Death – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕರಿಗಾನತಮ್ಮನಹಳ್ಳಿ – ಇಡ್ರಹಳ್ಳಿ ಮಾರ್ಗದ ಬಳಿಯಿರುವ ಬಾವಿಯೊಂದರಲ್ಲಿ ಯುವಕನ ಶವವೊಂದು ಪತ್ತೆಯಾಗಿದೆ. ಮೃತ ಯುವಕನನ್ನು ಕರಿಗಾನತಮ್ಮನಹಳ್ಳಿ ಗ್ರಾಮದ ವಾಟರ್‌ಮನ್ ನಾರಾಯಣಸ್ವಾಮಿ ಕೆ.ಆರ್ ಅವರ ಪುತ್ರ ನಿಖಿಲ್ (25) ಎಂದು ಗುರುತಿಸಲಾಗಿದೆ.
Death – ಬಾವಿಯಲ್ಲಿ ಯುವಕನ ಶವ ಪತ್ತೆ
ಜುಲೈ 2, ಬುಧವಾರದಂದು ಗುಡಿಬಂಡೆ ತಾಲೂಕಿನ ಕರಿಗಾನತಮ್ಮನಹಳ್ಳಿ – ಇಡ್ರಹಳ್ಳಿ ಮಾರ್ಗದಲ್ಲಿರುವ ಒಂದು ಬಾವಿಯಲ್ಲಿ ಮಧ್ಯಾಹ್ನ ನಿಖಿಲ್ ಮೃತದೇಹ ಪತ್ತೆಯಾಗಿದೆ. ಮೃತ ನಿಖಿಲ್ ಗೆ ಮದುವೆಯಾಗಿ ಒಂದು ಹೆಣ್ಣು ಮಗು ಇದೆ. ಒಂದು ವಾರದ ಹಿಂದೆಯಷ್ಟೆ ಮೃತನ ಪತ್ನಿ ಊರಿಗೆ ಹೋಗಿದ್ದರು ಎನ್ನಲಾಗಿದೆ. ಘಟನೆ ತಿಳಿದ ಕೂಡಲೇ ಗುಡಿಬಂಡೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರ ನೆರವಿನೊಂದಿಗೆ ಬಾವಿಯೊಳಗಿದ್ದ ನಿಖಿಲ್ ಅವರ ಶವವನ್ನು ಹೊರತೆಗೆದು, ಗುಡಿಬಂಡೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
Death – ಸಾವಿನ ಕಾರಣ ನಿಗೂಢ?
ನಿಖಿಲ್ ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಇದು ಆತ್ಮಹತ್ಯೆಯೋ ಅಥವಾ ಬೇರೆ ಯಾವುದೇ ಕಾರಣಕ್ಕೆ ಈ ದುರಂತ ಸಂಭವಿಸಿದೆಯೋ ಎಂಬುದು ಇನ್ನೂ ತಿಳಿಯಬೇಕಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿನ ಹಿಂದಿನ ಸತ್ಯಾಂಶ ಹೊರಬೀಳುವ ನಿರೀಕ್ಷೆಯಿದೆ ಎನ್ನಲಾಗಿದೆ. ಮೃತ ಯುವಕ ನಿಖಿಲ್ ಮರಣದ ಸುದ್ದಿಯನ್ನು ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Read this also : ಗುಡಿಬಂಡೆಯಲ್ಲಿ ಚಿರತೆ ದಾಳಿ: ರೈತ ಅದೃಷ್ಟವಶಾತ್ ಪಾರು, ಗ್ರಾಮಸ್ಥರಿಂದ ಚಿರತೆ ಸೆರೆ!
ಇನ್ನೂ ಈ ಘಟನೆ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.