ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ (Social Media) ಎನ್ನುವುದು ಸಂಬಂಧಗಳನ್ನು ಬೆಸೆಯುವುದಕ್ಕಿಂತ ಹೆಚ್ಚಾಗಿ ಮುರಿಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಬೆಳಗ್ಗೆ ಎದ್ದರೆ ಸಾಕು ಕೈಯಲ್ಲಿ ಮೊಬೈಲ್, ಅದರಲ್ಲಿ ರೀಲ್ಸ್ (Reels). ಇದೇ ರೀಲ್ಸ್ ಹುಚ್ಚು ಈಗ ಮಹಿಳೆಯೊಬ್ಬರ ಬಾಳಲ್ಲಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿದೆ.

ರೀಲ್ಸ್ ನೋಡುತ್ತಾ, ರೀಲ್ಸ್ ಸ್ಟಾರ್ ಜೊತೆ ಚಾಟಿಂಗ್ ಶುರು ಮಾಡಿದ 26 ವರ್ಷದ ಮಹಿಳೆಯೊಬ್ಬರು, ತನ್ನ ಇಬ್ಬರು ಮಕ್ಕಳು ಮತ್ತು ಗಂಡನನ್ನು ಬಿಟ್ಟು ಓಡಿ ಹೋಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
Viral – ರೀಲ್ಸ್ ನೋಡಿ ಲವ್ ಆಯ್ತು!
ಬಿಹಾರದ ಕಿಶನ್‌ಗಂಜ್ ನಿವಾಸಿ ಮಮತಾ (26) ಮತ್ತು ಪಾಟ್ನಾದ ಸನ್ನಿ ಎಂಬುವವರ ನಡುವಿನ ಈ ಲವ್ ಸ್ಟೋರಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸನ್ನಿ ವೃತ್ತಿಯಲ್ಲಿ ಸಲೂನ್ ಕೆಲಸ ಮಾಡುತ್ತಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದ. ಮುಖ್ಯವಾಗಿ ತನ್ನ ವೈಯಕ್ತಿಕ ಜೀವನದ ನೋವುಗಳನ್ನು (ಹೆಂಡತಿ ಬಿಟ್ಟು ಹೋದ ಕಥೆ) ರೀಲ್ಸ್ ಮೂಲಕ ಹೇಳಿಕೊಳ್ಳುತ್ತಿದ್ದ. ಕಳೆದ 4 ತಿಂಗಳ ಹಿಂದೆ ಮಮತಾ, ಸನ್ನಿಯ ರೀಲ್ಸ್‌ಗಳನ್ನು ನೋಡಲು ಶುರುಮಾಡಿದ್ದಾಳೆ. ಆತನ ವಿಡಿಯೋಗಳಿಗೆ ಲೈಕ್ ಒತ್ತುತ್ತಾ, ಕೊನೆಗೆ ಫೋನ್ ನಂಬರ್ ಪಡೆದು ಚಾಟಿಂಗ್‌ಗೆ ಇಳಿದಿದ್ದಾಳೆ.
Viral – ಗಂಡನ ಬಗ್ಗೆ ದೂರು, ಪ್ರಿಯಕರನ ಜೊತೆ ಪ್ಲಾನ್
ಸುಮಾರು ಎರಡು ತಿಂಗಳ ಕಾಲ ಇಬ್ಬರ ನಡುವೆ ಫೋನ್ ಸಂಭಾಷಣೆ ನಡೆದಿದೆ. ಈ ವೇಳೆ ಮಮತಾ, “ನನ್ನ ಗಂಡ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ನನಗೆ ಈ ಮದುವೆ ಇಷ್ಟವಿಲ್ಲ,” ಎಂದು ಸನ್ನಿ ಬಳಿ ಅಳಲು ತೋಡಿಕೊಂಡಿದ್ದಾಳೆ. ಇತ್ತ ಸನ್ನಿ ಕೂಡ ತನ್ನ ಹೆಂಡತಿ 2 ವರ್ಷಗಳ ಹಿಂದೆಯೇ ಓಡಿ ಹೋಗಿದ್ದಾಳೆ, ನಾನೂ ಒಂಟಿ ಎಂದು ಹೇಳಿಕೊಂಡಿದ್ದಾನೆ. ಮಾತುಕತೆ ಪ್ರೀತಿ-ಪ್ರೇಮಕ್ಕೆ ತಿರುಗಿ, ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. Read this also : ಅಯ್ಯೋ ದೇವ್ರೇ.. ಪ್ರಿಯಕರನ ಪತ್ನಿ ಬಂದ್ಲು ಅಂತ 10ನೇ ಮಹಡಿಯಿಂದ ನೇತಾಡಿದ ಯುವತಿ! ಮುಂದೇನಾಯ್ತು ಗೊತ್ತಾ?
