Thursday, January 29, 2026
HomeNationalಹೆಚ್ಚಾದ ಬಿಸಿಲಿನ ತಾಪ, ಟ್ರಾಫಿಕ್ ಸಿಗ್ನಲ್ ಬಳಿ ಗ್ರೀನ್ ನೆಟ್, ಅಬ್ಬಾ ಎಂತಾ ಐಡಿಯಾ ಸರ್...

ಹೆಚ್ಚಾದ ಬಿಸಿಲಿನ ತಾಪ, ಟ್ರಾಫಿಕ್ ಸಿಗ್ನಲ್ ಬಳಿ ಗ್ರೀನ್ ನೆಟ್, ಅಬ್ಬಾ ಎಂತಾ ಐಡಿಯಾ ಸರ್ ಎಂದ ವಾಹನ ಸವಾರರು….!

ಸದ್ಯ ಭಾರತ ದೇಶದಾದ್ಯಂತ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಕೆಲವೊಂದು ಕಡೆ ಬಿಸಿಲಿನ ತಾಪ ತಾಳಲಾರದೆ ಮೃತಪಟ್ಟ ಘಟನೆಗಳು ಸಹ ನಡೆದಿದೆ. ಬೆಳಗ್ಗೆ 9 ರಿಂದಲೇ ಬಿಸಿಲಿನ ಕಾಟ ಶುರುವಾಗುತ್ತಿದೆ. ಫ್ಯಾನ್ ಗಳು, ಕೂಲರ್‍ ಗಳೂ ಸಹ ಈ ಬಿಸಿಲಿನ ಸಖೆಯಿಂದ ಪಾರು ಮಾಡಲು ಆಗುತ್ತಿಲ್ಲ ಎಂದೇ ಹೇಳಬಹುದು. ಬಿಸಿಲಿನ ಕಾರಣದಿಂದ ಜನರು ಹೊರಗೆ ಬರಲಾಗದೇ, ಮನೆಯಲ್ಲಿ ಇರಲಾಗದೆ ಪರಿತಪಿಸುತ್ತಿದ್ದಾರೆ. ಇದೀಗ ಪಾಂಡಿಚೆರಿಯಲ್ಲಿ ವಾಹನ ಸವಾರರಿಗಾಗಿ ಹೊಸ ಐಡಿಯಾ ಮಾಡಿದ್ದು, ಅಧಿಕಾರಿಗಳು ಮಾಡಿದ ಈ ಪ್ಲಾನ್ ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಅಧಿಕಾರಿಗಳು ಮಾಡಿದ ಪ್ಲಾನ್ ಆದರೂ ಏನು ಎಂಬ ವಿಚಾರಕ್ಕೆ ಬಂದರೇ,

green roof at traffic signals in puducherry

ನಗರ ಪ್ರದೇಶಗಳಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಪ್ರತಿ ಮನೆಯಲ್ಲೂ 2-3 ದ್ವಿಚಕ್ರ ವಾಹನಗಳಿರುತ್ತವೆ. ಯಾವುದೇ ರಸ್ತೆ ನೋಡಿದರೂ ವಾಹನಗಳಿಂದ ತುಂಬಿ ತುಳುಕುತ್ತಿವೆ. ಇದರಿಂದ ನಿತ್ಯ ನಗರಗಳಲ್ಲಿ ಸಂಚಾರ ದಟ್ಟಣೆ ತಪ್ಪುತ್ತಿಲ್ಲ. ಜೊತೆಗೆ ಸಿಗ್ನಲ್ ಬಿದ್ದರೇ ವಾಹನಗಳು ರಸ್ತೆಯಲ್ಲಿ ಕಾದು ನಿಲ್ಲಬೇಕಾಗುತ್ತದೆ. ಆದರೆ ಸದ್ಯ ಇರುವಂತಹ ಬಿಸಿಲಿನಲ್ಲಿ 5 ನಿಮಿಷ ಕೂಡ ನಿಲ್ಲೋಕೆ ಆಗೊಲ್ಲ. ದೇಶದ ಅನೇಕ ಕಡೆ ಸರಾಸರಿ ತಾಪಮಾನ 38-40 ಡಿಗ್ರಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿಲಿನಿಂದ ವಾಹನ ಸವಾರರ ಪರಿಸ್ಥಿತಿ ಸಹ ತೀವ್ರ ಹದಗೆಟ್ಟಿದೆ.

ವಾಹನ ಸವಾರರು ಮೇಲಿನ ಬಿಸಿಲಿನ ತಾಪ, ಕೆಳಗಿನ ರಸ್ತೆಯ ಸೆಖೆ, ಬದಿಯಿಂದ ವಾಹನಗಳ ತಾಪಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಸಿಗ್ನಲ್ ನಲ್ಲಿ ಒಂದು ನಿಮಿಷ ಸಹ ನಿಲ್ಲುವುದು ತುಂಬಾ ನರಕ ಅನುಭವಿಸುವಂತಾಗುತ್ತದೆ. ಈ ಸಮಸ್ಯೆಯನ್ನು ಅರಿತು ಪುದುಚೇರಿ ಸರ್ಕಾರ ಉತ್ತಮ ಪರಿಹಾರ ಕಂಡುಕೊಂಡಿದೆ. ಪುದುಚೇರಿಯಲ್ಲಿ ಟ್ರಾಫಿಕ್ ಸಿಗ್ನಲ್ ಗಳಿರುವ ನಾಲ್ಕು ಕಡೆ ಕೊಂಚ ದೂರದ ವರೆಗೆ ಹಸಿರು ಮ್ಯಾಟ್ ಕಟ್ಟಲಾಗುತ್ತಿದೆ. ಇದರಿಂದ ನೇರವಾಗಿ ಸೂರ್ಯನ ಬೆಳಕು ಸವಾರರ ಮೇಲೆ ಬೀಳದಂತೆ ಈ ಹಸಿರು ಬಟ್ಟೆ ತಡೆಯುತ್ತದೆ. ಇದರಿಂದ ಗ್ರೀನ್ ಸಿಗ್ನಲ್ ಬೀಳುವ ತನಕ ವಾಹನ ಸವಾರರು ಕೊಂಚ ತಂಪಿನ ವಾತಾವರಣ ನಿರ್ಮಾಣ ಮಾಡುವಂತೆ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ. ಟ್ರಾಫಿಕ್ ಸಿಗ್ನಲ್ ಗಳಲ್ಲಿ ಪುದುಚೇರಿಯ PWD ಇಲಾಖೆಯ ಅಧಿಕಾರಿಗಳು ಮಾಡಿದ ಈ ಪ್ಲಾನ್ ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತದೆ. ಬಿಸಿಲಿನ ತಾಪ ಹೆಚ್ಚಾಗಿರುವ ಕಡೆ ಈ ರೀತಿಯ ಪ್ಲಾನ್ ಮಾಡಿದರೇ ಉತ್ತಮ ಎಂದು ವಾಹನ ಸವಾರರು ಅಭಿಪ್ರಾಯ ಪಡುತ್ತಿದ್ದಾರೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular