Karnataka 2nd PUC Result ಪ್ರಕಟ: ಉಡುಪಿ ಮೊದಲು, ದಕ್ಷಿಣ ಕನ್ನಡ ಎರಡನೇ ಸ್ಥಾನ, ಫೇಲ್ ಆದರೆ ಚಿಂತೆ ಬೇಡ: ಪರೀಕ್ಷೆ-2 ವೇಳಾಪಟ್ಟಿ ಇಲ್ಲಿದೆ…!

Karnataka – ಕರ್ನಾಟಕದ 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ (Karnataka 2nd PUC Result) ಇಂದು (ಏಪ್ರಿಲ್ 08, 2025) ಪ್ರಕಟಗೊಂಡಿದೆ. ಈ ಬಾರಿ ರಾಜ್ಯದಲ್ಲಿ ಒಟ್ಟು 73.45% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ 6,37,805 ವಿದ್ಯಾರ್ಥಿಗಳಲ್ಲಿ 4,68,439 ಮಂದಿ ತೇರ್ಗಡೆಯಾಗಿದ್ದಾರೆ. ಫಲಿತಾಂಶದಲ್ಲಿ ಉಡುಪಿ ಜಿಲ್ಲೆ 93.90% ಸಾಧನೆಯೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ. ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ (93.57%) ಪಡೆದರೆ, ಮೂರನೇ ಸ್ಥಾನಕ್ಕೆ ಬೆಂಗಳೂರು ದಕ್ಷಿಣ (85.36%) ತೃಪ್ತಿಪಟ್ಟಿದೆ. ಆದರೆ ಯಾದಗಿರಿ ಜಿಲ್ಲೆ 73.45% ಜೊತೆಗೆ ಕೊನೆಯ ಸ್ಥಾನದಲ್ಲಿದೆ.

Karnataka 2nd PUC Result – ಶ್ರೇಣಿವಾರು ಉತ್ತೀರ್ಣರ ಸಂಖ್ಯೆ:

  • ಉನ್ನತ ಶ್ರೇಣಿ: 1,00,571
  • ಪ್ರಥಮ ದರ್ಜೆ: 2,78,054
  • ದ್ವಿತೀಯ ದರ್ಜೆ: 70,969
  • ತೃತೀಯ ದರ್ಜೆ: 18,845

ವಿಭಾಗವಾರು ಸಾಧನೆ:

  • ಕಲಾ ವಿಭಾಗ: 1,53,043 ಹಾಜರಾದವರಲ್ಲಿ 81,533 (53.79%) ಉತ್ತೀರ್ಣ
  • ವಾಣಿಜ್ಯ ವಿಭಾಗ: 2,04,329 ಹಾಜರಾದವರಲ್ಲಿ 1,55,425 (76.07%) ಉತ್ತೀರ್ಣ
  • ವಿಜ್ಞಾನ ವಿಭಾಗ: 2,80,433 ಹಾಜರಾದವರಲ್ಲಿ 2,31,461 (82.54%) ಉತ್ತೀರ್ಣ

ಮಾಧ್ಯಮವಾರು ಫಲಿತಾಂಶ:

  • ಕನ್ನಡ ಮಾಧ್ಯಮ: 2,08,794 ಹಾಜರಾದವರಲ್ಲಿ 1,17,703 (56.37%) ತೇರ್ಗಡೆ
  • ಇಂಗ್ಲೀಷ್ ಮಾಧ್ಯಮ: 4,29,011 ಹಾಜರಾದವರಲ್ಲಿ 3,50,736 (81.75%) ತೇರ್ಗಡೆ

ಇಂದು (April -8) ಮಧ್ಯಾಹ್ನ 12:45ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಲ್ಲೇಶ್ವರಂನ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿದರು. ಮಧ್ಯಾಹ್ನ 1:30ರಿಂದ www.karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ಪರೀಕ್ಷೆಯ ಹಿನ್ನೆಲೆ:

ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ ಮಾರ್ಚ್ 20, 2025ರವರೆಗೆ ನಡೆದಿತ್ತು. ಒಟ್ಟು 7.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ತ್ವರಿತಗತಿಯಲ್ಲಿ ಪೂರ್ಣಗೊಂಡು ಇಂದು ಫಲಿತಾಂಶ ಬಿಡುಗಡೆಯಾಗಿದೆ.

