ಪತ್ನಿಯ ಶೀಲ ಶಂಕಿಸಿ, ಪತ್ನಿಯ ಗುಪ್ತಾಂಗಕ್ಕೆ ಕಬ್ಬಿಣದ ಚೈನ್ ನಿಂದ ಬೀಗ ಹಾಕಿದ ಪತಿ….!

ಗಂಡ-ಹೆಂಡತಿಯ ನಡುವೆ ಅನುಮಾನಗಳು ಮನೆ ಮಾಡಿದಾಗ ಕೊಲೆ, ಹಲ್ಲೆಗಳು ನಡೆಯುತ್ತಿರುತ್ತವೆ. ಅಂತಹ ಅನೇಕ ಘಟನೆಗಳು ನಡೆದಿವೆ. ಇದೀಗ ಪತ್ನಿಯ ಶೀಲ ಶಂಕಿಸಿದ ಪತಿಯೋರ್ವ ತನ್ನ ಪತ್ನಿಯ ಗುಪ್ತಾಂಗಕ್ಕೆ ಕಬ್ಬಿಣದ ಚೈನ್ ಮೂಲಕ ಬೀಗ ಹಾಕಿದಂತಹ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ಪಿಂಪ್ರಿ ಚಿಂಚಿವಾಡ್ ಎಂಬಲ್ಲಿ ನಡೆದಿದೆ.

ನೇಪಾಳ ಮೂಲದ ಈ ದಂಪತಿ ಮಹಾರಾಷ್ಟ್ರದ ಚಿಂಚಿವಾಡ್ ಎಂಬಲ್ಲಿ ವಾಸ ಮಾಡುತ್ತಿದ್ದಾರೆ. ಪತಿಗೆ 30 ವರ್ಷ ವಯಸ್ಸಾಗಿದ್ದು, ಆತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. 28 ವರ್ಷದ ಪತ್ನಿ ಗೃಹಿಣಿಯಾಗಿ ಮನೆಯಲ್ಲಿದ್ದಾರೆ. ಇನ್ನೂ ಪತ್ನಿಯ ಮೇಲೆ ಪತಿಗೆ ತುಂಬಾನೆ ಅನುಮಾನ ಶುರುವಾಗಿದೆ. ನೀನು ಬೇರೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಜಗಳ ಮಾಡಿದ್ದಾನೆ. ಈ ಬಗ್ಗೆ ಪತ್ನಿ ಅನೇಕ ಬಾರಿ ಸ್ಪಷ್ಟನೆ ಸಾಕ್ಷಿ ನೀಡಿದರೂ ಸಹ ಪತಿಗೆ ಅನುಮಾನ ಹೋಗಿಲ್ಲ. ಕಳೆದ ಮೇ.11 ರಂದು ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾನೆ. ಮನೆಗೆ ಬಂದ ಕೂಡಲೇ ರಂಪಟಾ ಶುರುಮಾಡಿದ್ದಾನೆ, ನಿನಗೆ ಅಕ್ರಮ ಸಂಬಂಧವಿದೆ ಎಂದು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ಪತ್ನಿಯ ಕೈ ಕಾಲು ಕಟ್ಟಿ ಹಾಖಿ, ಆಕೆಯನ್ನು ವಿವಸ್ತ್ರಗೊಳಿಸಿ ಕ್ರೌರ್ಯ ಮೆರೆದಿದ್ದಾನಂತೆ. ಬಳಿಕ ಪತ್ನಿಯ ಗುಪ್ತಾಂಗವನ್ನು ಬ್ಲೇಡ್ ಮೂಲಕ ರಂದ್ರ ಮಾಡಿ ಕಬ್ಬಿಣದ ಚೈನ್ ಮೂಲಕ ಗುಪ್ತಾಂಗಕ್ಕೆ ಲಾಕ್ ಹಾಕಿದ್ದಾನೆ.

husband curely tochered wife in pune

ಇನ್ನೂ ಪತಿಯ ಈ ಕೃತ್ಯದಿಂದ ಪತ್ನಿ ತೀವ್ರ ನೋವನ್ನು ಅನುಭವಿಸುತ್ತಾ ಚೀರಾಡಿದ್ದಾಳೆ, ಕಾಪಾಡುವಂತೆ ಬೇಡಿಕೊಂಡಿದ್ದಾಳೆ. ಆಕೆಯ ಚೀರಾಟ ಕೇಳಿದ ಸ್ಥಳಿಯರು ಬಂದು ನೋಡಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಅದನ್ನು ನೋಡಿ ಭಯಬೀತಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನೂ ಮಹಿಳೆ ಗಂಭೀರವಾಗಿ ಗಾಯಗೊಂಡು, ತುಂಬಾ ರಕ್ತ ಹೋದ ಕಾರಣದಿಂದ ಆಕೆ ಚೇತರಿಸಿಕೊಳ್ಳಲು ಕೆಲವು ದಿನಗಳು ಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಪತಿ ವಿರುದ್ದ ಪತ್ನಿ ದೂರು ನೀಡಿದ್ದು, ದೂರಿನಂತೆ ಪತಿಯನ್ನು ಬಂಧನ ಮಾಡಿರುವ ಪೊಲೀಸರು ಆತನ ವಿರುದ್ದ ಸೆಕ್ಷನ್ 326, 506(2), 323 ಅಡಿಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top