Viral – ಮಕ್ಕಳನ್ನು ಬಿಟ್ಟು ಬಸ್ ಹತ್ತಿದ ಮಮತಾ!
ಡಿಸೆಂಬರ್ 3 ರಂದು ಮನೆಯಲ್ಲಿ ಕೆಲಸವಿದೆ ಎಂದು ಸುಳ್ಳು ಹೇಳಿ ಮಮತಾ ಕಿಶನ್‌ಗಂಜ್‌ನಿಂದ ಬಸ್ ಹತ್ತಿ ಪಾಟ್ನಾಗೆ ಬಂದಿದ್ದಾಳೆ. ಡಿಸೆಂಬರ್ 4 ರಂದು ಪಾಟ್ನಾದಲ್ಲಿ ಸನ್ನಿಯನ್ನು ಭೇಟಿಯಾಗಿದ್ದಾಳೆ. ಸನ್ನಿ ಹೇಳುವ ಪ್ರಕಾರ, ಅವರಿಬ್ಬರು ದೇವಸ್ಥಾನವೊಂದರಲ್ಲಿ ಮದುವೆಯಾಗಿ, ಕಳೆದ 4 ದಿನಗಳಿಂದ ಗಂಡ-ಹೆಂಡತಿಯಂತೆ ಒಂದೇ ಮನೆಯಲ್ಲಿ ವಾಸವಿದ್ದರು.

Viral – ಟ್ವಿಸ್ಟ್ ಕೊಟ್ಟ ಮಾವ – ಸಿಕ್ಕಿಬಿದ್ದ ಜೋಡಿ
ಇತ್ತ ಮಮತಾ ನಾಪತ್ತೆಯಾದ ಬಗ್ಗೆ ಆಕೆಯ ಗಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಮಮತಾಳ ಮಾವ (ಗಂಡನ ತಂದೆ) ಬುದ್ಧಿವಂತಿಕೆ ಉಪಯೋಗಿಸಿದ್ದಾರೆ. ಮಗನ ಹೆಂಡತಿಗೆ ನಿರಂತರವಾಗಿ ಕರೆ ಮಾಡಿ, “ನೀವಿಬ್ಬರೂ ವಾಪಸ್ ಬನ್ನಿ, ನಾವೇ ನಿಮಗೆ ಕೋರ್ಟ್ ಮ್ಯಾರೇಜ್ (Court Marriage) ಮಾಡಿಸುತ್ತೇವೆ,” ಎಂದು ನಂಬಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಈ ರೀಲ್ಸ್ ಜೋಡಿ, ಡಿಸೆಂಬರ್ 8 ರಂದು ಪಾಟ್ನಾದ ಗಾಂಧಿ ಮೈದಾನಕ್ಕೆ ಬಂದಿದೆ. ಅಲ್ಲಿ ಕಾಯುತ್ತಿದ್ದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
Viral – ಪೊಲೀಸರ ಮುಂದೆ ಉಲ್ಟಾ ಹೊಡೆದ ಮಮತಾ!
ಕಥೆಯ ಅಸಲಿ ಕ್ಲೈಮ್ಯಾಕ್ಸ್ ಇರೋದೇ ಇಲ್ಲಿ. ಪೊಲೀಸರು ಹಿಡಿದ ತಕ್ಷಣ ಮಮತಾ ವರಸೆ ಬದಲಿಸಿದ್ದಾಳೆ. “ನಾನು ಪಾಟ್ನಾಗೆ ಬಂದ ಮೇಲಷ್ಟೇ ಸನ್ನಿಗೆ ಈಗಾಗಲೇ ಮದುವೆಯಾಗಿರುವ ವಿಷಯ ಗೊತ್ತಾಯಿತು. ಅವನು ನನ್ನ ಮೇಲೆ ಮಾಟ-ಮಂತ್ರ (Black Magic) ಮಾಡಿ ನನ್ನನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ. ನನಗೆ ಅರಿವಿಲ್ಲದಂತೆ ನಾನು ಇಲ್ಲಿಗೆ ಬಂದೆ,” ಎಂದು ಆರೋಪಿಸಿದ್ದಾಳೆ.
