HomeSpecialEPFO ಹೊಸ ನಿಯಮಗಳು: 3 ದಿನಗಳಲ್ಲಿ PF ಹಣ ನಿಮ್ಮ ಖಾತೆಗೆ? ಇಲ್ಲಿದೆ ವಿವರ....!

EPFO ಹೊಸ ನಿಯಮಗಳು: 3 ದಿನಗಳಲ್ಲಿ PF ಹಣ ನಿಮ್ಮ ಖಾತೆಗೆ? ಇಲ್ಲಿದೆ ವಿವರ….!

EPFO – ಏಪ್ರಿಲ್ 1, 2025 ರಿಂದ EPFO (ನೌಕರರ ಭವಿಷ್ಯ ನಿಧಿ ಸಂಸ್ಥೆ) ಹೊಸ ನಿಯಮಗಳನ್ನು ಅನುಸರಿಸಲಿದೆ. ಇದರ ಪ್ರಕಾರ, PF ಹಣ ವಿತರಣೆ ಇನ್ನೂ ವೇಗವಾಗಿ ಮತ್ತು ಸುಗಮವಾಗಿ ನಡೆಯಲಿದೆ. ಕೇವಲ 3 ದಿನಗಳಲ್ಲಿ ನಿಮ್ಮ PF ವಿತ್ಡ್ರಾ ವ್ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ ಎಂದು EPFO ಘೋಷಿಸಿದೆ. ಇದರೊಂದಿಗೆ, PF ವಿತರಣೆ, PF ವರ್ಗಾವಣೆ, PF ಕ್ಲೈಮ್ ಮತ್ತು KYC ನವೀಕರಣ ಪ್ರಕ್ರಿಯೆಗಳನ್ನು ಸುಲಭಗೊಳಿಸಲಾಗಿದೆ.

EPFO ಹೊಸ ನಿಯಮಗಳು: 1 ಲಕ್ಷ ರೂ.ವರೆಗೆ 3 ದಿನಗಳಲ್ಲಿ PF ಹಣ

ಇದುವರೆಗೆ, EPF ಕ್ಲೈಮ್ ಪ್ರಕ್ರಿಯೆಗೆ ಹಲವಾರು ದಿನಗಳು ಬೇಕಾಗುತ್ತಿದ್ದವು. ಆದರೆ, ಹೊಸ ನಿಯಮಗಳ ಪ್ರಕಾರ, 1 ಲಕ್ಷ ರೂಪಾಯಿ ವರೆಗಿನ PF ವಿತ್ಡ್ರಾ ವ್ ಅರ್ಜಿಗಳನ್ನು ಕೇವಲ 3 ದಿನಗಳಲ್ಲಿ ಸ್ವಯಂಚಾಲಿತವಾಗಿ ಮಂಜೂರು ಮಾಡಲಾಗುತ್ತದೆ. ಇದು ವಿಶೇಷವಾಗಿ ಅನಾರೋಗ್ಯ, ಮದುವೆ, ಮನೆ ಖರೀದಿ, ಮಕ್ಕಳ ಶಿಕ್ಷಣ ಮತ್ತು ಆರ್ಜೆಂಟ್ ವೆಚ್ಚಗಳಿಗೆ ಅನುಕೂಲಕರವಾಗಿದೆ.

EPFO New Rules 2025 - PF Withdrawal Online in 3 Days | UPI Payment Option

ಹೆಸರು, ಬ್ಯಾಂಕ್ ಖಾತೆ ವಿವರ ಬದಲಾವಣೆ ಈಗ ಸುಲಭ

  • ಯುಎಎನ್ (UAN) ಆಧಾರ್ ಜೊತೆ ಲಿಂಕ್ ಮಾಡಿದವರು EPFO ಕಚೇರಿಗೆ ಹೋಗದೆ ಆನ್ಲೈನ್ನಲ್ಲಿ ತಮ್ಮ ಹೆಸರು, ಬ್ಯಾಂಕ್ ಖಾತೆ ವಿವರ, ಮೊಬೈಲ್ ನಂಬರ್ ಮತ್ತಿತರ KYC ವಿವರಗಳನ್ನು ನವೀಕರಿಸಬಹುದು.
  • ಪ್ರಸ್ತುತ, 96% ಬದಲಾವಣೆಗಳು ಬಿನಾ ಕಚೇರಿ ಭೇಟಿಯೇ ಪೂರ್ಣಗೊಳ್ಳುತ್ತಿವೆ.

