ಪ್ರೀತಿ, ಪ್ರೇಮ, ಒಟ್ಟಿಗೆ ಬಾಳುವ ಕನಸು… ಇವೆಲ್ಲವೂ ಕೇಳಲು ಎಷ್ಟು ಚಂದವೋ, ಹಳಿ ತಪ್ಪಿದಾಗ ಅಷ್ಟೇ ಭೀಕರ ಸ್ವರೂಪ ಪಡೆದುಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಲೀವ್ ಇನ್ ರಿಲೇಶನ್‌ಶಿಪ್ (Live-in Relationship) ಸಂಸ್ಕೃತಿ ಹೆಚ್ಚಾಗುತ್ತಿದೆ, ಅದರ ಜೊತೆಜೊತೆಗೆ ಅಷ್ಟೇ ಕರಾಳ ಸುದ್ದಿಗಳೂ ಕೇಳಿಬರುತ್ತಿವೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಈ ಘೋರ ಹತ್ಯೆ. ಮುತ್ತಿನ ಮತ್ತಿನಲ್ಲಿದ್ದ ಜೋಡಿ ಇಂದು ಮಣ್ಣಿನ ಪಾಲಾಗಿದೆ. ಒಂದೇ ಮನೆಯಲ್ಲಿ ಸಂಸಾರ ಹೂಡಿದ್ದ ಯುವತಿ, ಇಂದು ಅದೇ ಮನೆಯ ಪಕ್ಕದ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

Live-in Relationship – ಪ್ರೀತಿಯ ಹೆಸರಲ್ಲಿ ಶುರುವಾದ ಲೀವ್ ಇನ್ ಸಂಬಂಧ
ಭೋಪಾಲ್‌ನ ಕಮಲಾನಗರದಲ್ಲಿ ವಾಸವಿದ್ದ ಈ ಜೋಡಿ ಕಳೆದ ಕೆಲವು ಸಮಯದಿಂದ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ಸಾಗುತ್ತಿತ್ತು. ಒಂದೇ ಮನೆಯಲ್ಲಿ ಸಂಸಾರ ಹೂಡಿದ್ದ ಇವರ ನಡುವೆ ದಿನಕಳೆದಂತೆ ಸಣ್ಣಪುಟ್ಟ ಜಗಳಗಳು ಶುರುವಾದವು. ಈ ಜಗಳಗಳು ಎಷ್ಟು ವಿಕೋಪಕ್ಕೆ ಹೋದವೆಂದರೆ, ಕೊನೆಗೆ ಅದು ಯುವತಿಯ ಪ್ರಾಣವನ್ನೇ ಬಲಿಪಡೆದಿದೆ.
ಆವೇಶದಲ್ಲಿ ನಡೆದ ಭೀಕರ ಹತ್ಯೆ
ಒಂದು ದಿನ ಇಬ್ಬರ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿತು. ಈ ವೇಳೆ ಸಿಟ್ಟಿಗೆದ್ದ ಯುವಕ ತನ್ನ ಪ್ರಿಯತಮೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆತ ಗಾಬರಿಯಾಗದೆ, (Live-in Relationship) ಒಂದು ಇಡೀ ರಾತ್ರಿ ಶವದ ಜೊತೆಯೇ ಕಳೆದಿದ್ದಾನೆ. ಮೃತದೇಹವನ್ನು ಯಾರ ಕಣ್ಣಿಗೂ ಬೀಳದಂತೆ ಹೇಗೆ ಸಾಗಿಸಬೇಕು ಎಂದು ಇಡೀ ರಾತ್ರಿ ಸ್ಕೆಚ್ ಹಾಕಿದ್ದಾನೆ.
ಶವ ವಿಲೇವಾರಿಗೆ ಬೆಂಬಲ ನೀಡಿದ ಕುಟುಂಬಸ್ಥರು
ಈ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ ಕೊಲೆಗಾರನಿಗೆ ಆತನ ಕುಟುಂಬವೇ ಸಾಥ್ ನೀಡಿದ್ದು. ತನ್ನ ಪ್ಲಾನ್ ವರ್ಕ್ ಆಗುವುದಿಲ್ಲ ಎಂದು ತಿಳಿದ ಯುವಕ, ತಕ್ಷಣ ತನ್ನ ತಾಯಿ, ಸಹೋದರ ಮತ್ತು ಸಹೋದರಿಯ ಸಹಾಯ ಕೋರಿದ್ದಾನೆ. ಮಗ ಮಾಡಿದ ತಪ್ಪನ್ನು ತಿದ್ದುವ ಬದಲು, ಆ ಕುಟುಂಬ ಶವವನ್ನು (Live-in Relationship) ವಿಲೇವಾರಿ ಮಾಡಲು ಪ್ಲಾನ್ ಮಾಡಿದೆ. ಎಲ್ಲರೂ ಸೇರಿ ಯುವತಿಯ ದೇಹವನ್ನು ಒಂದು ಪೆಟ್ಟಿಗೆಯಲ್ಲಿ ತುಂಡು ಮಾಡಿ ತುಂಬಿದ್ದಾರೆ. Read this also : ಮುಂಬೈನಲ್ಲಿ ಬೆಚ್ಚಿಬೀಳಿಸುವ ಹತ್ಯೆ: ‘ಲವ್ ಟ್ರಯಾಂಗಲ್’ಗೆ 19ರ ಹರೆಯದ ಯುವತಿ ಬಲಿ!
ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾದ ರಹಸ್ಯ
ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿದ್ದ ನೀರಿನ ಟ್ಯಾಂಕ್‌ಗೆ ಈ ಪೆಟ್ಟಿಗೆಯನ್ನು ಎಸೆಯಲಾಯಿತು. ಪೆಟ್ಟಿಗೆ ನೀರಿನ ಮೇಲೆ ತೇಲಬಾರದು ಎಂಬ ಕಾರಣಕ್ಕೆ ಅದರ ಮೇಲೆ (Live-in Relationship) ಭಾರವಾದ ಕಲ್ಲುಗಳನ್ನು ಇಟ್ಟು ನೀರಿನ ಆಳಕ್ಕೆ ತಳ್ಳಲಾಗಿತ್ತು. ಆದರೆ, ಕೆಲವು ದಿನಗಳ ನಂತರ ಟ್ಯಾಂಕ್‌ನಿಂದ ಅಸಹನೀಯ ವಾಸನೆ ಬರಲಾರಂಭಿಸಿದಾಗ ಸ್ಥಳೀಯರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಟ್ಯಾಂಕ್‌ನ ನೀರನ್ನು ಖಾಲಿ ಮಾಡಿಸಿದಾಗ ಆ ಪೆಟ್ಟಿಗೆ ಪತ್ತೆಯಾಗಿ ಅಸಲಿ ಸತ್ಯ ಹೊರಬಂದಿದೆ.

ನಾಲ್ವರು ಆರೋಪಿಗಳ ಬಂಧನ ಮತ್ತು ತನಿಖೆ
ಪೊಲೀಸರು ತಕ್ಷಣ (Live-in Relationship) ಕಾರ್ಯಪ್ರವೃತ್ತರಾಗಿ ಯುವತಿಯ ಗುರುತು ಪತ್ತೆ ಹಚ್ಚಿದ್ದಾರೆ. ತನಿಖೆ ಚುರುಕುಗೊಳಿಸಿದ ಬೆನ್ನಲ್ಲೇ ಕೊಲೆಗಾರ ಪ್ರಿಯತಮ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಿಚಾರಣೆ ನಡೆಸಿದಾಗ ಕುಟುಂಬದ ಪಾತ್ರವೂ ಬಯಲಾಗಿದೆ. ಸದ್ಯ ಪೊಲೀಸರು ಪ್ರಿಯತಮ, ಆತನ ತಾಯಿ, ಸಹೋದರ ಮತ್ತು ಸಹೋದರಿ ನಾಲ್ವರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ.
