ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಸಿನಿರಂಗದಲ್ಲಿ ಕಷ್ಟಪಟ್ಟು ಸಾಧನೆ ಮಾಡಿದ ನಟ ಕಂ ನಿರ್ದೇಶಕ ರಾಘವ ಲಾರೆನ್ಸ್ ಸಿನೆಮಾಗಳ ಜೊತೆಗೆ ಸಮಾಜ ಸೇವೆ ಮಾಡುತ್ತಾ ಖ್ಯಾತಿ ಗಳಿಸಿದ್ದಾರೆ. ಬಡ ಕುಟುಂಬದಿಂದ ಬಂದಂತಹ ರಾಘವ ಲಾರೆನ್ಸ್ ಸ್ವಂತ ಪ್ರತಿಭೆಯಿಂದಲೇ ಖ್ಯಾತಿ ಪಡೆದುಕೊಂಡು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಇನ್ನೂ ಸಿನೆಮಾಗಳ ಮೂಲಕ ತಾನು ಸಂಪಾದನೆ ಮಾಡಿದ ಹಣದಲ್ಲಿ ಸಮಾಜ ಸೇವೆ ಮಾಡುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಇದೀಗ ತಮಿಳುನಾಡಿನ ಕೆಲ ಆಟೋ ಚಾಲಕಿಯರ ಸಾಲವನ್ನು ತೀರಿಸಿ ಮಾನವೀಯತೆ ಮರೆದಿದ್ದಾರೆ.
ಸುಮಾರು ವರ್ಷಗಳಿಂದ ಅನೇಕ ಬಡವರಿಗೆ, ರೈತರಿಗೆ ಸಹಾಯ ಮಾಡುತ್ತಾ ಬರುತ್ತಿರುವ ನಟ, ನಿರ್ದೇಶಕ, ನೃತ್ಯ ನಿರ್ದೇಶಕ ರಾಘವ ಲಾರೆನ್ಸ್, ಕಾರ್ಮಿಕರ ದಿನಾಚರಣೆಯಂದು ರೈತರಿಗೆ ಹತ್ತು ಟ್ರಾಕ್ಟರ್ ಗಳನ್ನು ಉಡುಗೊರೆಯಾಗಿ ನೀಡಿದ್ದರು, ಅದಕ್ಕೂ ಮುನ್ನಾ ವಿಶೇಷಚೇತನರಿಗೆ ಬೈಕ್ ಗಳನ್ನು ನೀಡಿದ್ದರು. ಈ ಸಂಬಂಧ ಅವರು ವಿಡಿಯೋಗಳನ್ನು ತಮ್ಮ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋಗಳನ್ನು ನೋಡಿದ ಅನೇಕರು ರಾಘವ ಲಾರೆನ್ಸ್ ರವರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಮತ್ತೊಮ್ಮೆ ರಾಘವ ಲಾರೆನ್ಸ್ ಬಡ ಆಟೋ ಚಾಲಕಿಯರಿಗೆ ಸಹಾಯ ಮಾಡಿದ್ದಾರೆ.
ನಟ ರಾಘವ ಲಾರೆನ್ಸ್ ಹಾಗೂ ಖ್ಯಾತ ಯೂಟ್ಯೂಬರ್ ಬಾಲಾ ಎಂಬುವವರು ಇದೀಗ ಸಮಾಜ ಸೇವೆ ಮಾಡಿದ್ದಾರೆ. ಅನೇಕ ಸಿನೆಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಪೋಷಣೆ ಮಾಡಿದ ಬಾಲಾ ಇದೀಗ ಯುಟ್ಯೂಬ್ ನಲ್ಲಿ ಫೇಮಸ್ ಆಗಿದ್ದಾರೆ. ರಾಘವ ಲಾರೆನ್ಸ್ ರವರ ಜೊತೆಗೂಡಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿರುತ್ತಾರೆ. ಈ ಹಿಂದೆ ಅವರಿಬ್ಬರು ಸೇರಿ ಸಿಂಗಲ್ ಪೇರೆಂಟ್ ಮಹಿಳೆಯೊಬ್ಬರಿಗೆ ಆಟೋ ಒಂದನ್ನು ಖರೀದಿಸಿಕೊಟ್ಟಿದ್ದರು. ಇದೀಗ ಮತ್ತೊಮ್ಮೆ ರಾಘವ ಲಾರೆನ್ಸ್ ಹಾಗೂ ಬಾಲಾ ಆಟೋ ಚಾಲಕೀಯರ ಸಾಲ ತೀರಿಸಲು ಮುಂದಾಗಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಘವ್ ಲಾರೆನ್ಸ್ ಹಾಗೂ ಬಾಲ ಹತ್ತು ಮಂದಿ ಆಟೋ ಚಾಲಕಿಯರ ಸಾಲವನ್ನು ತೀರಿಸಿ, ಸಾಲ ತೀರಿಸಿದ ದಾಖಲೆಯನ್ನು ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ರಾಘವ ನೀಡಿದಂತಹ ಈ ಸಹಾಯಕ್ಕೆ ಆ ಆಟೋ ಚಾಲಕಿಯರು ಖುಷಿಯಿಂದ ಕಣ್ಣಿರಾಕಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಮೂಲತಃ ರಾಘವ ಲಾರೆನ್ಸ್ ರವರು ಬಡಕುಟುಂಬದಿಂದ ಬಂದವರು. ಕಿರಿ ವಯಸ್ಸಿನಲ್ಲಿಯೇ ಕಾರು ತೊಳೆಯುವ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಬಳಿಕ ತಮ್ಮಲ್ಲಿರುವ ಡ್ಯಾನ್ಸ್ ಕಲೆಯಿಂದ ಸಿನಿರಂಗಕ್ಕೆ ಸೇರಿಕೊಂಡು ಕೊರಿಯೋಗ್ರಾಫರ್ ಆದರು. ಬಳಿಕ ನಟರಾಗಿ, ನಿರ್ದೇಶಕರಾಗಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.