Flipkart ಬಿಗ್ ಬಿಲಿಯನ್ ಡೇಸ್ 2025 ಸೇಲ್‌ನ ಬಿಗ್ ಅನೌನ್ಸ್‌ಮೆಂಟ್, ಐಫೋನ್ ಡಿಸ್ಕೌಂಟ್ ಬೆಲೆ ಬಹಿರಂಗ…!

Flipkart – ದೇಶದ ಅತಿದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್, ತನ್ನ ಬಹುನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ ಸೇಲ್ 2025 ರ ದಿನಾಂಕಗಳನ್ನು ಘೋಷಿಸಿದೆ. ಜೊತೆಗೆ, ಈ ವರ್ಷದ ಮಾರಾಟದಲ್ಲಿ ಸ್ಮಾರ್ಟ್‌ಫೋನ್ ಪ್ರಿಯರಿಗೆ ಆಪಲ್ ಐಫೋನ್‌ಗಳ ಮೇಲೆ ಲಭ್ಯವಿರುವ ಭಾರಿ ರಿಯಾಯಿತಿ ಮತ್ತು ಬೆಲೆಗಳನ್ನು ಪ್ರಕಟಿಸಿದೆ.

ಈ ಸೇಲ್ ಸೆಪ್ಟೆಂಬರ್ 23, 2025 ರಿಂದ ಪ್ರಾರಂಭವಾಗಲಿದೆ. ಈ ಸೇಲ್‌ನಲ್ಲಿ ಐಫೋನ್ 16 ಸರಣಿಯಿಂದ ಹಿಡಿದು, ಐಫೋನ್ 14 ವರೆಗಿನ ವಿವಿಧ ಮಾದರಿಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಿವೆ. ಹೊಸ ಐಫೋನ್ ಖರೀದಿಸಲು ಬಯಸುವವರಿಗೆ ಇದು ಸುವರ್ಣಾವಕಾಶ ಎಂದು ಪರಿಗಣಿಸಲಾಗಿದೆ.

Flipkart Big Billion Days Sale 2025 – iPhone 16 at ₹51,999 and iPhone 14 under ₹40,000 with bank offers and early access for Flipkart Plus members.

Flipkart ಬಿಗ್ ಬಿಲಿಯನ್ ಡೇಸ್ ಸೇಲ್ ಯಾವಾಗ ಪ್ರಾರಂಭ?

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 23, 2025 ರಿಂದ ಶುರುವಾಗಲಿದೆ. ಈ ಸೇಲ್‌ನಲ್ಲಿ, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ವಿಶೇಷ ರಿಯಾಯಿತಿಗಳು, ಸುಲಭ ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ಇಎಂಐ ಸೌಲಭ್ಯಗಳು ಲಭ್ಯವಿವೆ. ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಬ್ಲಾಕ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ, ಅಂದರೆ ಸೆಪ್ಟೆಂಬರ್ 22 ರಿಂದಲೇ ಸೇಲ್ ಪ್ರವೇಶದ ಅವಕಾಶ ಸಿಗಲಿದೆ. ಇತ್ತ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಕೂಡ ಅದೇ ದಿನ ಆರಂಭವಾಗಲಿದೆ.

Flipkart – ಐಫೋನ್ 16 ಬೆಲೆಯಲ್ಲಿ ಭರ್ಜರಿ ಇಳಿಕೆ, ಈಗ ಕೇವಲ ₹51,999 ಕ್ಕೆ!

ಐಫೋನ್ 17 ಸರಣಿಯ ಬಿಡುಗಡೆಯ ನಂತರ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಐಫೋನ್ 16 ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಈಗ, ನೀವು ಐಫೋನ್ 16 ಸ್ಮಾರ್ಟ್‌ಫೋನ್ ಅನ್ನು ಕೇವಲ ₹51,999 ರ ಆರಂಭಿಕ ಬೆಲೆಗೆ ಖರೀದಿಸಬಹುದು. ಈ ಬೆಲೆಯು ಬ್ಯಾಂಕ್ ಕಾರ್ಡ್‌ಗಳ ಮೇಲಿನ ರಿಯಾಯಿತಿಯನ್ನು ಒಳಗೊಂಡಿದೆ. ಮೂಲ ಬೆಲೆಯಾದ ₹69,900 ಗೆ ಹೋಲಿಸಿದರೆ, ಇದು ಬರೋಬ್ಬರಿ ₹17,901 ರಿಯಾಯಿತಿಯಾಗಿದೆ. Read this also : ನಿಮ್ಮ ಮೊಬೈಲ್ ಫೋನ್ ಅನ್ನು ವಾರಕ್ಕೊಮ್ಮೆ ಆಫ್ ಮಾಡುವುದರಿಂದಾಗುವ ಏನೆಲ್ಲಾ ಪ್ರಯೋಜನಗಳಿದೆ ಗೊತ್ತಾ?

ಐಫೋನ್ 14 ಬೆಲೆ ₹40 ಸಾವಿರಕ್ಕಿಂತ ಕಡಿಮೆ!

ನೀವು ಕಡಿಮೆ ಬಜೆಟ್‌ನಲ್ಲಿ ಐಫೋನ್ ಖರೀದಿಸಲು ಬಯಸಿದರೆ, ಐಫೋನ್ 14 ಉತ್ತಮ ಆಯ್ಕೆಯಾಗಿದೆ. ಈ ಸೇಲ್‌ನಲ್ಲಿ, ಐಫೋನ್ 14 ಅನ್ನು ನೀವು ಕೇವಲ ₹39,999 ರ ಆರಂಭಿಕ ಬೆಲೆಗೆ ಖರೀದಿಸಬಹುದು. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ ₹52,990 ಇದೆ, ಆದ್ದರಿಂದ ಇದು ಗಣನೀಯ ಉಳಿತಾಯ ತರುತ್ತದೆ.

Flipkart Big Billion Days Sale 2025 – iPhone 16 at ₹51,999 and iPhone 14 under ₹40,000 with bank offers and early access for Flipkart Plus members.

ಇನ್ನೂ ಈ ಬಾರಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇ. 10 ರಷ್ಟು ಇನ್​ಸ್ಟಂಟ್ ರಿಯಾಯಿತಿ ಪಡೆಯಬಹುದು. ಇದರೊಂದಿಗೆ, ಫ್ಲಿಪ್‌ಕಾರ್ಟ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೂ ಶೇ. 10 ರಷ್ಟು ಹೆಚ್ಚುವರಿ ಉಳಿತಾಯವಿದೆ.

Leave a Comment

Your email address will not be published. Required fields are marked *

Scroll to Top