ಒಂದು ವರ್ಷ ನಮ್ಮ ಸರ್ಕಾರ ಹೇಗೆ ಕೆಲಸ ಮಾಡಿದೆ ಅಂತಾ ಜನ ಹೇಳ್ತಾರೆ, ನಾಯಕರಲ್ಲ ಎಂದ ಡಿಸಿಎಂ ಡಿಕೆಶಿ….!

ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಕಾಂಗ್ರೇಸ್ ಆಡಳಿತವನ್ನು ವಿರೋಧ ಪಕ್ಷದ ನಾಯಕರು ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‍.ಅಶೋಕ್ , ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರ ಟೀಕೆ ಮಾಡಿದ್ದಾರೆ. ಈ ಕುರಿತು ಡಿ.ಕೆ.ಶಿವಕುಮಾರ್‍ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವರ್ಷ ಸರ್ಕಾರ ಹೇಗೆ ಕೆಲಸ ಮಾಡಿದೆ ಅಂತಾ ಜನರು ಹೇಳಬೇಕು, ನಾಯಕರು ಹೇಳೋದಲ್ಲ ಎಂದು ಆರೋಪಗಳಿಗೆ ಕೌಂಟರ್‍ ಕೊಟ್ಟಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒಂದು ವರ್ಷ ಸರ್ಕಾರ ಐಸಿಯುನಲ್ಲಿತ್ತು ಎಂದು ಹೇಳಿಕೆ ನೀಡಿದ್ದರು. ಈ ಆರೋಪಕ್ಕೆ ಡಿಕೆಶಿ ಕೌಂಟರ್‍ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಹೇಗೆ ಕೆಲಸ ಮಾಡಿದೆ ಅಂತಾ ಜನ ಹೇಳ್ತಾರೆ. ನಾಯಕರು ಹೇಳೋದಲ್ಲ. ಹೆಣ್ಣು ಮಕ್ಕಳ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆಯಾಗಿದೆ ಎಂದು ತಾಯಂದಿರು ಹೇಳಬೇಕು. ಚುನಾವಣೆಗೂ ಮುನ್ನಾ ಕುಮಾರಸ್ವಾಮಿಯವರೇ ನುಡಿಮುತ್ತು ಹೇಳಿದ್ದರು. ಅವರ ನುಡಿ ಮುತ್ತುಗಳ ನಿಮ್ಮ ಹತ್ತಿರ ಇದೆಯಲ್ಲ. ನಮ್ಮ ಬಗ್ಗೆ ಅವರೇ ಹೇಳಬೇಕು. ನಾವು ನಮ್ಮ ಬಗ್ಗೆ ಶಭಾಷ್ ಗಿರಿ ಕೊಡಿ ಅಂತಾ ಕೇಳಲ್ಲ, ಪಾಪ ಅವರು ಇನ್ನೇನು ಮಾಡುತ್ತಾರೆ. ಸರ್ಕಾರ ಐಸಿಯುನಲ್ಲಿ ಇತ್ತೋ ಅಥವಾ ಏನಾಗಿತ್ತೋ ಎಂಬುದನ್ನು ಜನ ಹೇಳಬೇಕು ಎಂದು ಕೌಂಟರ್‍ ಕೊಟ್ಟಿದ್ದಾರೆ.

D K Shivakumar comments about 1 year succes of govt 1

ಇನ್ನೂ ಇದೇ ಸಮಯದಲ್ಲಿ ಕಾಂಗ್ರೇಸ್ ಸರ್ಕಾರ ಪೋನ್ ಟ್ಯಾಪ್ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದು, ಇದಕ್ಕೆ ಉತ್ತರಿಸಿದ ಡಿಕೆಶಿ ಕಾಂಗ್ರೇಸ್ ಸರ್ಕಾರ ಪೋನ್ ಟ್ಯಾಪ್ ಮಾಡೋಲ್ಲ. ಪೋನ್ ಟ್ಯಾಪ್ ಮಾಡೋಕೆ ಅವರು ಏನು ಭಯೋತ್ಪಾದಕರೇ, ಅವರು ರಾಜಕೀಯ ನಾಯಕರು, ಅವರ ಪೋನ್ ಏಕೆ ಟ್ಯಾಪ್ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ನಿಮ್ಮೆಲ್ಲರ ಸಹಕಾರದಿಂದ ಜನರಿಗೆ ತೃಪ್ತಿದಾಯಕವಾದ ಆಡಳಿತ ನೀಡಿದ್ದೇವೆ. ಕೇವಲ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲ. ಅನೇಕ ಅಭಿವೃದ್ದಿ ಕಾರ್ಯಕ್ರಮಗಳಿಗೆ ರೂಪುರೇಷ ಸಿದ್ದಪಡಿಸಲಾಗಿದೆ. ಎಲೆಕ್ಷನ್ ಬಳಿಕ ಎಲ್ಲವೂ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Next Post

ಆ ತಾಯಿ ಸತ್ತಿದ್ದು ಸೋಷಿಯಲ್ ಮಿಡಿಯಾದಲ್ಲಿ ಎದುರಾದ ಟ್ರೋಲ್ ಗಳಿಂದ, ಟ್ರೋಲ್ ಗಳಿಂದ ಬೇಸತ್ತು ಆತ್ಮಹತ್ಯೆ…!

Tue May 21 , 2024
ಕೆಲವು ದಿನಗಳ ಹಿಂದೆಯಷ್ಟೆ ಚೆನೈನ  ತಿರುಮುಲ್ಲೈವಾಯಲ್ ನ ಅಪಾರ್ಟ್‌ಮೆಂಟ್ ನಲ್ಲಿ ಕೆಳಗೆ ಬೀಳುತ್ತಿದ್ದ ಮಗುವನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿತ್ತು. ಆ ಸಮಯದಲ್ಲಿ ತೆಗೆದಂತಹ ಮಗುವಿನ ರಕ್ಷಣೆಯ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಆ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸೋಷಿಯಲ್ ಮಿಡಿಯಾದಲ್ಲಿ ಬಂದಂತಹ ಟ್ರೋಲ್ ಗಳು ಎಂದು ಹೇಳಲಾಗುತ್ತಿದೆ. ಈ ಕುರಿತು ಕೋಯಮತ್ತೂರು ಜಿಲ್ಲೆಯ ಕರಮಡೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ […]
mother suicide for trolls
error: Content is protected !!