ತಡವಾಗಿ ಬಂದ ಶಿಕ್ಷಕಿ ಹಾಗೂ ಪ್ರಿನ್ಸಿಪಾಲ್ ನಡುವೆ WWE ಮಾದರಿ ಡಿಶ್ಯುಂ ಡಿಶ್ಯುಂ…..!

ಸೋಷಿಯಲ್ ಮಿಡಿಯಾ ಪುಣ್ಯ ಎಂಬಂತೆ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಕ್ಷಣದಲ್ಲೇ ತಿಳಿಯುತ್ತದೆ. ಆಗ್ರಾದ ಶಾಲೆಯೊಂದರಲ್ಲಿ ಶಿಕ್ಷಕಿ ಹಾಗೂ ಪ್ರಿನ್ಸಿಪಾಲ್ ನಡುವೆ ಗುದ್ದಾಟ ನಡೆದಿದೆ. ಶಾಲೆಗೆ  ತಡವಾಗಿ ಬಂದಿದ್ದ ಶಿಕ್ಷಕಿ ಹಾಗೂ ಪ್ರಾಂಶುಪಾಲೆ ನಡುವೆ ಜಗಳ ನಡೆದಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಎಲ್ಲಾ ಕಡೆ ಅವರ ವರ್ತನೆಗೆ ವಿಮರ್ಶೆ ವ್ಯಕ್ತವಾಗುತ್ತಿದೆ.

teacher and principal fighting 1

ಉತ್ತರ ಪ್ರದೇಶದ ಆಗ್ರಾದ ಪ್ರಾಥಮಿಕ ಶಾಲೆಯೊಂದರ ಪ್ರಾಂಶುಪಾಲೆ ಹಾಗೂ ಶಿಕ್ಷಕಿಯ ನಡುವೆ ಗಲಾಟೆ ನಡೆದಿದೆ. ಶಾಲೆಯ ಶಿಕ್ಷಕಿ ತಡವಾಗಿ ಬಂದ ಕಾರಣದಿಂದ ಕೋಪಗೊಂಡ ಪ್ರಿನ್ಸಿಪಾಲ್ ಶಿಕ್ಷಕಿಯ ಬಟ್ಟೆ ಹಿಡಿದೆಳೆದು ಮನಬದ್ದಂತೆ ಥಳಿಸಿದ್ದಾರೆ. ಬಳಿಕ ಇಬ್ಬರ ನಡುವೆ ಗುದ್ದಾಟ ನಡೆದಿದೆ. ಕಳೆದ ಮೇ.3 ರಂದು ಈ ಘಟನೆ ನಡೆದಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಒಂದೇ ದಿನದಲ್ಲಿ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ತಡವಾಗಿ ಬಂದ ಶಿಕ್ಷಕಿ ಗುಂಜಾ ಚೌದರಿಯನ್ನು ಶಾಲೆಗೆ ಏಕೆ ತಡವಾಗಿ ಬಂದೆ ಎಂದು ಪ್ರಿನ್ಸಿಪಾಲ್ ಪ್ರಶ್ನೆ ಮಾಡಿದ್ದಾರೆ. ಈ ನಡುವೆ ಇಬ್ಬರ ನಡುವೆ ತೀವ್ರ ವಾಗ್ದಾಳಿ ನಡೆದಿದೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ದೈಹಿಕವಾಗಿ ಹೊಡೆದುಕೊಳ್ಳುವ ಹಂತಕ್ಕೆ ತಲುಪಿದೆ.

ಇನ್ನೂ ಈ ಘರ್ಷಣೆ ನಡೆಯುವಾಗ ಸ್ಥಳದಲ್ಲಿದ್ದ ಇತರೆ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನು ಬೇರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೂ ಅವರ ಜಗಳ ನಿಂತಿಲ್ಲ. ಹಿಗ್ಗಾ,ಮುಗ್ಗಾ ಹೊಡೆದುಕೊಂಡಿದ್ದಾರೆ. ಬಳಿಕ ಇಬ್ಬರೂ ಸಿಕಂದರಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇಬ್ಬರ ಕಡೆಯಿಂದ ದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಎಲ್ಲಾ ಕಡೆ ವೈರಲ್ ಆಗುತ್ತಿತ್ತು. ಪಾಠ ಹೇಳಿಕೊಡುವಂತಹ ಶಿಕ್ಷಕರೇ ಈ ರೀತಿಯಲ್ಲಿ ವರ್ತಿಸಿದರೇ ಮಕ್ಕಳಿಗೆ ಯಾವ ರೀತಿ ಎಂತಹ ಪಾಠಗಳನ್ನು ಕಲಿಸುತ್ತಾರೆ ಎಂಬ ಆಕ್ರೋಷ ವ್ಯಕ್ತವಾಗುತ್ತಿದೆ.

Leave a Comment

Your email address will not be published. Required fields are marked *

Scroll to Top