Karnataka 2nd PUC Result – Rank ವಿಜೇತರು: ಅಮೂಲ್ಯ ಕಾಮತ್‌ಗೆ ಮೊದಲ ಸ್ಥಾನ!

ವಿಜ್ಞಾನ ವಿಭಾಗ:

  • ಅಮೂಲ್ಯ ಕಾಮತ್ (ದಕ್ಷಿಣ ಕನ್ನಡ, ಎಕ್ಸ್‌ಪರ್ಟ್ ಪಿಯು ಕಾಲೇಜು): 600ಕ್ಕೆ 599 ಅಂಕ, ಮೊದಲ ರ್ಯಾಂಕ್
  • ಆರ್. ದೀಕ್ಷಾ (ಶಿವಮೊಗ್ಗ, ವಾಗ್ದೇವಿ ಪಿಯು ಕಾಲೇಜು): 600ಕ್ಕೆ 599 ಅಂಕ, ಎರಡನೇ ರ್ಯಾಂಕ್
  • ಬಿಂದು ನವಲೆ: 600ಕ್ಕೆ 598 ಅಂಕ, ಮೂರನೇ ರ್ಯಾಂಕ್

ವಾಣಿಜ್ಯ ವಿಭಾಗ:

  • ದೀಪಶ್ರೀ (ದಕ್ಷಿಣ ಕನ್ನಡ, ಕೆನರಾ ಪಿಯು ಕಾಲೇಜು): 600ಕ್ಕೆ 599 ಅಂಕ, ಮೊದಲ ರ್ಯಾಂಕ್
  • ಎಂ.ಎ. ತೇಜಸ್ವಿನಿ (ಮೈಸೂರು, ಕೊಪ್ಪ ಭಾರತಮ್ಮ ಪಿಯು ಕಾಲೇಜು): 600ಕ್ಕೆ 598 ಅಂಕ, ಎರಡನೇ ರ್ಯಾಂಕ್

ಕಲಾ ವಿಭಾಗ:

  • ಸಂಜನಾ ಬಾಯಿ (ಬಳ್ಳಾರಿ, ಇಂದು ಪಿಯು ಕಾಲೇಜು): 600ಕ್ಕೆ 597 ಅಂಕ, ಮೊದಲ ರ್ಯಾಂಕ್
  • ಕೆ. ನಿರ್ಮಲಾ (ಬಳ್ಳಾರಿ, ಶ್ರೀಪಂಚಮಸಾಲಿ ಪಿಯು ಕಾಲೇಜು): 600ಕ್ಕೆ 596 ಅಂಕ, ಎರಡನೇ ರ್ಯಾಂಕ್

Karnataka 2nd PUC Result – ಫೇಲ್ ಆದರೆ ಚಿಂತೆ ಬೇಡ: ಪರೀಕ್ಷೆ-2 ವೇಳಾಪಟ್ಟಿ ಇಲ್ಲಿದೆ!

ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಚಿಂತೆಯಿಲ್ಲ! ದ್ವಿತೀಯ ಪಿಯುಸಿ ಪರೀಕ್ಷೆ-2 (2nd PUC Exam-2) ವೇಳಾಪಟ್ಟಿ ಪ್ರಕಟವಾಗಿದ್ದು, ಏಪ್ರಿಲ್ 24 ರಿಂದ ಮೇ 8, 2025ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಅವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮಗೊಳಿಸಬಹುದು.

ಪರೀಕ್ಷೆ-2 ವೇಳಾಪಟ್ಟಿ:

  • 24-04-25: ಕನ್ನಡ, ಅರೇಬಿಕ್
  • 25-04-25: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
  • 26-04-25: ಇತಿಹಾಸ, ಭೌತಶಾಸ್ತ್ರ
  • 28-04-25: ಭೂಗೋಳಶಾಸ್ತ್ರ, ಮನಶಾಸ್ತ್ರ, ರಸಾಯನಶಾಸ್ತ್ರ
  • 29-04-25: ಇಂಗ್ಲೀಷ್
  • 02-05-25: ತರ್ಕಶಾಸ್ತ್ರ, ವ್ಯವಹಾರ ಶಾಸ್ತ್ರ, ಗಣಿತ
  • 05-05-25: ಅರ್ಥಶಾಸ್ತ್ರ

ಪೂರ್ಣ ವೇಳಾಪಟ್ಟಿಗಾಗಿ www.karresults.nic.in ಚೆಕ್ ಮಾಡಿ!

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top