PF ವರ್ಗಾವಣೆಗೆ ಇನ್ನು ಮ್ಯಾನೇಜ್ಮೆಂಟ್ ಅನುಮತಿ ಅಗತ್ಯವಿಲ್ಲ

  • ಹಿಂದೆ, ಹೊಸ ಕಂಪನಿಗೆ ಸೇರಿದಾಗ ಹಳೆಯ PF ಖಾತೆಯನ್ನು ವರ್ಗಾಯಿಸಲು ಕಂಪನಿ HR/ಮ್ಯಾನೇಜ್ಮೆಂಟ್ ಅನುಮತಿ ಅಗತ್ಯವಿತ್ತು.
  • ಆದರೆ ಈಗ, ಯುಎಎನ್ ಆಧಾರ್ ಲಿಂಕ್ ಇದ್ದರೆ 90% PF ವರ್ಗಾವಣೆಗಳು ಬಿನಾ ಮ್ಯಾನೇಜ್ಮೆಂಟ್ ಹಸ್ತಕ್ಷೇಪದಿಂದ ನಡೆಯುತ್ತಿವೆ.
ಚೆಕ್ ಲೀಫ್ ಅಥವಾ ಪಾಸ್ಬುಕ್ ಕಾಪಿ ಅಗತ್ಯವಿಲ್ಲ
  • ಹಿಂದೆ PF ಕ್ಲೈಮ್ ಸಲ್ಲಿಸುವಾಗ ಚೆಕ್ ಲೀಫ್ ಅಥವಾ ಬ್ಯಾಂಕ್ ಪಾಸ್ಬುಕ್ ಕಾಪಿ ಸಲ್ಲಿಸಬೇಕಾಗಿತ್ತು.
  • ಈಗ, KYC ಪೂರ್ಣಗೊಂಡಿದ್ದರೆ ಈ ಪ್ರಕ್ರಿಯೆ ಸ್ಕಿಪ್ ಮಾಡಬಹುದು.
EPFO ಕ್ಲೈಮ್ ಸ್ಟೇಟಸ್ ಚೆಕ್ ಮಾಡಿ, ಅನರ್ಹತೆ ತಪ್ಪಿಸಿ
  • PF ಹಣ ಪಡೆಯುವ ಮೊದಲು ನಿಮ್ಮ ಕ್ಲೈಮ್ ಅರ್ಹತೆ ಪರಿಶೀಲಿಸಬಹುದು.
  • ಇದರಿಂದ ತಿರಸ್ಕøಕ್ಲೈಮ್ಗಳು ಕಡಿಮೆಯಾಗುತ್ತದೆ.
99% PF ಕ್ಲೈಮ್ಗಳು ಈಗ ಆನ್ಲೈನ್!
  • 2024-25 ಹಣಕಾಸು ವರ್ಷದಲ್ಲಿ EPFOಗೆ 14 ಕೋಟಿ ಕ್ಲೈಮ್ಗಳು ಬಂದಿವೆ.
  • ಎಲ್ಲವೂ ಆನ್ಲೈನ್ ಮೂಲಕ ಸಲ್ಲಿಸಲ್ಪಟ್ಟಿವೆ. PF ಕಚೇರಿಗೆ ಹೋಗುವ ಅಗತ್ಯವಿಲ್ಲ.
EPFO New Rules 2025 - PF Withdrawal Online in 3 Days | UPI Payment Option
UPI ಮೂಲಕ PF ಪಾವತಿ ಶೀಘ್ರದಲ್ಲೇ!
  • EPFO ಈಗ NPCI (ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಜೊತೆ ಚರ್ಚೆ ನಡೆಸಿ UPI ಮೂಲಕ PF ಹಣ ಪಾವತಿ ವ್ಯವಸ್ಥೆಯನ್ನು ಶುರುವಿಸಲಿದೆ.
  • ಇದು ಜಾರಿಗೆ ಬಂದರೆ, PF ಹಣವನ್ನು ನೇರವಾಗಿ UPI ಡಿಜಿಟಲ್ ವ್ಯಾಲೆಟ್ಗೆ (PhonePe, Google Pay, Paytm) ಪಡೆಯಬಹುದು.
ಇದನ್ನೂ ಓದಿ: ATM ಮೂಲಕ ಕೇವಲ 2 ನಿಮಿಷಗಳಲ್ಲಿ ನಿಮ್ಮ PF ಹಣವನ್ನು ಹಿಂಪಡೆಯಿರಿ, ಹೇಗೆ ಗೊತ್ತಾ?
EPFO PF ಹೊಸ ನಿಯಮಗಳು: ಯಾರಿಗೆ ಲಾಭ?
  • ನೌಕರರು, PF ಸದಸ್ಯರು, ರಿಟೈರ್ಡ್ ಉದ್ಯೋಗಿಗಳು
  • ತ್ವರಿತ PF ವಿತ್ಡ್ರಾ ವ್, ಸುಲಭ PF ವರ್ಗಾವಣೆ ಬೇಕಿರುವವರು
  • ಕಂಪನಿಗಳ HR ಶಾಖೆಗಳು

ಈಗ EPF ಹಣ ಪಡೆಯಲು ಕಚೇರಿಗೆ ಹೋಗುವ ಅಗತ್ಯವಿಲ್ಲ. ಆನ್ಲೈನ್ PF ಕ್ಲೈಮ್, EPFO ಪೋರ್ಟಲ್, ಯುಎಎನ್ ನವೀಕರಣ ಮಾಡಿಕೊಂಡರೆ ಸಾಕು!

ಹೆಚ್ಚಿನ ಮಾಹಿತಿಗಾಗಿ EPFO ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular