Thursday, February 12, 2026
HomeNationalViral Video : ವ್ಯಾಲೆಂಟೈನ್ಸ್ ಡೇ ಶಾಪಿಂಗ್ ವೇಳೆ ಫುಲ್ ಡ್ರಾಮಾ: ಪ್ರೇಯಸಿ ಜೊತೆ ಸಿಕ್ಕಿಬಿದ್ದ...

Viral Video : ವ್ಯಾಲೆಂಟೈನ್ಸ್ ಡೇ ಶಾಪಿಂಗ್ ವೇಳೆ ಫುಲ್ ಡ್ರಾಮಾ: ಪ್ರೇಯಸಿ ಜೊತೆ ಸಿಕ್ಕಿಬಿದ್ದ ಪತಿರಾಯ, ಮಾಲ್‌ನಲ್ಲೇ ಕಿತ್ತಾಡಿದ ಪತ್ನಿ-ಗೆಳತಿ!

ಫೆಬ್ರವರಿ 14 ಬಂತೆಂದರೆ ಪ್ರೇಮಿಗಳ ಲೋಕದಲ್ಲಿ ಸಕ್ಕರೆ ಸವಿಯ ಸಂಭ್ರಮ. ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಎಲ್ಲರೂ ಪ್ಲಾನ್ ಮಾಡುವುದು ಸಹಜ. ಆದರೆ, (Viral Video) ಉತ್ತರ ಪ್ರದೇಶದ ಸೋನಭದ್ರದಲ್ಲಿ ನಡೆದ ಈ ಘಟನೆ ಮಾತ್ರ ‘ಪ್ರೀತಿ’ಗಿಂತ ಹೆಚ್ಚಾಗಿ ‘ಫೈಟಿಂಗ್’ನಿಂದಾಗಿ ಸುದ್ದಿಯಾಗಿದೆ. ತನ್ನ ಪ್ರೇಯಸಿಯೊಂದಿಗೆ ವ್ಯಾಲೆಂಟೈನ್ಸ್ ಡೇ ಶಾಪಿಂಗ್ ಮಾಡಲು ಹೋದ ವ್ಯಕ್ತಿಯೊಬ್ಬ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

Viral video captures dramatic fight after wife catches husband shopping with girlfriend in Sonbhadra mall

Viral Video – ಮಾಲ್‌ನಲ್ಲಿ ಸಖತ್ ಹೈಡ್ರಾಮಾ

ಉತ್ತರ ಪ್ರದೇಶದ ಸೋನಭದ್ರದ ಸಿವಿಲ್ ಲೈನ್ಸ್ ರಸ್ತೆಯಲ್ಲಿರುವ ಪ್ರಸಿದ್ಧ ಶಾಪಿಂಗ್ ಮಾಲ್‌ವೊಂದರಲ್ಲಿ ಈ ಸಿನಿಮಾ ಶೈಲಿಯ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮುಂಬರುವ ಪ್ರೇಮಿಗಳ ದಿನದ ಅಂಗವಾಗಿ ತನ್ನ ಗೆಳತಿಯನ್ನು ಮಾಲ್‌ಗೆ ಕರೆತಂದಿದ್ದ. ಇನ್ನೇನು ಉಡುಗೊರೆಗಳನ್ನು ಸೆಲೆಕ್ಟ್ ಮಾಡಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಆತನ ಪತ್ನಿ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟಿದ್ದಾಳೆ. ತನ್ನ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಇರುವುದನ್ನು ಕಂಡ ಪತ್ನಿಯ ಕೋಪ ನೆತ್ತಿಗೇರಿದೆ.

ಪತ್ನಿ ಬರುವ ಮುನ್ಸೂಚನೆ ಸಿಗುತ್ತಲೇ ಪತಿ ಪರಾರಿ

ಪತ್ನಿಯನ್ನು ನೋಡುತ್ತಿದ್ದಂತೆಯೇ ಆಘಾತಕ್ಕೊಳಗಾದ ಪತಿರಾಯ, ಅಲ್ಲಿಯವರೆಗೆ ಜೊತೆಗಿದ್ದ ಪ್ರೇಯಸಿಯನ್ನು ಅಕ್ಷರಶಃ ಕೈಬಿಟ್ಟು ಸದ್ದಿಲ್ಲದೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪತಿ ಎಸ್ಕೇಪ್ ಆದರೂ ಆಕ್ರೋಶಗೊಂಡ ಪತ್ನಿ ಮಾತ್ರ ಬಿಡಲಿಲ್ಲ. ಆತ ಕರೆತಂದಿದ್ದ ಮಹಿಳೆಯನ್ನು ಹಿಡಿದು ಪ್ರಶ್ನಿಸಲು ಶುರು ಮಾಡಿದಾಗ ಜಗಳ ತಾರಕಕ್ಕೇರಿದೆ. (Viral Video) ಸುಮಾರು 15 ನಿಮಿಷಗಳ ಕಾಲ ಮಾಲ್‌ನಲ್ಲೇ ಇಬ್ಬರು ಮಹಿಳೆಯರ ನಡುವೆ ಭೀಕರ ಕಾಳಗ ನಡೆದಿದೆ. Read this also : ಬುರ್ಖಾ ಹಾಕಿದ್ರೆ ಗೊತ್ತಾಗಲ್ಲ ಅಂದ್ಕೊಂಡಿದ್ದ ಭೂಪ! ಮುಂಬೈ ಮಹಿಳೆಯರ ಕೈಗೆ ಸಿಕ್ಕಿಬಿದ್ದಾಗ ನಡೆದಿದ್ದೇ ಬೇರೆ!

ಜುಟ್ಟು ಹಿಡಿದು ಕಿತ್ತಾಡಿದ ಮಹಿಳೆಯರು

ಈ ಘರ್ಷಣೆಯ ಸಮಯದಲ್ಲಿ ಇಬ್ಬರು ಮಹಿಳೆಯರು ಒಬ್ಬರನ್ನೊಬ್ಬರು ಬೈದಾಡಿಕೊಂಡಿದ್ದಲ್ಲದೆ, ಪರಸ್ಪರ ಜುಟ್ಟು ಹಿಡಿದು ಎಳೆದಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಕಚ್ಚುವ ಹಂತಕ್ಕೂ ತಲುಪಿದ್ದಾರೆ. ಮಾಲ್‌ನಲ್ಲಿದ್ದ ಗ್ರಾಹಕರು ಮತ್ತು ಮಹಿಳಾ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಲು ಹರಸಾಹಸ ಪಡಬೇಕಾಯಿತು. (Viral Video) ಈ ಇಡೀ ದೃಶ್ಯವನ್ನು ಅಲ್ಲಿನ ಜನರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Viral video captures dramatic fight after wife catches husband shopping with girlfriend in Sonbhadra mall

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾದ

ಈ ವಿಡಿಯೋ ವೈರಲ್ (Viral Video) ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಸಂಬಂಧಪಟ್ಟ ದಂಪತಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಪತ್ನಿಯ ದೂರಿನ ಆಧಾರದ ಮೇಲೆ ಪತಿಗೆ ಸರಿಯಾದ ಶಾಸ್ತಿ ಮಾಡಲಾಗಿದ್ದು, ಮುಂದೆ ಇಂತಹ ತಪ್ಪು ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಒಟ್ಟಿನಲ್ಲಿ ಪ್ರೀತಿಯ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದ ಆ ವ್ಯಕ್ತಿಗೆ ಈಗ ಪ್ರೇಮಿಗಳ ದಿನಕ್ಕಿಂತ ಹೆಚ್ಚಾಗಿ ಮನೆಯಲ್ಲಿ ದೊಡ್ಡ ಸಂಕಷ್ಟ ಎದುರಾಗಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular