HomeStateAccident : ಗುಡಿಬಂಡೆಯ ಬೀಚಗಾನಹಳ್ಳಿ ಕ್ರಾಸ್ ಬಳಿ ಟ್ರಾಕ್ಟರ್ ಚಕ್ರದ ಕೆಳಗೆ ಸಿಲುಕಿ ಮಹಿಳೆ ಸಾವು

Accident : ಗುಡಿಬಂಡೆಯ ಬೀಚಗಾನಹಳ್ಳಿ ಕ್ರಾಸ್ ಬಳಿ ಟ್ರಾಕ್ಟರ್ ಚಕ್ರದ ಕೆಳಗೆ ಸಿಲುಕಿ ಮಹಿಳೆ ಸಾವು

Accident : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್ – ಪೆಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪೆಮ್ಮನಹಳ್ಳಿ ಕ್ರಾಸ್ ನಲ್ಲಿ ನೀರಿನ ಟ್ರ್ಯಾಕ್ಟರ್‌ ನೀರಿನ ಟ್ಯಾಂಕರ್ ಹಿಂಬದಿ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಫ್ತಿಯಲ್ಲಿ ನಡೆದಿದೆ.

Tragic road accident near Beechaganahalli Cross – Woman dies after falling from moving tractor in Chikkaballapur

Accident – ಟ್ರಾಕ್ಟರ್‍ ಚಕ್ರದ ಕೆಳಗೆ ಸಿಲುಕಿ ಸಾವು

ಮೃತ ಮಹಿಳೆ ಪೆಮ್ಮನಹಳ್ಳಿ ಗ್ರಾಮದ ತಿಪ್ಪಕ್ಕ(50) ಎಂದು ಗುರುತಿಸಲಾಗಿದೆ.  ಗುಡಿಬಂಡೆ ತಾಲ್ಲೂಕಿನ ಜಂಬಿಗೇಮರದಹಳ್ಳಿಯಿಂದ ಯರ್ರಲಕ್ಕೇನಹಳ್ಳಿ ಕ್ರಸ್ ನ ಆಯಿಲ್ ಪ್ಯಾಕ್ಟರಿಗೆ ನೀರು ಸರಬರಾಜು ಮಾಡುವ ಟ್ಯಾಕ್ಟರ್ ನಲ್ಲಿ ಬೀಚಗಾನಹಳ್ಳಿ ಕ್ರಾಸ್ ಗೆ ಹೋಗಲು ಮೃತ ಮಹಿಳೆ ಪೆಮ್ಮನಹಳ್ಳಿ ಗ್ರಾಮದಲ್ಲಿ ಟ್ರಾಕ್ಟರ್ ನಲ್ಲಿ ಹತ್ತಿದ್ದರು ಎನ್ನಲಾಗಿದೆ. ಇನ್ನೇನು 500 ಮೀಟರ್ ದೂರದಲ್ಲಿ ಇಳಿಯ ಬೇಕಿದ್ದವರು ಪೆಮ್ಮನಹಳ್ಳಿ ಕ್ರಾಸ್ ನ  ಹಂಪ್ಸ್ ನಲ್ಲಿ ಟ್ರಾಕ್ಟರ್ ಮೇಲಕ್ಕೆ ಎಗರಿದಾಗ ತಿಪ್ಪಕ್ಕ ಟ್ರಾಕ್ಟರ್ ಕೆಳಗೆ ಬಿದ್ದು ಹಿಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

Accident – ಗುಡಿಬಂಡೆ ಪೊಲೀಸರು ಭೇಟಿ ಪರಿಶೀಲನೆ

ಇನ್ನೂ ಟ್ರಾಕ್ಟರ್ ಚಾಲಕ ಟ್ರಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆ ತಿಪ್ಪಕ್ಕ ಮಗ ಗೌತಮ್ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular