ATM Transaction Failed – ಕೆಲವೊಮ್ಮೆ ಎಟಿಎಂನಿಂದ ಹಣ ಡ್ರಾ ಮಾಡುವಾಗ ತಾಂತ್ರಿಕ ಕಾರಣಗಳಿಂದಾಗಿ ಹಣವು ಯಂತ್ರದ ಒಳಗೇ ಸಿಲುಕಿಕೊಂಡು, ನಮ್ಮ ಬ್ಯಾಂಕ್ ಖಾತೆಯಿಂದ ಮಾತ್ರ ಹಣ ಕಡಿತಗೊಂಡಿರುವ ಅನುಭವ ಅನೇಕರಿಗಾಗುತ್ತದೆ. ಇಂತಹ ಸಂದರ್ಭದಲ್ಲಿ ಆತಂಕಕ್ಕೊಳಗಾಗದೆ, ಕೆಲವೊಂದು ಕ್ರಮಗಳನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು.

ಮೊದಲಿಗೆ, ಹಣ ಎಟಿಎಂನಲ್ಲಿ ಸಿಲುಕಿಕೊಂಡಾಗ ನೀವು ಆತಂಕಕ್ಕೊಳಗಾಗಬಾರದು. ಹಣವನ್ನು ಹೊರತೆಗೆಯಲು ಯತ್ನಿಸುವುದು ಅಪಾಯಕಾರಿ. ಏಕೆಂದರೆ, ಹಾಗೆ ಮಾಡುವುದರಿಂದ ನೋಟುಗಳು ಹರಿದು ಹೋಗುವ ಸಂಭವ ಇರುತ್ತದೆ. ಈ ಸಮಸ್ಯೆಯು ಸಾಮಾನ್ಯವಾಗಿ ಸರ್ವರ್ ವೈಫಲ್ಯದಿಂದ ಸಂಭವಿಸುತ್ತದೆ.
ATM Transaction Failed – ನಿಮ್ಮ ಮೊದಲ ಹೆಜ್ಜೆ ಏನಿರಬೇಕು?
ಕೆಲವು ನಿಮಿಷಗಳ ಕಾಲ ಕಾಯಿರಿ. ಕೆಲವೊಮ್ಮೆ ಸಿಸ್ಟಮ್ ಸ್ವಯಂಚಾಲಿತವಾಗಿ ಸರಿಹೋಗಿ ಹಣ ಹೊರಬರುತ್ತದೆ. ಒಂದು ವೇಳೆ ಹಣ ಹೊರಬರದಿದ್ದರೆ, ನಿಮ್ಮ ಖಾತೆಯಿಂದ ಹಣ ಕಡಿತವಾಗಿದೆ ಎಂದು ತೋರಿಸುವ ರಸೀದಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಒಂದು ವೇಳೆ ರಸೀದಿ ಬರದಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ SMS ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ ಇಟ್ಟುಕೊಳ್ಳಿ. ಇದು ಭವಿಷ್ಯದಲ್ಲಿ ದೂರು ನೀಡಲು ಸಹಾಯ ಮಾಡುತ್ತದೆ. Read this also : ATM ಕಾರ್ಡ್ ನಲ್ಲಿ ಕೇವಲ ಹಣ ಡ್ರಾ ಮಾಡುವುದು ಮಾತ್ರವಲ್ಲ, ಮತಷ್ಟು ಸೌಲಭ್ಯಗಳಿವೆ…!
ATM Transaction Failed – ಹಣವನ್ನು ಮರಳಿ ಪಡೆಯಲು ಬ್ಯಾಂಕಿನೊಂದಿಗೆ ಸಂಪರ್ಕಿಸುವುದು ಹೇಗೆ?
ಸಾಮಾನ್ಯವಾಗಿ, ಇಂತಹ ಘಟನೆ ನಡೆದಾಗ, ಬ್ಯಾಂಕ್ ಸ್ವಯಂಚಾಲಿತವಾಗಿ 24 ಗಂಟೆಗಳ ಒಳಗೆ ನಿಮ್ಮ ಖಾತೆಗೆ ಹಣವನ್ನು ಮರುಜಮೆ ಮಾಡುತ್ತದೆ. ಒಂದು ವೇಳೆ 24 ಗಂಟೆಗಳ ನಂತರವೂ ಹಣ ನಿಮ್ಮ ಖಾತೆಗೆ ಜಮೆ ಆಗದಿದ್ದರೆ, ತಕ್ಷಣ ನಿಮ್ಮ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ. ATM ಇರುವ ಸ್ಥಳ ಮತ್ತು ಅದು ಯಾವ ಬ್ಯಾಂಕಿನ ಯಂತ್ರ ಎಂಬುದರ ಬಗ್ಗೆ ಮಾಹಿತಿ ನೀಡಿ. ಬ್ಯಾಂಕ್ ಸಾಮಾನ್ಯವಾಗಿ ಏಳು ದಿನಗಳ ಒಳಗೆ ಸಮಸ್ಯೆಯನ್ನು ಪರಿಹರಿಸುತ್ತದೆ.

ATM Transaction Failed – RBI ನಿಯಮಗಳ ಪ್ರಕಾರ ಪರಿಹಾರ
ಗ್ರಾಹಕ ಸೇವಾ ಕೇಂದ್ರದಿಂದ ನಿಮಗೆ ತೃಪ್ತಿಕರ ಪ್ರತಿಕ್ರಿಯೆ ಸಿಗದಿದ್ದರೆ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಅಲ್ಲಿ ಲಿಖಿತ ದೂರು ನೀಡಿ ಮತ್ತು ಅದರ ಟ್ರ್ಯಾಕಿಂಗ್ ಸಂಖ್ಯೆ ಪಡೆಯಿರಿ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಗಳ ಪ್ರಕಾರ, ಬ್ಯಾಂಕುಗಳು ಈ ರೀತಿಯ ದೂರುಗಳನ್ನು 45 ದಿನಗಳ ಒಳಗೆ ಪರಿಶೀಲಿಸಿ, ಗ್ರಾಹಕರಿಗೆ ಹಣವನ್ನು ಮರುಪಾವತಿ ಮಾಡಬೇಕು. ಒಂದು ವೇಳೆ ಬ್ಯಾಂಕ್ 45 ದಿನಗಳ ಒಳಗೆ ಹಣವನ್ನು ಹಿಂದಿರುಗಿಸದಿದ್ದರೆ, ಅವರು ಆ ಮೊತ್ತದ ಜೊತೆಗೆ ದಂಡವನ್ನೂ ಪಾವತಿಸಬೇಕಾಗುತ್ತದೆ.
