಷನ್‌ಗಳಿಗಿಂತ ಮನೆಬಳಕೆಯ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವಂತೆ ಗ್ಯಾಸ್ ಕಂಪನಿಗಳಿಗೆ ಸೂಚಿಸಲಾಗಿದೆ.
ಏರುತ್ತಿರುವ ಕಚ್ಚಾ ತೈಲ ಬೆಲೆ: ಜನಸಾಮಾನ್ಯರ ಜೇಬಿಗೆ ಕತ್ತರಿ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇರಾನ್-ಇಸ್ರೇಲ್ ಸಂಘರ್ಷದ ಹಬೆ ಜೋರಾಗಿದೆ. ಇರಾನ್ ‘ಹಾರ್ಮುಜ್ ಜಲಸಂಧಿ’ಯನ್ನು ಮುಚ್ಚಿರುವುದರಿಂದ ಕಚ್ಚಾ ತೈಲ ಸಾಗಾಟದ ಮೇಲೆ ಭಾರಿ (Gas Booking) ಪರಿಣಾಮ ಬೀರಿದೆ. ಇದರಿಂದಾಗಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 130 ಡಾಲರ್ ತಲುಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. Read this also : ಸಾಲದ ಜೊತೆಗೆ ಸಬ್ಸಿಡಿ ಕೂಡ ಲಭ್ಯ : ಕೇಂದ್ರ ಸರ್ಕಾರದ ಈ 5 ಉದ್ಯಮ ಸಾಲ ಯೋಜನೆಗಳ ಬಗ್ಗೆ ನಿಮಗೆ ಗೊತ್ತಾ?
ಇತ್ತೀಚಿನ ಬೆಲೆ ಏರಿಕೆ ಹೀಗಿದೆ:
- ಮನೆಬಳಕೆಯ ಗ್ಯಾಸ್: ಇತ್ತೀಚೆಗಷ್ಟೇ 60 ರೂಪಾಯಿ ಏರಿಕೆ ಮಾಡಲಾಗಿದೆ.
- ವಾಣಿಜ್ಯ ಸಿಲಿಂಡರ್: ಸುಮಾರು 110 ರೂಪಾಯಿಗಳಷ್ಟು ಹೆಚ್ಚಳವಾಗಿದೆ.
ಗಮನಿಸಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳೂ (Gas Booking) ಏರಿಕೆಯಾಗುವ ಭೀತಿ ಎದುರಾಗಿದೆ. ಆದರೆ, ಸದ್ಯಕ್ಕೆ ಭಾರತದಲ್ಲಿ ಸಾಕಷ್ಟು ಇಂಧನ ದಾಸ್ತಾನು ಇರುವುದರಿಂದ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಆದರೂ ಯುದ್ಧ ಸುದೀರ್ಘ ಕಾಲ ಮುಂದುವರೆದರೆ ಬೆಲೆ ಏರಿಕೆ ಅನಿವಾರ್ಯವಾಗಬಹುದು.

ಗ್ರಾಹಕರು ಏನು ಮಾಡಬೇಕು?
ಗ್ಯಾಸ್ ಲಭ್ಯತೆಯಲ್ಲಿ (Gas Booking) ವ್ಯತ್ಯಯ ಉಂಟಾಗದಂತೆ ಸರ್ಕಾರ ಈ “ರೇಷನಿಂಗ್” ಪದ್ಧತಿಯನ್ನು ಜಾರಿಗೆ ತಂದಿದೆ. ಆದ್ದರಿಂದ ಗ್ರಾಹಕರು ತಮ್ಮ ಬಳಿ ಇರುವ ಗ್ಯಾಸ್ ಅನ್ನು ಮಿತವಾಗಿ ಬಳಸುವ ಮೂಲಕ ಮುಂದಿನ 25 ದಿನಗಳವರೆಗೆ ನಿರ್ವಹಣೆ ಮಾಡಬೇಕಾಗುತ್ತದೆ. ಮುಂದಿನ ಆದೇಶದವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತವೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
