Saturday, August 30, 2025
HomeEntertainmentಗ್ಲೋಬಲ್ ಸ್ಟಾರ್ ರಾಮ್ ಚರಣ್ ನೋಡಲು ನೂಕು ನುಗ್ಗಲು, ಚರಣ್ ಶರ್ಟ್ ಹರಿದ ಅಭಿಮಾನಿಗಳು, ವೈರಲ್...

ಗ್ಲೋಬಲ್ ಸ್ಟಾರ್ ರಾಮ್ ಚರಣ್ ನೋಡಲು ನೂಕು ನುಗ್ಗಲು, ಚರಣ್ ಶರ್ಟ್ ಹರಿದ ಅಭಿಮಾನಿಗಳು, ವೈರಲ್ ಆದ ವಿಡಿಯೋ….!

ಸಿನಿರಂಗದ ಸೆಲಬ್ರೆಟಿಗಳಿಗೆ ಅಪಾರ ಸಂಖ್ಯೆ ಅಭಿಮಾನಿಗಳು ಇರುತ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಸೆಲೆಬ್ರೆಟಿಗಳು ಕಾಣಿಸಿಕೊಂಡರೇ ಸಾಕು ಅವರೊಂದಿಗೆ ಪೊಟೋಗಳನ್ನು ತೆಗೆದುಕೊಳ್ಳುವುದು, ಅವರನ್ನು ಭೇಟಿ ಯಾಗಲು ಮುಗಿಬೀಳುವಂತಹ ಘಟನೆಗಳು ನಡೆಯುತ್ತಿರುತ್ತವೆ. ಈ ಹಾದಿಯಲ್ಲೇ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ರವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ಈ ಸಮಯದಲ್ಲಿ ರಾಮ್ ಚರಣ್ ತುಂಬಾನೆ ಸಮಸ್ಯೆ ಅನುಭವಿಸಿದ್ದಾರೆ. ಕೆಲ ಅಭಿಮಾನಿಗಳು ಚರಣ್ ಶರ್ಟ್ ಸಹ ಹರಿದಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Ram charan in pitapuram election campaign 1

RRR ಸಿನೆಮಾದ ಮೂಲಕ ಗ್ಲೋಬಲ್ ಲೆವೆಲ್ ನಲ್ಲಿ ಸ್ಟಾರ್‍ ಡಂ ಪಡೆದುಕೊಂಡ ನಟ ರಾಮ್ ಚರಣ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಅಂದ ಕೂಡಲೇ ಅವರು ಆ ಸ್ಟೇಟಸ್ ಕಾಪಾಡಿಕೊಳ್ಳಲು ತುಂಬಾನೆ ಶ್ರಮ ವಹಿಸಬೇಕು ಜೊತೆಗೆ ಕೆಲವೊಂದನ್ನು ತ್ಯಾಗ ಮಾಡಬೇಕು. ಜೊತೆಗೆ ಸಾರ್ವಜನಿಕವಾಗಿ ಬಂದ ಸಮಯದಲ್ಲಿ ತುಂಬಾನೆ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅಂತಹುದೇ ಸಮಸ್ಯೆಯೊಂದನ್ನು ನಟ ರಾಮ್ ಚರಣ್ ಅನುಭವಿಸಿದ್ದಾರೆ. ನಟ ರಾಮ್ ಚರಣ್ ತನ್ನ ಚಿಕ್ಕಪ್ಪ ಪವನ್ ಕಲ್ಯಾಣ್ ರವರ ಪರವಾಗಿ ಚುನಾವಣೆ ಪ್ರಚಾರಕ್ಕಾಗಿ ಪಿಠಾಪುರಂಗೆ ತೆರಳಿದ್ದರು. ಪವನ್ ಕಲ್ಯಾಣ್ ಪರವಾಗಿ ರಾಮ್ ಚರಣ್ ರೋಡ್ ಶೋಗಳಲ್ಲಿ ಸಹ ಭಾಗಿಯಾಗಿದ್ದರು. ಚರಣ್ ಜೊತೆಗೆ ಅವರ ತಾಯಿ ಸಹ ಪವನ್ ಕಲ್ಯಾಣ್ ಪರ ಪ್ರಚಾರ ಮಾಡಿದ್ದರು.

Ram charan in pitapuram election campaign 2

ಈ ಸಮಯದಲ್ಲಿ ರಾಮ್ ಚರಣ್ ರನ್ನು ನೋಡಲು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಚುನಾವಣಾ ಸಮಯವಾದ್ದರಿಂದ ದೊಡ್ಡ ಮಟ್ಟಿಗೆ ಪೊಲೀಸ್ ಭದ್ರತೆ ಸಹ ಇರಲಿಲ್ಲ. ರೋಡ್ ಶೋ ಸಮಯದಲ್ಲಿ ಅಭಿಮಾನಿಗಳು ಚರಣ್ ರನ್ನು ಮುತ್ತಿಕೊಂಡರು. ಬಳಿಕ ರಾಮ್ ಚರಣ್ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟರು. ಅಭಿಮಾನಿಗಳು ರಾಮ್ ಚರಣ್ ರನ್ನು ತಳ್ಳಿ, ನೂಕಿದರು. ಜೊತೆಗೆ ಅವರ ಶರ್ಟ್ ಸಹ ಹರಿದಿದ್ದಾರೆ. ಬಲವಂತದಿಂದ ಚರಣ್ ರವರನ್ನು ಮುಟ್ಟುವ ಪ್ರಯತ್ನ ಮಾಡಿದರೂ. ಆದರೆ ನಟ ರಾಮ್ ಚರಣ್ ಮಾತ್ರ ಇಷ್ಟೆಲ್ಲಾ ಆದರೂ ಏನು ಪ್ರತಿಕ್ರಿಯೆ ನೀಡದೇ ಹೋಗಿ ಕಾರಿನಲ್ಲಿ ಕುಳಿತುಕೊಂಡರು. ಈ ಸಂಬಂಧ ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

Ram charan in pitapuram election campaign 0

ಇನ್ನೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಪಿಠಾಪುರಂ ಕ್ಷೇತ್ರದಿಂದ ಎಂ.ಎಲ್.ಎ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು, ಅವರ ಪರ ಅನೇಕ ಸೆಲೆಬ್ರೆಟಿಗಳು ಪ್ರಚಾರ ನಡೆಸಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ರಾಮ್ ಚರಣ್ ಸಹ ಪವನ್ ಕಲ್ಯಾಣ್ ಪರ ಪ್ರಚಾರ ಮಾಡಿದ್ದು, ಈ ವೇಳೆ ಅಭಿಮಾನಿಗಳು ಅವರ ಶರ್ಟ್ ಎಳೆದಾಡಿ ಹರಿದು ಹಾಕಿರುವುದು  ಸರಿಯಲ್ಲ ಎಂಬ ವಾದ ಕೇಳಿಬರುತ್ತಿದೆ. ಜೊತೆಗೆ ರಾಮ್ ಚರಣ್ ರವರಿಗೆ ಭದ್ರತೆ ಕೊಡದೇ ಇರುವ ಬಗ್ಗೆ ಟೀಕೆ ಸಹ ಕೇಳಿಬರುತ್ತಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular