ಮೆಟ್ರೋನಲ್ಲಿ ಯುವತಿಯ ಅಶ್ಲೀಲ ರೀಲ್ಸ್, ಮುಜುಗರಕ್ಕೀಡಾದ ಪ್ರಯಾಣಿಕರು, ವೈರಲ್ ಆದ ವಿಡಿಯೋ…..!

ದೆಹಲಿಯ ಮೆಟ್ರೋ ದಲ್ಲಿ ಕೆಲವರು ಮಾಡುತ್ತಿರುವಂತಹ ರೀಲ್ಸ್, ರೊಮ್ಯಾನ್ಸ್ ನಂತಹ ವಿಡಿಯೋಗಳು ಭಾರಿ ಸುದ್ದಿಯಾಗುತ್ತಿವೆ. ಎಲ್ಲಾ ಪ್ರಯಾಣಿಕರಿರುವಾಗಲೇ ಅಸಭ್ಯ ವರ್ತನೆ, ಅಶ್ಲೀಲ ನೃತ್ಯ, ರೊಮ್ಯಾನ್ಸ್, ಕಿಸ್ಸಿಂಗ್ ಗಳಂತಹ ಘಟನೆಗಳು ಮರುಕಳಿಸುತ್ತಲೇ ಇದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಷ ಸಹ ವ್ಯಕ್ತವಾಗುತ್ತಿದೆ. ಮೆಟ್ರೋ ಸಹ ಅಂತಹವರಿಗೆ ಎಚ್ಚರಿಕೆ ನೀಡಿದ್ದರೂ ಪದೇ ಪದೇ ಅಂತಹ ಘಟನೆಗಳು ಮರುಕಳುಸುತ್ತಿವೆ. ಇದೀಗ ಯುವತಿಯೊಬ್ಬಳು ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಅಶ್ಲೀಲ ನೃತ್ಯ ಮಾಡಿದ್ದು, ಇತರೆ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

women bad reels during Delhi Metro 0

ದೆಹಲಿ ನಗರದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ಮೆಟ್ರೋ ಇತ್ತೀಚಿಗೆ ವಿವಿಧ ಕಾರಣಗಳಿಂದ ಸುದ್ದಿಯಾಗುತ್ತಿದೆ. ಈ ಹಾದಿಯಲ್ಲೇ ಮೆಟ್ರೋದ ಲೇಡಿಸ್ ಕೋಚ್ ಹತ್ತಿದ ಯುವತಿಯೊಬ್ಬಳು ರೈಲು ಚಲಿಸುತ್ತಿದ್ದಂತೆ ರೀಲ್ಸ್ ಮಾಡಲು ಆರಂಭಿಸಿದ್ದಾರೆ. ಆರಂಭದಲ್ಲಿ ಭೋಜ್ ಪುರಿ ಹಾಡಿಗೆ ಅಶ್ಲೀಲವಾಗಿ ನೃತ್ಯ ಮಾಡಿದ್ದಾಳೆ. ಬಳಿಕ ಹಿಂದಿ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದಾಳೆ. ಈ ಎರಡೂ ನೃತ್ಯಗಳನ್ನ ನೋಡಿದ ಸಹ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದಾರೆ ಎನ್ನಲಾಗಿದೆ. ಇನ್ನೂ ಆ ಯುವತಿ ಈ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯುವತಿಯ ಈ ಹುಚ್ಚಾಟಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅನೇಕರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರನ್ನು ಆಹ್ವಾನಿಸುವಂತಹ ಹೊಸ ವಿಧಾನ ಎಂದು ಅನೇಕರು ವ್ಯಂಗವಾಡುತ್ತಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ: https://x.com/DeepikaBhardwaj/status/1792116027662410061

ಇನ್ನೂ ದೆಹಲಿ ಮೆಟ್ರೋದಲ್ಲಿ ಇಂತಹ ಘಟನೆಗಳು ಪದೇ ಪದೇ ಘಟನೆಗಳು ನಡೆಯುತ್ತಿವೆ. ಮೆಟ್ರೋ ಸಹ ಈ ಕುರಿತು ಎಚ್ಚರಿಕೆಗಳನ್ನು ನೀಡಿದೆ. ಆದರೂ ಸಹ ಈ ಹುಚ್ಚಾಟಗಳು ನಿಯಂತ್ರಣವಾಗುತ್ತಿಲ್ಲ. ಇನ್ನೂ ಈ ಬಗ್ಗೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳನ್ನು ನಿಯಂತ್ರಣ ಮಾಡಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಮೆಟ್ರೋ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜನರು ಆಕ್ರೋಷ ಹೊರಹಾಕುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಬೆಂಗಳೂರಿನ ಮೆಟ್ರೋದಲ್ಲೂ ಸಹ ಜೋಡಿಯೊಂದು ರೊಮ್ಯಾನ್ಸ್ ಮಾಡಿಕೊಳ್ಳುತ್ತಾ ಕಾಣಿಸಿಕೊಂಡಿತ್ತು. ಜೊತೆಗೆ ಒಡಿಶಾದ ಸಾರ್ವಜನಿಕ ಬಸ್ ನಲ್ಲೂ ಜೋಡಿಯೊಂದು ರೊಮ್ಯಾನ್ಸ್ ಮಾಡಿಕೊಂಡಿತ್ತು. ಈ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು.

Leave a Comment

Your email address will not be published. Required fields are marked *

Scroll to Top