Grandma : ಏಜ್ ಈಸ್ ಜಸ್ಟ್ ಎ ನಂಬರ್’ ಅಂದ್ರೆ ಇದೇ ಅಲ್ವಾ? ಬಾಲಿವುಡ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಅಜ್ಜಿ, ವೈರಲ್ ವಿಡಿಯೋ…!

Grandma – ವಯಸ್ಸಾಯಿತು ಅಂದಾಕ್ಷಣ ಮನಸ್ಸಿಗೆ ವಯಸ್ಸಾಗಲ್ಲ” ಅನ್ನೋ ಮಾತು ಸುಮ್ಮನೆ ಹೇಳುವುದಲ್ಲ, ಅದು ಅಕ್ಷರಶಃ ಸತ್ಯ ಅನ್ನೋದಕ್ಕೆ ಇತ್ತೀಚೆಗೆ ವೈರಲ್ ಆದ ಒಂದು ವಿಡಿಯೋ ಸಾಕ್ಷಿ. ಸೋಷಿಯಲ್ ಮೀಡಿಯಾದಲ್ಲಿ ಈಗ ಅಜ್ಜಿಯೊಬ್ಬರ ಡ್ಯಾನ್ಸ್ ವಿಡಿಯೋ (Old lady dance video) ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದವರೆಲ್ಲಾ ವಾವ್ ಎನ್ನುವಂತಿದೆ, ಲಕ್ಷಾಂತರ ಜನ ಇದನ್ನು ನೋಡಿ ಖುಷಿ ಪಟ್ಟಿದ್ದಾರೆ.

Grandma dancing at a Mehandi function with her grandchildren

Grandma – ಮೆಹಂದಿ ಸಂಭ್ರಮದಲ್ಲಿ ಅಜ್ಜಿಯ ಬಾಲಿವುಡ್ ಸ್ಟೆಪ್ಸ್!

ಮೊಮ್ಮಗನ ಮೆಹಂದಿ ಕಾರ್ಯಕ್ರಮದಲ್ಲಿ (Mehandi function) ಈ ಸೂಪರ್ ಅಜ್ಜಿ ಬಾಲಿವುಡ್‌ನ ಹಿಟ್ ಹಾಡು ‘ಕಜ್ರಾ ರೇ’ (Kajra Re Song) ಗೆ ಡ್ಯಾನ್ಸ್ ಮಾಡಿದ್ದಾರೆ. ಅವರ ಎನರ್ಜಿ ನೋಡಿ ಎಂಥಾ ಯುವಕರೂ ಕೂಡ ನಾಚುತ್ತಾರೆ! ಅಜ್ಜಿಯ ಉತ್ಸಾಹ, ಅವರ ಮುಖದಲ್ಲಿನ ಆ ಖುಷಿ, ನಿಜಕ್ಕೂ ಎಲ್ಲರಿಗೂ ಒಂದು ರೀತಿಯ ಸ್ಪೂರ್ತಿ. ವಯಸ್ಸಾಯಿತು ಅಂದಾಕ್ಷಣ ಯಾವುದಕ್ಕೂ ಹಿಂದೇಟು ಹಾಕಬೇಕಾಗಿಲ್ಲ ಅನ್ನೋದನ್ನು ಈ ಅಜ್ಜಿ ತೋರಿಸಿಕೊಟ್ಟಿದ್ದಾರೆ.

Grandma – ಮೊಮ್ಮಕ್ಕಳ ಜೊತೆಗೂಡಿ ಡ್ಯಾನ್ಸ್ ಧಮಾಕಾ!

@3tdancecrewpune ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಅದ್ಭುತ ವಿಡಿಯೋ ಹಂಚಿಕೊಳ್ಳಲಾಗಿದೆ. ಅಜ್ಜಿ ಡ್ಯಾನ್ಸ್ ಮಾಡುವಾಗ ಅವರ ಮೊಮ್ಮಕ್ಕಳೂ ಸಹ ಜೊತೆಗೂಡಿ, ಅಜ್ಜಿಗೆ ಸಾಥ್ ನೀಡಿದ್ದಾರೆ. ಆದರೆ, ಈ ವಿಡಿಯೋದಲ್ಲಿ ಅಜ್ಜಿಯ ಡ್ಯಾನ್ಸ್ ಮಾತ್ರ ಮುಖ್ಯ ಹೈಲೈಟ್. ಅವರ ಪ್ರತಿ ಸ್ಟೆಪ್, ಮುಖದಲ್ಲಿನ ನಗು, ಆ ಖುಷಿಯ ಭಾವ ಎಲ್ಲರನ್ನೂ ಆಕರ್ಷಿಸುತ್ತಿದೆ. ಎಷ್ಟೋ ಜನ ಈ ವಿಡಿಯೋವನ್ನು ಹಲವು ಬಾರಿ ನೋಡಿ ಮೆಚ್ಚಿಕೊಂಡಿದ್ದಾರೆ.

Read this also : Viral Video: ಥಾಯ್ ಹಾಡಿಗೆ ಸ್ಕೂಲ್ ಮಕ್ಕಳು ಮಾಡಿದ ಡ್ಯಾನ್ಸ್ ಗೆ ನೆಟಿಜನ್ ಗಳು ಫಿದಾ, ವೈರಲ್ ಆದ ವಿಡಿಯೋ….!

Grandma dancing at a Mehandi function with her grandchildren

Grandma – ವೈರಲ್ ವಿಡಿಯೋ: 7.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು!

ಈ ಸೂಪರ್ ಹಿಟ್ ಡ್ಯಾನ್ಸ್ ವಿಡಿಯೋ (Dance video) ಈಗಾಗಲೇ 7.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಅಜ್ಜಿಯ ಡ್ಯಾನ್ಸ್‌ಗೆ ಸಂಪೂರ್ಣವಾಗಿ ಫಿದಾ ಆಗಿದ್ದಾರೆ. “ಈ ಅಜ್ಜಿ 20 ವರ್ಷದವರಾಗಿದ್ದಾಗ ಹೇಗಿದ್ದಿರಬಹುದು ಒಮ್ಮೆ ಊಹಿಸಿ!” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಅಜ್ಜಿಯ ಡ್ಯಾನ್ಸ್ ನೋಡಿದರೆ ನಮಗೂ ಕುಣಿಯಬೇಕು ಅನಿಸುತ್ತದೆ, ಅಜ್ಜಿ ಮುಂದೆ ನಮ್ಮ ಡ್ಯಾನ್ಸ್ ಏನು ಅಲ್ಲ!” ಎಂದು ಬರೆದಿದ್ದಾರೆ. ಮತ್ತೊಬ್ಬರಂತೂ, “ಅಜ್ಜಿ ರಾಕ್, ಫ್ಯಾಮಿಲಿ ಶಾಕ್!” ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top