ಸಂಬಂಧಗಳ ಮೌಲ್ಯ ಎಲ್ಲಿದೆ? ಅತ್ತೆ-ಅಳಿಯ, ಅಣ್ಣ-ತಂಗಿ ಎಂಬ ಪವಿತ್ರ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆಯೇ? ಇಂತಹ ಪ್ರಶ್ನೆಗಳು ಮೂಡುವಂತೆ ಮಾಡಿದೆ ಉತ್ತರ ಪ್ರದೇಶದಲ್ಲಿ ನಡೆದ ಈ ವಿಲಕ್ಷಣ ಘಟನೆ. ಅಂದು ಮಗಳ ಜೀವನ (Up Woman Elopes) ಹಾಳುಮಾಡಿ ಕಾబోಯೇ ಅಳಿಯನನ್ನೇ ಎತ್ತಿಕೊಂಡು ಹೋಗಿದ್ದ ಮಹಿಳೆಯೊಬ್ಬಳು, ಈಗ ಅದೇ ಅಳಿಯನಿಗೆ ನಾಮ ಹಾಕಿ ತನ್ನ ಮಾಜಿ ಪತಿಯ ಸೋದರ ಸಂಬಂಧಿಯೊಂದಿಗೆ ಎಸ್ಕೇಪ್ ಆಗಿದ್ದಾಳೆ!

Up Woman Elopes – ಅಳಿಯನ ಜೊತೆ 10 ತಿಂಗಳ ಸಂಸಾರ!
ಕಳೆದ ವರ್ಷ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ನಾಗಲ ಮಚಾರಿಯಾ ಗ್ರಾಮದ ಜಿತೇಂದ್ರ ಕುಮಾರ್ ಎಂಬುವವರು ತಮ್ಮ ಮಗಳು ಶಿವಾನಿಯ ಮದುವೆಯನ್ನು ರಾಹುಲ್ ಎಂಬುವವನ ಜೊತೆ ನಿಶ್ಚಯಿಸಿದ್ದರು. 2025ರ ಏಪ್ರಿಲ್ 16ಕ್ಕೆ ಮದುವೆ ನಿಗದಿಯಾಗಿತ್ತು. ಆದರೆ, ಮದುವೆಗೆ ಕೇವಲ 9 ದಿನಗಳಿರುವಾಗ ಶಿವಾನಿಯ ತಾಯಿ ಅನಿತಾ ದೇವಿ, ಕಾಬೋಯೇ ಅಳಿಯ ರಾಹುಲ್ ಜೊತೆ ಓಡಿಹೋಗಿ ಇಡೀ ಗ್ರಾಮವೇ ಬೆಚ್ಚಿಬೀಳುವಂತೆ ಮಾಡಿದ್ದರು. ನಂತರ ಇವರಿಬ್ಬರೂ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಹತ್ತು ತಿಂಗಳುಗಳ ಕಾಲ ಜೊತೆಯಾಗಿ ವಾಸವಿದ್ದರು. Read this also : ಮಗಳೇ ಮನೆಗೆ ಬಾ ಎಂದು ಗೋಳಾಡಿದ ತಾಯಿ; ತಿರುಗಿ ನೋಡದೆ ಪ್ರಿಯಕರನ ಕೈ ಹಿಡಿದ ಮಗಳು…!
ಈಗ ‘ಬಾವ’ನ ಮೇಲೆ ಕಣ್ಣು!
ಕಥೆ ಇಲ್ಲಿಗೆ ಮುಗಿಯಲಿಲ್ಲ. ಬಿಹಾರದಲ್ಲಿ ರಾಹುಲ್ ಜೊತೆ ಸಂಸಾರ ಹೂಡಿದ್ದ ಅನಿತಾ ದೇವಿಗೆ ಅಲ್ಲಿ ತನ್ನ ಮಾಜಿ ಪತಿಯ ಸೋದರ ಸಂಬಂಧಿಯ (ಬಾವನ ವರಸೆ) ಪರಿಚಯವಾಗಿದೆ. ಬಟ್ಟೆ ವ್ಯಾಪಾರಿಯಾಗಿದ್ದ (Up Woman Elopes) ಆತನೊಂದಿಗೆ ಮಾತುಕತೆ ಶುರುವಾಗಿ, ಅದು ಪ್ರೇಮಕ್ಕೆ ತಿರುಗಿದೆ. ಫಲಿತಾಂಶ? ಹತ್ತು ತಿಂಗಳು ಜೊತೆಗಿದ್ದ ರಾಹುಲ್‌ನನ್ನು ನಡುನೀರಿನಲ್ಲಿ ಕೈಬಿಟ್ಟು, ಈಗ ಆತನ ಜೊತೆ ಪರಾರಿಯಾಗಿದ್ದಾಳೆ!

2 ಲಕ್ಷ ನಗದು, ಒಡವೆ ಸಹಿತ ನಾಪತ್ತೆ!
ಕೇವಲ ಪ್ರೀತಿಗಾಗಿ ಓಡಿಹೋದರೆ ಪರವಾಗಿಲ್ಲ ಎನ್ನಬಹುದಿತ್ತು, ಆದರೆ ಈಕೆ ಹೋಗುವಾಗ ಬರಿಗೈಯಲ್ಲಿ ಹೋಗಿಲ್ಲ. ರಾಹುಲ್ ಆರೋಪಿಸುವಂತೆ, ಅನಿತಾ ದೇವಿ (Up Woman Elopes) ಮನೆಯಲ್ಲಿದ್ದ 2 ಲಕ್ಷ ರೂಪಾಯಿ ನಗದು ಮತ್ತು ಬೆಲೆಬಾಳುವ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾಳೆ. ಮೋಸಹೋದ ರಾಹುಲ್ ಈಗ ಅಲಿಗಢದ ದಾದೋನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಆದರೆ, ಘಟನೆ ನಡೆದಿದ್ದು ಬಿಹಾರದಲ್ಲಿ ಎಂಬ ಕಾರಣಕ್ಕೆ ಪೊಲೀಸರು ದೂರನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
