Jodhpur Sisters : ಬೆಳಗಾದರೆ ಮದುವೆ.. ಅಷ್ಟರಲ್ಲೇ ಒಂದೇ ಮನೆಯ ಇಬ್ಬರು ಅಕ್ಕ-ತಂಗಿಯರ ಆತ್ಮ**ತ್ಯೆ! ಅಸಲಿಗೆ ನಡೆದಿದ್ದೇನು?

ಮನೆಯಲ್ಲಿ ಮದುವೆಯ ಸಂಭ್ರಮ, ಸಂಬಂಧಿಕರ ಓಡಾಟ, ಇನ್ನೇನು ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಬೇಕಿದ್ದ ಇಬ್ಬರು ಯುವತಿಯರು ವಿಧಿಯಿಲ್ಲದೆ ಸಾವಿನ ಹಾದಿ ಹಿಡಿದ ಘಟನೆ ರಾಜಸ್ಥಾನದ ಜೋಧ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮದುವೆಗೆ ಕ್ಷಣಗಣನೆ ಆರಂಭವಾಗಿದ್ದ ಹೊತ್ತಲ್ಲೇ ಅಕ್ಕ-ತಂಗಿ ಇಬ್ಬರೂ (Jodhpur Sisters) ಆತ್ಮ**ಹತ್ಯೆ ಮಾಡಿಕೊಂಡಿರುವುದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

Jodhpur sisters who allegedly died hours before their wedding ceremony in Rajasthan village

Jodhpur Sisters – ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ

ಜೋಧ್‌ಪುರ ಜಿಲ್ಲೆಯ ಮನೈ ಗ್ರಾಮದ ದೀಪ್ ಸಿಂಗ್ ಎಂಬುವವರ ಪುತ್ರಿಯರಾದ ಶೋಭಾ (25) ಮತ್ತು ವಿಮಲಾ (23) ಮೃತ ದುರ್ದೈವಿಗಳು. ಇಬ್ಬರೂ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದರು. ತಂದೆ ದೀಪ್ ಸಿಂಗ್ ಅವರು ಅಕ್ಕ-ತಂಗಿಯರಿಬ್ಬರಿಗೂ ಒಂದೇ ದಿನ ವಿವಾಹ ನಿಶ್ಚಯಿಸಿದ್ದರು. ಶನಿವಾರ ಮದುವೆ ನಡೆಯಬೇಕಿತ್ತು. ಶುಕ್ರವಾರ ರಾತ್ರಿವರೆಗೂ ಮನೆಯಲ್ಲಿ ಮದುವೆಯ ಶಾಸ್ತ್ರಗಳು, ಸಡಗರ ಜೋರಾಗಿಯೇ ಇತ್ತು. ಶನಿವಾರ ಮುಂಜಾನೆ ಮದುವೆ ಮಂಟಪಕ್ಕೆ ತೆರಳಲು ಮನೆಯವರೆಲ್ಲಾ ಸಿದ್ಧತೆ ನಡೆಸುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು.

ಅಸಲಿಗೆ ನಡೆದಿದ್ದೇನು?

ಶನಿವಾರ ಬೆಳಗಿನ ಜಾವ ಇಬ್ಬರೂ ಯುವತಿಯರ ಆರೋಗ್ಯ ಏಕಾಏಕಿ ಕ್ಷೀಣಿಸಿದೆ. ಗಾಬರಿಗೊಂಡ ಪೋಷಕರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. (Jodhpur Sisters) ಆದರೆ ಪರೀಕ್ಷಿಸಿದ ವೈದ್ಯರು, ಇಬ್ಬರೂ ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಸುದ್ದಿ ಬರಸಿಡಿಲು ಬಡಿದಂತಾಗಿದೆ.

ಪೊಲೀಸರ ತನಿಖೆ ಮತ್ತು ಅನುಮಾನ

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Jodhpur sisters who allegedly died hours before their wedding ceremony in Rajasthan village

“ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ (Jodhpur Sisters) ನಿಖರ ಕಾರಣ ತಿಳಿಯಲಿದೆ. ಸದ್ಯಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿಕೊಳ್ಳಲಾಗಿದೆ,” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮದುವೆಯ ಸಂಭ್ರಮದ ನಡುವೆಯೇ ಇಬ್ಬರು ಶಿಕ್ಷಕಿಯರು ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಗ್ರಾಮಸ್ಥರಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Leave a Comment

Your email address will not be published. Required fields are marked *

Scroll to Top