‘ಶೋಲೆ’ ಸಿನಿಮಾದಲ್ಲಿ ವೀರು (ಧರ್ಮೇಂದ್ರ) “ನನ್ನ ಮದುವೆ ಬಸಂತಿ ಜೊತೆ ಮಾಡಿಸದಿದ್ದರೆ ಟ್ಯಾಂಕ್ ಮೇಲಿಂದ ಬಿದ್ದು ಪ್ರಾಣ ಬಿಡುತ್ತೇನೆ” ಎಂದು ಬೆದರಿಕೆ ಹಾಕುವ ದೃಶ್ಯ ನಿಮಗೆ ನೆನಪಿರಬಹುದು. ಸಿನಿಮಾದಲ್ಲಿ ನಡೆದ ಅಂತಹದ್ದೇ ಒಂದು ಹೈಡ್ರಾಮಾ ಬುಧವಾರ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲೊಬ್ಬ 19 ವರ್ಷದ ಪಡ್ಡೆಹುಡುಗ ಪ್ರೀತಿಗಾಗಿ ಬರೋಬ್ಬರಿ 33 ಕೆವಿ ವಿದ್ಯುತ್ ಟವರ್ ಏರಿ ಕುಳಿತ ಘಟನೆ ನಡೆದಿದೆ.

Love drama – ಏನಿದು ಲವ್ ಡ್ರಾಮಾ?
ಶಹದೋಲ್‌ನ ದೇವಲಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ನಿಮ್ಹಿಹಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂತೋಷ್ ಸಾಕೇತ್ (19) ಎಂಬ ಯುವಕನೇ ಈ ‘ರಿಯಲ್ ಲೈಫ್ ವೀರು’. ಸಂತೋಷ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಯುವತಿಯ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಅಷ್ಟೇ ಅಲ್ಲ, ಪ್ರಿಯತಮೆ ಕೂಡ ಇವನ ಫೋನ್ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಳು. ಇದರಿಂದ ಮನನೊಂದ ಸಂತೋಷ್, ನೇರವಾಗಿ 33 ಕೆವಿ ಹೈಟೆನ್ಷನ್ ವಿದ್ಯುತ್ ಟವರ್ ಏರಿ ಕುಳಿತಿದ್ದಾನೆ. Read this also : ಪಿಜ್ಜಾ ಡೆಲಿವರಿಗಿಂತ ಫಾಸ್ಟ್ ಈ ಡಿವೋರ್ಸ್! ಅತ್ತೆ ಮನೆಗೆ ಕಾಲಿಟ್ಟ 20 ನಿಮಿಷಕ್ಕೇ ಸಂಬಂಧ ಮುರಿದುಕೊಂಡ ವಧು
Love drama – 3 ಗಂಟೆಗಳ ಕಾಲ ಆತಂಕ
ಸುಮಾರು 3ನೇ ಹಂತದವರೆಗೂ ಟವರ್ ಏರಿದ ಸಂತೋಷ್, “ನನ್ನವಳು ಸಿಗುವವರೆಗೂ ನಾನು ಕೆಳಗೆ ಇಳಿಯಲ್ಲ, ಇಲ್ಲಿಂದಲೇ ಹಾರಿ ಪ್ರಾಣ ಬಿಡುತ್ತೇನೆ” ಎಂದು ಕೂಗಾಡಲು ಶುರುಮಾಡಿದ್ದ. ಇದನ್ನು ನೋಡಿದ ಸ್ಥಳೀಯರು ಮತ್ತು ದೇವಲಂಡ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸುಮಾರು 3 ಗಂಟೆಗಳ ಕಾಲ ಆತನ ಮನವೊಲಿಸಲು ಹರಸಾಹಸ ಪಟ್ಟರೂ ಆತ ಜಗ್ಗಲಿಲ್ಲ.
Love drama – ಪೊಲೀಸರ ‘ಮಾಸ್ಟರ್ ಪ್ಲಾನ್’ ವರ್ಕ್ ಔಟ್ ಆಯ್ತು!
ಯುವಕ ಯಾವುದೇ ಕಾರಣಕ್ಕೂ ಮಾತು ಕೇಳುತ್ತಿಲ್ಲ ಎಂದು ಅರಿತ ಪೊಲೀಸರು ಒಂದು ಚಾಣಾಕ್ಷ ಬುದ್ಧಿ ಉಪಯೋಗಿಸಿದ್ದಾರೆ. ಸ್ಥಳದಲ್ಲಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ (Lady Constable) ಫೋನ್ ಕೊಟ್ಟು, ಯುವಕನ ಪ್ರಿಯತಮೆಯಂತೆ ನಟಿಸಿ ಮಾತನಾಡುವಂತೆ ಸೂಚಿಸಿದ್ದಾರೆ. ಆ ಲೇಡಿ ಕಾನ್ಸ್ಟೇಬಲ್ ಫೋನ್‌ನಲ್ಲಿ, “ನಾನು ನಿನ್ನನ್ನೇ ಮದುವೆಯಾಗುತ್ತೇನೆ, ದಯವಿಟ್ಟು ನೀನು ಕೆಳಗೆ ಬಾ” ಎಂದು ಪ್ರೀತಿಯಿಂದ ನಾಟಕವಾಡಿದ್ದಾರೆ. ಪ್ರಿಯತಮೆಯೇ ಒಪ್ಪಿಕೊಂಡಳು ಎಂದು ನಂಬಿದ ಸಂತೋಷ್, ಖುಷಿಯಿಂದ ಟವರ್‌ನಿಂದ ಕೆಳಗೆ ಇಳಿದು ಬಂದಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Love drama – ಯುವಕ ಸೇಫ್
ಪೊಲೀಸರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸುರಕ್ಷಿತವಾಗಿ ಕೆಳಗೆ ಇಳಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ಬುದ್ಧಿವಾದ ಹೇಳಿದ್ದಾರೆ. ಒಟ್ಟಿನಲ್ಲಿ ಪ್ರೀತಿಗಾಗಿ ಯುವಕ ಮಾಡಿದ ಈ ಹುಚ್ಚಾಟ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
