ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊಸ ಸಾರಿಗೆ ನಿಯಮಾವಳಿ ರೂಪಿಸಿದೆ. ಅದರಲ್ಲೂ ಪ್ರಮುಖವಾಗಿ ಚಾಲನಾ ಪರವಾನಿಗೆ ಪಡೆಯುವ ವಿಧಾನವನ್ನು ಬದಲಿಸಿದೆ. ಈ ಹೊಸ ನಿಯಮ ಜೂನ್ 1 ರಿಂದ ಜಾರಿಯಾಗಲಿದೆ ಎಂದು ತಿಳಿದುಬಂದಿದೆ. ಈ ಹೊಸ ನಿಯಮದಂತೆ ಇನ್ನು ಮುಂದೆ ಚಾಲನಾ ಪರವಾನಿಗೆ ಪಡೆಯಲು ಆರ್.ಟಿ.ಒ ಎದುರು ಪರೀಕ್ಷೆ ಪಾಸ್ ಮಾಡಬೇಕಿಲ್ಲ. ಆರ್.ಟಿ.ಒ ಎದುರು ಡ್ರೈವಿಂಗ್ ಟೆಸ್ಟ್ ಪಾಸ್ ಮಾಡದೆ ಲೈಸೆನ್ಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೊಸ ಸಾರಿಗೆ ನಿಯಮಗಳ ಬಗ್ಗೆ ತಿಳಿಯಲು ಮುಂದೆ ಓದಿ…
ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಜಾರಿಗೊಳಿಸಿದ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಡ್ರೈವಿಂಗ್ ಪರೀಕ್ಷೆಯನ್ನು ಖಾಸಗಿ ಸಂಸ್ಥೆಗಳು ಮಾಡಲಿದೆ. ಸರ್ಕಾರದಿಂದ ಅಧಿಕೃತ ಪರವಾನಿಗೆ ಪಡೆದ ಖಾಸಗಿ ಸಂಸ್ಥೆಗಳಲ್ಲಿ ಚಾಲನಾ ಪರವಾನಿಗೆ ಪಡೆಯಬಹುದಾಗಿದೆ. ಈ ಹೊಸ ನಿಯಮ ಜೂ.1, 2024 ರಿಂದ ಜಾರಿಯಾಗಲಿದೆ. ಖಾಸಗಿ ಸಂಸ್ಥೆಗಳಲ್ಲಿ ಕಾರು, ದ್ವಿಚಕ್ರ ವಾಹನ ಅಥವಾ ಇತರ ವಾಹನಗಳನ್ನು ಕಲಿತು ಅದೇ ಸಂಸ್ಥೆಯ ಅಧಿಕಾರಿಗಳ ಮುಂದೆ ಟ್ರಯಲ್ ನೀಡಿ ಖಾಸಗಿ ಸಂಸ್ಥೆಗಳ ಸಿಬ್ಬಂದಿ ಅಥವಾ ಅಧಿಕಾರಿಗಳು ಡ್ರೈವಿಂಗ್ ಲೆಸೆನ್ಸ್ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ತರಬೇತಿ ಸಂಸ್ಥೆಯಲ್ಲಿ ಕಲಿತು ಆರ್.ಟಿ.ಒ ಮುಂದೆ ಟೆಸ್ಟ್ ನೀಡಬೇಕಾಗಿತ್ತು. ಆದರೆ ಹೊಸ ನಿಯಮದ ಪ್ರಕಾರ ಆರ್.ಟಿ.ಒ ಮುಂದೆ ಡ್ರೈವಿಂಗ್ ಟೆಸ್ಟ್ ಗೆ ಹಾಜರಾಗುವುದಕ್ಕೆ ಬ್ರೇಕ್ ಹಾಕಲಾಗಿದೆ.
ಸಾರಿಗೆ ಇಲಾಖೆಯ ಹೊಸ ನಿಯಮಾವಳಿಯಂತೆ ಟ್ರಾಫಿಕ್ ನಿಯಮ ದಂಡದಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ. ಅಪ್ರಾಪ್ತರು ವಾಹನ ಚಲಾಯಿಸಿದರೇ 2500 ದಂಡ, ಅತೀ ವೇಗದ ಪ್ರಯಾಣಕ್ಕೆ 1000-2000 ರವರೆಗೂ ದಂಡ, ಜೊತೆಗೆ ಕಾರು ಮಾಲೀಕರ ರಿಜಿಸ್ಟ್ರೇಷನ್ ರದ್ದು ಮಾಡುವುದರ ಜೊತೆಗೆ ಅಪ್ರಾಪ್ತರು ವಾಹನ ಚಲಾಯಿಸಿದರೇ ಅವರಿಗೆ 25 ವರ್ಷಗಳ ಕಾಲ ಲೈಸೆನ್ಸ್ ಪಡೆಯಲು ಸಾಧ್ಯವಾಗುವುದಿಲ್ಲ. ಇನ್ನೂ ಹೊಸ ಪರವಾನಿಗೆ ಪಡೆಯಲು ಸಹ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳೀಕರಣ ಗೊಳಿಸಲಾಗಿದೆ. ಇನ್ನು ಸರ್ಕಾರದಿಂದ ಲೈಸೆನ್ಸ್ ನೀಡಲು ಅಧಿಕೃತ ಪರವಾನಗೆ ಪಡೆಯುವ ಸಂಸ್ಥೆಗಳಿಗೂ ಮಾನದಂಡ ರೂಪಿಸಲಾಗಿದೆ. ಇದೇ ವೇಳೆ ಲೈಸೆನ್ಸ್, ಅರ್ಜಿ ಸೇರಿದಂತೆ ಶುಲ್ಕ ವಿಧಿಸುವಲ್ಲೂ ಸರ್ಕಾರ ನಿಯಮ ರೂಪಿಸಿದೆ.
ಹೊಸ ಶುಲ್ಕಗಳು:
- ಲರ್ನಿಂಗ್ ಲೈಸೆನ್ಸ್(ಫಾರ್ಮ್ 3) : 150 ರೂಪಾಯಿ
- ಲರ್ನಿಂಗ್ ಲೈಸೆನ್ಸ್ ಪರೀಕ್ಷಾ ಶುಲ್ಕಾ (ಅಥವಾ ಮರಳಿ ಪ್ರಯತ್ನ) : 50 ರೂಪಾಯಿ
- ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಶುಲ್ಕ: 300 ರೂಪಾಯಿ
- ಡ್ರೈವಿಂಗ್ ಲೈಸೆನ್ಸ್ ನೀಡುವ ಶುಲ್ಕ : 200 ರೂಪಾಯಿ
- ಹೆಚ್ಚುವರಿ ವಾಹನ ಕ್ಲಾಸ್ ಲೈಸೆನ್ಸ್ ಶುಲ್ಕ: 500 ರೂಪಾಯಿ
- ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಶುಲ್ಕ:1000 ರೂಪಾಯಿ
- ಲೈಸೆನ್ಸ್ ನವೀಕರಣ ಶುಲ್ಕ : 200 ರೂಪಾಯಿ
- ಅವಧಿ ಬಳಿ ಲೈಸೆನ್ಸ್ ನವೀಕರಣ ಶುಲ್ಕ : 300 ರೂಪಾಯಿ
- ಅವಧಿ ಮುಗಿದ ಒಂದು ವರ್ಷದ ಬಳಿಕ ನವೀಕರಣ: 1000 ರೂಪಾಯಿ