HomeStateJanivara Controversy : ಜನಿವಾರ ತೆಗಿಸಿದ್ದು, ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದಂತೆ: ನಿರಂಜನ್ ಆಕ್ರೋಷ...!

Janivara Controversy : ಜನಿವಾರ ತೆಗಿಸಿದ್ದು, ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದಂತೆ: ನಿರಂಜನ್ ಆಕ್ರೋಷ…!

Janivara Controversy – ಸಿಇಟಿ (CET – Common Entrance Test) ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಕೊರಳಿನಲ್ಲಿದ್ದ ಪವಿತ್ರ ಜನಿವಾರವನ್ನು ತೆಗೆದುಹಾಕಿರುವ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಅಮಾನವೀಯ ಕೃತ್ಯವನ್ನು ಗುಡಿಬಂಡೆ ಬ್ರಾಹ್ಮಣ ಅಭಿವೃದ್ಧಿ ಟ್ರಸ್ಟ್‌ನ ನಿರ್ದೇಶಕ ನಿರಂಜನ್ ಅವರು ತೀವ್ರವಾಗಿ ಖಂಡಿಸಿದ್ದು, ಇದು ಬ್ರಾಹ್ಮಣ ಸಮುದಾಯದ ಧಾರ್ಮಿಕ ಆಚರಣೆಗೆ ಮಾಡಿದ ಘೋರ ಅಪಮಾನ ಎಂದು ಕಿಡಿಕಾರಿದ್ದಾರೆ. ಈ ಕುರಿತು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Janivara Controversy - Brahmin community members protesting in Gudibande against the removal of Janivara during the CET exam

Janivara Controversy – ಜನಿವಾರ ತೆಗೆಸಿದ್ದು ಸರಿಯಲ್ಲ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುಡಿಬಂಡೆ ಬ್ರಾಹ್ಮಣ ಅಭಿವೃದ್ದಿ ಟ್ರಸ್ಟ್ ವತಿಯಿಂದ ಸಿಇಟಿ ಪರೀಕ್ಷೆಯ ಸಮಯದಲ್ಲಿ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬ್ರಾಹ್ಮಣ ವಿದ್ಯಾರ್ಥಿ ಕೊರಳಲ್ಲಿನ ಯಜ್ಞೋಪವೀತವನ್ನು ಕತ್ತರಿಸಿ ತೆಗೆದ್ದಿದ್ದು ಖಂಡನಾರ್ಹವಾದುದು. ಈ ಕೃತ್ಯ ಮಾಡಿದ ಅಧಿಕಾರಿಗೆ ತಕ್ಷಣವೆ ವಜಾಗೊಳಿಸಿ ತನಿಖೆ ಮಾಡಬೇಕು. ಬ್ರಾಹ್ಮಣನು ಜನಿವಾರವನ್ನು ಬದಲಿಸುವುದಕ್ಕೂ ಸಹ ಅದರದೇ ಆದಂತಹ ನಿಯಮಗಳು ಹಾಗೂ ಸಂದರ್ಭಗಳಿವೆ. ಹಾಗಾಗಿ ಈ ಕೃತ್ಯ ಮಾಡಿದ್ದು ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವುಂಟು ಮಾಡಿದೆ. ಕೂಡಲೇ ಕೆಇಎ ಹಾಗೂ ಸರ್ಕಾರ ಪರೀಕ್ಷಾ ವಂಚಿತ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಸಹ ಮಾಡಬೇಕು ಎಂದು ಒತ್ತಾಯಿಸಿದರು.

Janivara Controversy - Brahmin community members protesting in Gudibande against the removal of Janivara during the CET exam

Janivara Controversy – ಕ್ರಮ ತೆಗೆದುಕೊಳ್ಳದೇ ಇದ್ದರೇ, ಉಗ್ರ ಹೋರಾಟ?

ಬಳಿಕ ಟ್ರಸ್ಟ್ ನ ಉಪಾಧ್ಯಕ್ಷ ಗು.ನ.ನಾಗೇಂದ್ರ ಮಾತನಾಡಿ, ಜನಿವಾರ ಹಾಕಿದ್ದಕ್ಕೆ ಪರೀಕ್ಷೆಗೆ ಕೂರಿಸದೇ ಇರುವುದು ಸರಿಯಲ್ಲ.  ಜನಿವಾರ ಹಾಕಿಕೊಂಡು ಕಾಪಿ ಹೊಡೆಯೋಕೆ ಆಗುತ್ತಾ? ಜನಿವಾರ ಇದ್ದರೆ ಏನು ಸಮಸ್ಯೆ ಅಂತ ಪ್ರಶ್ನೆ ಮಾಡಿದರು. ಜನಿವಾರ ಎನ್ನುವುದು ಬ್ರಾಹ್ಮಣರ ಆಸ್ಮಿತೆ, ವಿಪ್ರ ಕುಟುಂಬದ ಪ್ರತಿಯೊಬ್ಬ ಗಂಡು ಮಗುವಿಗೆ 8 ವರ್ಷದಲ್ಲೆ ಬ್ರಹ್ಮೋಪದೇಶ ಮಾಡಿ ಗುರುಹಿರಿಯರು ಸಮಾಜವನ್ನು ರಕ್ಷಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವಂತೆ ಗಾಯತ್ರಿ ಮಂತ್ರದ ಮೂಲಕ ಉಪದೇಶ ಮಾಡಿರುತ್ತಾರೆ. ಅಂತಹ ಜನಿವಾರವನ್ನು ತೆಗೆಸಿ ಇಡೀ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗೆ ಅನ್ಯಾಯ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮತ್ತಷ್ಟು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಆಕ್ರೋಷ ಹೊರಹಾಕಿದರು. ಇದನ್ನೂ ಓದಿ : CET Exam : ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿವಾದ – ಪರೀಕ್ಷೆಯ ವಸ್ತ್ರ ಸಂಹಿತಿ ಏನು ಹೇಳುತ್ತೆ? ಈ ಸುದ್ದಿ ಓದಿ…!

Janivara Controversy – ಪ್ರತಿಭಟನೆಯಲ್ಲಿ ಹಾಜರಿದ್ದವರು

ಪ್ರತಿಭಟನೆಯ ನಂತರ, ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಮನವಿ ಪತ್ರದಲ್ಲಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.. ಈ ಸಮಯದಲ್ಲಿ ಗುಡಿಬಂಡೆ ಬ್ರಾಹ್ಮಣ ಅಭಿವೃದ್ದಿ ಟ್ರಸ್ಟ್ ನ ಪದಾಧಿಕಾರಿಗಳಾದ ವೇಣುಗೋಪಾಲ, ಆರ್‍.ಕೆ.ಪ್ರಸಾದ್, ವಾಹಿನಿ ಸುರೇಶ್, ಜಿ.ಎಸ್.ಸುರೇಶ್, ಶಂಕರ್‍, ವಿಜಯ್ ಕುಮಾರ್‍, ಪ್ರಭಾಕರ್‍, ಶರತ್, ಲ್ಯಾಬ್ ನಾಗರಾಜ್, ರಾಜಶೇಖರ್‍, ಸೂರ್ಯನಾರಾಯಣರಾವ್ ಸೇರಿದಂತೆ ಹಲವರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular