ಪವನ್ ಅಭಿಮಾನಿಗಳ ಮೇಲೆ ನಟಿ ರೇಣು ದೇಸಾಯಿ ಗರಂ, ನನ್ನ ಬಿಟ್ಟು ಬಿಡಿ ಎಂದ ಪವನ್ ಮಾಜಿ ಪತ್ನಿ….!

ಸ್ಟಾರ್‍ ನಟ ಪವನ್ ಕಲ್ಯಾಣ್ ರವರ ಮಾಜಿ ಪತ್ನಿ ರೇಣು ದೇಸಾಯಿ ವಿಚ್ಚೇದನ ಪಡೆದುಕೊಂಡು ಹಲವು ವರ್ಷಗಳೇ ಕಳೆದಿದೆ. ವಿಚ್ಚೇದನ ಬಳಿಕ ರೇಣು ದೇಸಾಯಿ ತನ್ನ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ವಿಚ್ಚೇದನದ ಬಳಿಕ ಅನೇಕ ಬಾರಿ ರೇಣು ಪವನ್ ಕಲ್ಯಾಣ್ ರವರ ಬಗ್ಗೆ ಅನೇಕ ವಿಮರ್ಶೆಗಳನ್ನು ಮಾಡಿದರು. ಸೋಷಿಯಲ್ ಮಿಡಿಯಾದ ಮೂಲಕ ಆಕೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿಗೆ ರೇಣು ದೇಸಾಯಿ ಕುರಿತು ಪವನ್ ಕಲ್ಯಾಣ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದು, ಈ ಕುರಿತು ರೇಣು ದೇಸಾಯಿ ಪವನ್ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ.

Renu desai request to pawan fans

ಸ್ಟಾರ್‍ ನಟ ಪವನ್ ಕಲ್ಯಾಣ್ ಸಿನೆಮಾಗಳ ಹಾಗೂ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಈ ಬಾರಿ ಅವರು ಪಿಠಾಪುರಂ ಎಂಬ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಚುನಾವಣೆ ಸಹ ಮುಗಿದಿದೆ. ಪವನ್ ಕಲ್ಯಾಣ್ ರವರಂತೆ ಅವರ ಅಭಿಮಾನಿಗಳಿಗೂ ಕೊಂಚ ಆವೇಶ ಹೆಚ್ಚು ಎಂದೇ ಹೇಳಬಹುದು. ಸೋಷಿಯಲ್ ಮಿಡಿಯಾದಲ್ಲಿ ಪವನ್ ಅಭಿಮಾನಿಗಳು ಹಂಚಿಕೊಳ್ಳುವಂತಹ ಕೆಲವೊಂದು ಪೋಸ್ಟ್ ಗಳು ಅತಿರೇಕಕ್ಕೆ ಹೋಗುತ್ತಿರುತ್ತದೆ. ಇತ್ತೀಚಿಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಬಗ್ಗೆ ಸಹ ಟ್ರೋಲ್ ಮಾಡುತ್ತಿರುತ್ತಾರೆ. ಇದೀಗ ರೇಣು ದೇಸಾಯಿ ಹಾಕಿದ್ದ ಪೋಸ್ಟ್ ಒಂದಕ್ಕೆ ಪವನ್ ಕಲ್ಯಾಣ್ ಅಭಿಮಾನಿಯೋರ್ವ ಕಾಮೆಂಟ್ ಮಾಡಿದ್ದು, ಅದಕ್ಕೆ ರಿಯಾಕ್ಟ್ ಆಗಿರುವ ಆಕೆ ಮನವಿಯೊಂದನ್ನು ಮಾಡಿದ್ದಾರೆ.

ಇನ್ನೂ ರೇಣುದೇಸಾಯಿ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಸದಾ ಒಂದಲ್ಲ ಒಂದು ಪೋಸ್ಟ್ ಮಾಡುವ ಮೂಲಕ ಫಾಲೋವರ್ಸ್ ಜೊತೆ ಟಚ್ ನಲ್ಲೇ ಇರುತ್ತಾರೆ. ಇತ್ತೀಚಿಗೆ ರೇಣು ದೇಸಾಯಿ ಪೋಸ್ಟ್ ಒಂದನ್ನು ಹಾಕಿದ್ದರು. ಈ ಪೋಸ್ಟ್ ಗೆ ಪವನ್ ಕಲ್ಯಾಣ್ ರವರ ಅಭಿಮಾನಿಯೋರ್ವ ಪವನ್ ಕಲ್ಯಾಣ್ ರವರಂತೆ ನೀವು ವಿಶಾಲ ಹೃದಯವಂತರು ಎಂದು ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್ ನೋಡಿದ ರೇಣು ದೇಸಾಯಿ, ನೀವು ಏಕೆ ಪ್ರತಿ ಬಾರಿ ಪೋಸ್ಟ್ ಹಾಕಿದಾಗಲೂ ನನ್ನ ಮಾಜಿ ಪತಿಯ ಜೊತೆಗೆ ಹೋಲಿಕೆ ಮಾಡುತ್ತಿರಾ, ಈವರೆಗೂ ನಾನು ಅಂತಹವರನ್ನು ಬ್ಲಾಕ್ ಮಾಡಿದ್ದೇನೆ. ನಾನು 10 ವರ್ಷದವಳಾಗಿದ್ದನಿದಲೂ ಪ್ರಾಣಿಗಳ ಸಂರಕ್ಷಣೆಯಲ್ಲಿ ತೊಡಗಿದ್ದೇನೆ. ಅದಕ್ಕೂ ನನ್ನ ಮಾಜಿ ಪತಿಗೆ ಯಾವುದೇ ಸಂಬಂಧವಿಲ್ಲ. ಪ್ರತಿಭಾರಿ ನನ್ನನ್ನು ಆತನೊಂದಿಗೆ ಹೋಲಿಸಬೇಡಿ, ನನ್ನಂತೆ ಆತ ಪ್ರಾಣಿಗಳನ್ನು ಪ್ರೀತಿಸುವುದಿಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.

Renu desai request to pawan fans 1

ಇನ್ನೂ ಈ ಕಾಮೆಂಟ್ ಇರುವ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ರೇಣು ದೇಸಾಯಿ ಅದನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರತಿಕ್ರಿಯೆಯನ್ನು ಕೊಟ್ಟಿರುವುದು ಕೋಪದಿಂದಲ್ಲ. ಹತಾಷೆಯಿಂದ ಹಾಕಿದ್ದೇನೆ. ಸುಮಾರು ವರ್ಷಗಳಿಂದ ನಾನು ಏನು ಮಾಡಿದರು ಅದರ ಕ್ರೆಡಿಟ್ ನನ್ನ ಮಾಜಿ ಪತಿಗೆ ನೀಡಲಾಗುತ್ತದೆ ಅಥವಾ ಆತನೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ನನಗೆ ಅವರೊಂದಿಗೆ ವೈಯುಕ್ತಿಕವಾದ ದ್ವೇಷವಿಲ್ಲ. ಆದರೆ ಅವರ ಬೆಂಬಲಿಗರಲ್ಲಿ ನಾನೊಂದು ಮನವಿ ಮಾಡುತ್ತಿದ್ದೇನೆ. ನನ್ನ ಇನ್ಸ್ಟಾಗ್ರಾಂ ಹಾಗೂ ನನ್ನ ಪಾಲಿಗೆ ನನ್ನನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ. ಇದೀಗ ಆಕೆಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Leave a Comment

Your email address will not be published. Required fields are marked *

Scroll to Top