Friday, November 22, 2024

ಆ ತಾಯಿ ಸತ್ತಿದ್ದು ಸೋಷಿಯಲ್ ಮಿಡಿಯಾದಲ್ಲಿ ಎದುರಾದ ಟ್ರೋಲ್ ಗಳಿಂದ, ಟ್ರೋಲ್ ಗಳಿಂದ ಬೇಸತ್ತು ಆತ್ಮಹತ್ಯೆ…!

ಕೆಲವು ದಿನಗಳ ಹಿಂದೆಯಷ್ಟೆ ಚೆನೈನ  ತಿರುಮುಲ್ಲೈವಾಯಲ್ ನ ಅಪಾರ್ಟ್‌ಮೆಂಟ್ ನಲ್ಲಿ ಕೆಳಗೆ ಬೀಳುತ್ತಿದ್ದ ಮಗುವನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿತ್ತು. ಆ ಸಮಯದಲ್ಲಿ ತೆಗೆದಂತಹ ಮಗುವಿನ ರಕ್ಷಣೆಯ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಆ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸೋಷಿಯಲ್ ಮಿಡಿಯಾದಲ್ಲಿ ಬಂದಂತಹ ಟ್ರೋಲ್ ಗಳು ಎಂದು ಹೇಳಲಾಗುತ್ತಿದೆ. ಈ ಕುರಿತು ಕೋಯಮತ್ತೂರು ಜಿಲ್ಲೆಯ ಕರಮಡೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳೆದ ಏಪ್ರಿಲ್ 28 ರಂದು ಚೆನೈನ  ತಿರುಮುಲ್ಲೈವಾಯಲ್ ನ ಅಪಾರ್ಟ್‌ಮೆಂಟ್ ನಲ್ಲಿ ಕೆಳಗೆ ಬೀಳುತ್ತಿದ್ದ ಮಗುವನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿತ್ತು. ಕೋಯಮತ್ತೂರಿನ ಕರಮಡೈ ಬೆಳ್ಳತ್ತಿಯ ವಾಸುದೇವನ್ ರವರ ಎರಡನೇ ಮಗಳು ರಮ್ಯಾ ಹಾಗೂ ಆಕೆಯ ಪತಿ ವೆಂಕಟೇಶ್ ತಮ್ಮ ಇಬ್ಬರು ಮಕ್ಕಳೊಂದಿಗೆ ತಿರುಮುಲ್ಲೈವಾಯಲ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. ಕೆಲವು ದಿನಗಳ ಹಿಂದೆಯ ಅಪಾರ್ಟ್‌ಮೆಂಟ್ ಮೇಲಿಂದ ಅವರ 7 ತಿಂಗಳ ಮಗು ಬೀಳುತ್ತಿದ್ದನ್ನು ಗಮನಸಿದ ಸ್ಥಳಿಯರು ಮಗುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದರು. ಕೆಲವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಮಗುವನ್ನು ರಕ್ಷಣೆ ಮಾಡಿದ್ದರು. ಈ ಸಂಬಂಧ ಕೆಲವೊಂದು ಪೊಟೋಗಳು ವಿಡಿಯೋ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು.

mother suicide for trolls 1

ಇನ್ನೂ ಈ ಘಟನೆಯ ಬಳಿಕ ವೈರಲ್ ಆದಂತಹ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳು, ಟ್ರೋಲ್ ಗಳು ಬಂದಿದೆ. ಮಗುವನ್ನು ಸರಿಯಾಗಿ ನೋಡಿಕೊಳ್ಳದೇ ಇರುವುದು ತಾಯಿ ತಪ್ಪು. ಮಗುವಿನ ಬಗ್ಗೆ ತಾಯಿಗೆ ತುಂಬಾ ನಿರ್ಲಕ್ಷ್ಯ ಎಂಬ ಕಾಮೆಂಟ್ ಗಳು ಹೆಚ್ಚಾಗಿ ಬಂದಿದೆ. ಈ ಕಾರಣದಿಂದ ರಮ್ಯಾ ತೀವ್ರ ಒತ್ತಡಕ್ಕೆ ಗುರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ರಮ್ಯಾ ಪತಿ ಹಾಗೂ ಮಗುವಿನೊಂದಿಗೆ ತವರಿಗೆ ಬಂದಿದ್ದಾರೆ. ಮೇ.19 ರಂದು ರಮ್ಯಾ ರವರ ತಾಯಿ, ತಂದೆ ಹಾಗೂ ಕುಟುಂಬದವರು ಕಾರ್ಯಕ್ರಮಕ್ಕೊಂದಕ್ಕೆ ಹೋಗಿದ್ದರು. ಮನೆಯಲ್ಲಿ ಒಬ್ಬಳೇ ಇದ್ದಾಗ ರಮ್ಯಾ ಹಠಾತ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಪೋಷಕರು ಮನೆಗೆ ವಾಪಸ್ಸಾದಾಗ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾಗಿ ಘೋಷಣೆ ಮಾಡಿದ್ದಾರೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!