Viral News – ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದರೆ ನಗು ಬರುತ್ತದೆ. ಆದರೆ ಇಂತಹ ಘಟನೆಗಳು ಕೆಲವರನ್ನು ದುಃಖಕ್ಕೆ ದೂಡುತ್ತವೆ. ಇತ್ತೀಚೆಗಷ್ಟೇ ಮದುವೆಗೂ ಮುನ್ನ ವಧು ತನ್ನ ಭಾವಿ ಪತಿಯೊಂದಿಗೆ ಪರಾರಿಯಾದ ಘಟನೆಯನ್ನು ನಾವು ನೋಡಿದ್ದೇವೆ. ಆದರೆ ಈಗ ನಡೆದ ಘಟನೆಯ ಬಗ್ಗೆ ತಿಳಿದರೆ, ಮೊದಲು ನೀವು ನಗುತ್ತೀರಾ, ಆದರೆ ನಂತರ ಖಂಡಿತವಾಗಿಯೂ ಆಘಾತಕ್ಕೊಳಗಾಗುತ್ತೀರಿ.
Viral News – ನಿಖಾ ಬಳಿಕ ವಧುವನ್ನು ನೋಡಿದ ವರನಿಗೆ ಶಾಕ್?
ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಈ ಘಟನೆಯು ಮದುವೆಯಾಗಲು ಕನಸು ಕಂಡಿದ್ದ ಯುವಕನಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಮದುವೆಗೆಂದು ಹುಡುಗಿಯನ್ನು ತೋರಿಸಿ, ಕೊನೆಗೆ ಆಕೆಯ ತಾಯಿಯೊಂದಿಗೆ ಮದುವೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ಮೀರತ್ ನ ಬ್ರಹ್ಮಪುರಿಗೆ ಸೇರಿದ 22 ವರ್ಷದ ಮೊಹಮ್ಮದ್ ಅಜೀಮ್ ಎಂಬ ಯುವಕನಿಗೆ ಮದುವೆಯಾಗಬೇಕೆಂದು ಆಸೆಯಿತ್ತು. ಆತನ ಕುಟುಂಬದವರು ಶಾಮ್ಲಿ ಜಿಲ್ಲೆಯ ಮನ್ತಾಶಾ ಎಂಬ ಯುವತಿಯನ್ನು ಮದುವೆಗೆಂದು ಗೊತ್ತುಪಡಿಸಿದ್ದರು. ಮನ್ತಾಶಾಳ ಸಹೋದರ ನದೀಮ್ ಮತ್ತು ಆತನ ಪತ್ನಿ ಶಾಯೆದಾ ಈ ಮದುವೆಯನ್ನು ನಿಶ್ಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದು ಮಾರ್ಚ್ 31 ರಂದು ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು. ಅದ್ದೂರಿಯಾಗಿ ಮದುವೆ ಸಮಾರಂಭವು ನೆರವೇರಿತು. ಆದರೆ ಮದುವೆಯ ವಿಧಿಗಳು ಮುಗಿದ ನಂತರ ವರ ಅಜೀಮ್ ವಧುವಿನ ಪರದೆಯನ್ನು ತೆರೆದು ನೋಡಿದಾಗ ಆಘಾತಕ್ಕೊಳಗಾದನು. ಅಲ್ಲಿ ಮನ್ತಾಶಾ ಬದಲು ಆಕೆಯ ತಾಯಿ ಕುಳಿತಿದ್ದಳು. Read this also : Marriage : ಮದುವೆ ರಿಸೆಪ್ಷನ್ ದಿನದಂದೆ ಸಿನಿಮೀಯ ರೀತಿಯಲ್ಲಿ ಲವರ್ ಜೊತೆ ಪರಾರರಿಯಾದ ವಧು….!
Viral News – ಪ್ರಶ್ನಿಸಿದ ವರನಿಗೆ ಬೆದರಿಕೆ!
ವಧುವಿನ ಸ್ಥಾನದಲ್ಲಿ ವಧುವಿನ ತಾಯಿಯನ್ನು ಕಂಡು ಶಾಕ್ ಆದ ಅಜೀಮ್, ಕೂಡಲೇ ವಧುವಿನ ಕಡೆಯವರನ್ನು ಪ್ರಶ್ನಿಸಿದನು. ಆಗ ಮನ್ತಾಶಾಳ ಸಹೋದರ ನದೀಮ್ ಮತ್ತು ಆತನ ಪತ್ನಿ ಶಾಯೆದಾ, “ನೀನು ಇವಳೊಂದಿಗೆ ಸಂಸಾರ ಮಾಡಬೇಕು, ಇಲ್ಲದಿದ್ದರೆ ನಿನ್ನ ಮೇಲೆ ಅತ್ಯಾಚಾರದ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ಅಜೀಮ್ ಆರೋಪಿಸಿದ್ದಾನೆ.
Viral News – ಪೊಲೀಸರಿಗೆ ದೂರು, ನಂತರ ರಾಜಿ!
ಬೆದರಿಕೆಗೆ ಹೆದರಿದ ಅಜೀಮ್ ಕೆಲವು ದಿನಗಳ ಕಾಲ ಮೌನವಾಗಿದ್ದನು. ಆದರೆ ಕಿರುಕುಳ ಹೆಚ್ಚಾದಾಗ ತಾನೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದನು. ಮದುವೆಗಾಗಿ 5 ಲಕ್ಷ ರೂಪಾಯಿಗಳನ್ನು ನೀಡಿದ್ದಾಗಿ ಮತ್ತು ಮಗಳೊಂದಿಗೆ ಮದುವೆ ಎಂದು ಹೇಳಿ ತಾಯಿಯೊಂದಿಗೆ ಮದುವೆ ಮಾಡಿಸಿ ವಂಚಿಸಿದ್ದಾರೆ ಎಂದು ದೂರಿದನು. ಅಲ್ಲದೆ, ಈ ಮೋಸವನ್ನು ಪ್ರಶ್ನಿಸಿದ್ದಕ್ಕೆ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದನು. ಪೊಲೀಸರು ಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸಿದ ನಂತರ ರಾಜಿ ಸಂಧಾನ ನಡೆದಿದೆ ಎಂದು ತಿಳಿದುಬಂದಿದೆ. ಅಜೀಮ್ ತನ್ನ ದೂರಿನ ಅರ್ಜಿಯನ್ನು ಹಿಂಪಡೆದಿದ್ದಾನೆ ಎಂದು ಹೇಳಲಾಗಿದೆ.