Sunday, October 26, 2025
HomeStateCrime : ಮಚ್ಚಿನಿಂದ ಕೊಚ್ಚಿ ಮಹಿಳೆಯ ಕೊಲೆ: ಆರೋಪಿ ಬಂಧನ, ಗುಡಿಬಂಡೆಯಲ್ಲಿ ನಡೆದ ಘಟನೆ..!

Crime : ಮಚ್ಚಿನಿಂದ ಕೊಚ್ಚಿ ಮಹಿಳೆಯ ಕೊಲೆ: ಆರೋಪಿ ಬಂಧನ, ಗುಡಿಬಂಡೆಯಲ್ಲಿ ನಡೆದ ಘಟನೆ..!

Crime – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಎಂಟನೇ ವಾರ್ಡಿನಲ್ಲಿ ವಾಸವಿದ್ದ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ರಮಿಜಾಬಿ (35) ಎಂದು ಗುರ್ತಿಸಲಾಗಿದೆ. ಇನ್ನೂ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಶಿವಕುಮಾರ್‍ ಸೇರಿದಂತೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Gudibande Woman Murdered by Husband – Chikkaballapur District News - Crime

Crime – ಆರೋಪಿ ಬಾಬಾಜಾನ್ ಬಂಧನ

ಮೃತ ರಾಮಿಜಾಬಿ ಪಟ್ಟಣದಲ್ಲಿ ಕಳೆದ 3 ವರ್ಷಗಳಿಂದ ಎರಡನೇ ಗಂಡನಾದ ಬಾಬಾ ಜಾನ್ ರೊಂದಿಗೆ ವಾಸವಾಗಿದ್ದು, ಶುಕ್ರವಾರ ಮಧ್ಯಾಹ್ನ ಸುಮಾರು 4 ಗಂಟೆ ಸಮಯದಲ್ಲಿ ಗಂಡ ಹೆಂಡತಿ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿದೆ. ಈ  ವೇಳೆ ಪತ್ನಿಯನ್ನು ಗಂಡ ಭೀಕರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನೂ ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ಬಾಬಾಜಾನ್ ರನ್ನು ಬಂಧಿಸಿದ್ದಾರೆ. Read this also : ಗುಡಿಬಂಡೆ – ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಪತ್ತೆ: ಆರೋಪಿ ಲೈನ್ ಮೆನ್ ಬಂಧನ..!

Gudibande Woman Murdered by Husband – Chikkaballapur District News - Crime

Crime – ಇಬ್ಬರ ನಡುವೆ ಗಲಾಟೆ ಕೊಲೆಗೆ ಕಾರಣವಾಯ್ತಾ?

ಮೃತ ದೃದೈವಿ ರಮಿಜಾಬಿ ಮೂಲತಃ ಶ್ರೀನಿವಾಸಪುರ ಗ್ರಾಮದವಳಾಗಿದ್ದು, ಮೊದಲು ಮುಳಬಾಗಿಲು ತಾಲೂಕಿನ ಅಲ್ಲಾಬಕಾಶ್ ಎಂಬಾತನೊಂದಿಗೆ ಮದುವೆಯಾಗಿದ್ದು, ನಂತರ ಆತನನ್ನು ಬಿಟ್ಟು ಬಾಬಾಜಾನ್ ರೊಂದಿಗೆ ಎರಡನೇ ಮದುವೆಯಾಗಿ ಗುಡಿಬಂಡೆ ಪಟ್ಟಣದಲ್ಲಿ ವಾಸವಾಗಿದ್ದಳು. ಆಗಾಗ್ಗೆ ಇಬ್ಬರ ನಡುವೆ ಗಲಾಟೆಗಳು ಆಗುತ್ತಿದ್ದು, ಗಂಡ ಹೆಂಡತಿ ಗಲಾಟೆ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಇನ್ನೂ ಪೊಲೀಸರ ವಿಚಾರಣೆಯ ಬಳಿಕ ಕೊಲೆಯ ನಿಖರ ಕಾರಣ ತಿಳಿದುಬರಬೇಕಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular